ಇತ್ತೀಚಿನ ಸುದ್ದಿ
ತೀರ್ಥಹಳ್ಳಿ ರಥಬೀದಿಯಲ್ಲಿ ನೂತನ ಪೊಲೀಸ್ ಠಾಣೆ ನಾಳೆಯಿಂದ ಕಾರ್ಯಾರಂಭ
07/08/2024, 22:08
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ತೀರ್ಥಹಳ್ಳಿ ಪಟ್ಟಣದ ಹೃದಯ ಭಾಗದ ರಥಬೀದಿಯಲ್ಲಿ ಇತ್ತೀಚಿಗೆ ನೂತನ ಪೊಲೀಸ್ ಠಾಣೆ ಉದ್ಘಾಟನೆಗೊಂಡಿದ್ದು ನಾಳೆ ( ಆಗಸ್ಟ್ 8) ಗುರುವಾರ ದಿಂದ ಕೆಲಸ ಕಾರ್ಯಗಳು ಕಾರ್ಯಾರಂಭ ಮಾಡಲಿವೆ.
ಸಾರ್ವಜನಿಕರು ತಮ್ಮ ಅಗತ್ಯ ಕೆಲಸ ಕಾರ್ಯಗಳಿಗೆ, ಕುಂದು ಕೊರತೆ, ಹಾಗೂ ದೂರುಗಳನ್ನು ನೂತನ ಠಾಣೆಯಲ್ಲಿ ಸಲ್ಲಿಸಬಹುದಾಗಿದೆ.
ಇಲ್ಲಿಯವರೆಗೆ ಸೊಪ್ಪುಗುಡ್ಡೆಯ ನಾಡ್ತಿಯಲ್ಲಿದ್ದ ಪೊಲೀಸ್ ಠಾಣೆ ಸಾರ್ವಜನಿಕರಿಗೆ ದೂರವಾಗುತ್ತಿತ್ತು ಎಂಬ ಮಾತು ಕೂಡ ಸಾರ್ವಜನಿಕವಾಗಿ ಕೇಳಿ ಬರುತ್ತಿತ್ತು.
ಈಗ ಪಟ್ಟಣದ ಹೃದಯಭಾಗದ ರಥಬೀದಿಯಲ್ಲಿ ಪೋಲೀಸ್ ಠಾಣೆ ಕಾರ್ಯ ಆರಂಭಿಸಿದ್ದು ಪಟ್ಟಣದ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಡಿವೈಎಸ್’ಪಿ ಕಚೇರಿ ಮಾತ್ರ ಸೊಪ್ಪುಗುಡ್ಡೆಯಲ್ಲೇ ಇರಲಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.