11:02 PM Friday4 - July 2025
ಬ್ರೇಕಿಂಗ್ ನ್ಯೂಸ್
ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು?

ಇತ್ತೀಚಿನ ಸುದ್ದಿ

ಡಿಜಿಟಲ್ ನಲ್ಲಿ ಹಣದ ಹೂಡಿಕೆ ಬಗ್ಗೆ ಎಚ್ಚರ ವಹಿಸಿ: ಡಿವೈಎಸ್’ಪಿ ಗಜಾನನ ವಾಮನ ಸುತಾರ

01/09/2024, 12:03

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಕುರುವಳ್ಳಿಯ ತುಂಗಾ ನದಿಯ ಸಮೀಪ ಓರ್ವ ಯುವಕ ನಾಪತ್ತೆಯಾಗಿದ್ದಾನೆ. ಆತನ ವಾಟ್ಸಾಪ್ ಸ್ಟೇಟಸ್ ಗಮನಿಸಿದಾಗ ಆನ್ಲೈನ್ ಹಣದ ವ್ಯವಹಾರದಿಂದ ಮನನೊಂದು ಸಾಲಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ಟೇಟಸ್ ಹಾಕಿ ಕಾಣೆಯಾಗಿದ್ದಾನೆ. ಅವನನ್ನು ಹುಡುಕಲು ಪ್ರಯತ್ನ ಪಡುತ್ತಾ ಇದ್ದೇವೆ ಎಂದು ಡಿವೈಎಸ್’ಪಿ ಗಜಾನನ ವಾಮನ ಸುತಾರ ಹೇಳಿದರು.
ಶನಿವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ವಿಷಯದಲ್ಲಿ ಮೇಲ್ನೋಟಕ್ಕೆ ಆತ ಆನ್ಲೈನ್ ವ್ಯವಹಾರದಲ್ಲಿ ತುಂಬಾ ಹಣವನ್ನು ಕಳೆದುಕೊಂಡಿದ್ದ ಎಂದು ತಿಳಿದು ಬಂದಿದೆ. ಆತ ಎಲ್ಲಿ ಹಣವನ್ನು ವ್ಯವಹಾರ ಮಾಡಿದ್ದ? ಯಾವ ಕಾರಣಕ್ಕೆ ಮಾಡಿದ್ದ? ಅದರಲ್ಲಿ ಏನಾದರು ಮೋಸ ಆಗಿದ್ಯಾ? ಅಥವಾ ಬಲವಂತವಾಗಿ ಯಾರಾದರೂ ದುರಾಸೆ ತೋರಿಸಿ ಮಾಡಿದ್ದಾರಾ? ಎಂದು ತನಿಖೆ ನಡೆಸುತ್ತೇವೆ. ಹಾಗೇನಾದ್ರೂ ಮಾಡಿದ್ದರೆ ಕೂಡಲೇ ಅವರ ಮೇಲೆ ಪ್ರಕರಣ ದಾಖಲು ಮಾಡುತ್ತೇವೆ ಎಂದು ತಿಳಿಸಿದರು.
*ಡಿಜಿಟಲ್ ಹೂಡಿಕೆ ಬಗ್ಗೆ ಎಚ್ಚರ ವಹಿಸಿ:* ತೀರ್ಥಹಳ್ಳಿಯಲ್ಲಿ ಇತ್ತೀಚಿಗೆ ಆನ್ಲೈನ್ ಟ್ರೇಡಿಂಗ್, ಬಿಟ್ ಕಾಯಿನ್, ಕ್ರಿಪ್ಟೋ ಕರೆನ್ಸಿ, ಇಂತ ಹೂಡಿಕೆ ಮೇಲೆ ಜನ ತುಂಬಾ ಹಣವನ್ನು ಹಾಕುತ್ತಿದ್ದಾರೆ ಎಂಬ ಮಾಹಿತಿ ಬರುತ್ತಿದೆ. ಯಾವುದೇ ಡಿಜಿಟಲ್ ಹೂಡಿಕೆ ಗೆ ಅದರದ್ದೇ ಆದ ರಿಸ್ಕ್ ಪ್ರೊಫೈಲ್ ಇರುತ್ತದೆ. ಎಷ್ಟೋ ಜನರಿಗೆ ಹೂಡಿಕೆ ಬಗ್ಗೆ ಮಾಹಿತಿ ಇರುವುದಿಲ್ಲ. ಸ್ನೇಹಿತರು, ಅಥವಾ ಮೂರನೇ ವ್ಯಕ್ತಿ ಹೇಳಿರುವುದನ್ನು ಕೇಳಿ ಹಣ ಹಾಕುವ ಪ್ರಯತ್ನ ನಡೆಯುತ್ತಿದೆ. ಕಷ್ಟಪಟ್ಟು ದುಡಿದ ಹಣವನ್ನು ಎಲ್ಲೆಲ್ಲೋ ಹೂಡಿಕೆ ಮಾಡಿ ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣ ಬರುತ್ತಿದೆ. ಅಂತಹ ಚಕ್ರವ್ಯೂಹಕ್ಕೆ ಸಿಲುಕಬೇಡಿ ಎಂದರು.
ಡಿಜಿಟಲ್ ಹಣವನ್ನು ಹೂಡಿಕೆ ಮಾಡಿ ಎಂದು ಯಾರಾದರೂ ಬಲವಂತ ಮಾಡಿದರೆ ತಕ್ಷಣ ಪೊಲೀಸ್ ಗಮನಕ್ಕೆ ತನ್ನಿ, ನಾವು ಅಂತವರ ಮೇಲೆ ಶಿಸ್ತು ಕ್ರಮ ಕೈಗೊಂಡು ಪ್ರಕರಣ ದಾಖಲು ಮಾಡುತ್ತೇವೆ. ಹಣ ದುಪ್ಪಟ್ಟು ಆಗುತ್ತದೆ ಎಂಬ ದುರಾಸೆಗಾಗಿ ವಂಚನೆ ಮಾಡುವವರು ತುಂಬಾ ಜನರು ಇದ್ದಾರೆ. ಈ ವಿಷಯದಲ್ಲಿ ಅತ್ಯಂತ ಜಾಗೂರಕರಾಗಿರಿ ಎಂದು ಮನವಿ ಮಾಡಿದರು.
*ಪೋಷಕರು ಮಕ್ಕಳ ಬಗ್ಗೆ ಜಾಗ್ರತೆ ವಹಿಸಿ:*
ಕೆಲವೊಂದು ಅಂಗಡಿಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಟೀ ಜೊತೆಗೆ ಸಿಗರೇಟ್ ಕೊಡುತ್ತಿದ್ದಾರೆ. ಮುಂಭಾಗ ಅಂಗಡಿ ರೀತಿ ಒಳಗೆ ಶೆಡ್ ರೀತಿ ಮಾಡಿಕೊಂಡಿರುತ್ತಾರೆ. ಅಲ್ಲಿ ಟೀ ಸಿಗರೇಟ್ ಜೊತೆಗೆ ಆನ್ಲೈನ್ ಗೇಮ್ ಆಡುವ ವ್ಯವಸ್ಥೆ ಕಂಡು ಬರುತ್ತಿದೆ. ಈಗಾಗಲೇ 3 ಅಂಗಡಿಗಳ ಮೇಲೆ ಪ್ರಕರಣ ದಾಖಲು ಮಾಡಿದ್ದೇವೆ. ಅಂಗಡಿ ಅಥವಾ ಪೆಟ್ಟಿ ಅಂಗಡಿಗಳಿಗೆ ಹೇಳುವುದಾದರೆ 18 ವರ್ಷದ ಒಳಗಿನ ಮಕ್ಕಳಿಗೆ ಕಾಲೇಜು ವಿದ್ಯಾರ್ಥಿಗಳಿಗೆ ಸಿಗರೇಟ್, ಗುಟ್ಕಾ ಕೊಟ್ಟ ಮಾಹಿತಿ ತಿಳಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲು ಮಾಡುತ್ತೇವೆ. ಇನ್ನು ಮಕ್ಕಳ ಬಗ್ಗೆ ಪೋಷಕರು ಕೂಡ ಜಾಗ್ರತೆ ವಹಿಸಬೇಕು ಎಂದರು.
*ಗಣಪತಿ ಹಬ್ಬಕ್ಕೆ ಡಿಜೆ ಕಥೆ ಏನು?:* ಗಣಪತಿ ಹಬ್ಬಕ್ಕೆ ಡಿಜೆ ಬಳಸಲು ಅನುಮತಿ ಕೊಡುತ್ತಿಲ್ಲ. ಡಿಜೆ ಸೌಂಡ್ ನಿಂದ, ರೋಗಿಗಳಿಗೆ, ವಯೋ ವೃದ್ಧರಿಗೆ, ಪುಟಾಣಿ ಮಕ್ಕಳಿಗೆ ತೊಂದರೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಈಗ ಗಣಪತಿ ಹಬ್ಬ ಮತ್ತು ಈದ್ ಮಿಲಾದ್ ಹಬ್ಬ ಜೊತೆ ಜೊತೆಗೆ ಬರುತ್ತಿವೆ.ಎಲ್ಲರೂ ಸೇರಿ ಸಾಮರಸ್ಯ ಪೂರಕವಾಗಿ ಆಚರಣೆ ಮಾಡೋಣ.ನಮ್ಮ ತೀರ್ಥಹಳ್ಳಿ ಶಾಂತಿಯುತವಾದ ನಾಡು,ಇಲ್ಲಿ ಯಾವುದೇ ಕೋಮು ಸೌಹಾರ್ದ ಕೆಡುವಂತಹ ಕೃತ್ಯಗಳಿಗೆ ಅವಕಾಶ ಇಲ್ಲ ಎಂದರು.
ಈ ವಿಚಾರವಾಗಿ ಎರಡು ದಿನದಲ್ಲಿ ಮೀಟಿಂಗ್ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.
*ಸೋಶಿಯಲ್ ಮೀಡಿಯಾ ಮೇಲೆ ಹದ್ದಿನ ಕಣ್ಣು!:*
ಸೋಶಿಯಲ್ ಮೀಡಿಯಾ ಸೆಂಟರ್ ನಲ್ಲಿ ಫೇಸ್ಬುಕ್, ವಾಟ್ಸಪ್, ಇನ್ಸ್ಟಾಗ್ರಾಮ್ ಸೇರಿ ಇತರ ಸೋಶಿಯಲ್ ಮೀಡಿಯಾದಲ್ಲಿ ಏನೆಲ್ಲಾ ಶೇರ್ ಆಗುತ್ತದೆ ಎಂಬುದನ್ನು ನೋಡುತ್ತಾ ಇರುತ್ತೇವೆ.
ಯಾವುದೇ ಕಾರಣಕ್ಕೂ ಕೋಮು ಪ್ರಚೋದನೆ ಅಥವಾ ಗಲಭೆ ಸೃಷ್ಟಿ ಮಾಡುವ ಮೆಸೇಜ್ ಗಳಿಗೆ ಅವಕಾಶ ಇಲ್ಲ.ಅಂತಹದ್ದು ಕಂಡು ಬಂದರೆ ಕೇಸ್ ದಾಖಲು ಮಾಡುತ್ತೇವೆ ಎಂದರು.
*ತೀರ್ಥಹಳ್ಳಿಯಲ್ಲಿ ಗಾಂಜಾ ಕಥೆ ಏನು?:*
ಗಾಂಜಾ ಬೆಳೆಯುವುದು, ಗಾಂಜಾ ಸರಬರಾಜು ಮಾಡುವುದು, ಗಾಂಜಾ ಸೇದುವುದು ಹೀಗೆ ಪ್ರತಿಯೊಂದು ವಿಷಯದಲ್ಲಿಯೂ ಪ್ರಕರಣ ದಾಖಲು ಮಾಡುತ್ತಿದ್ದೇವೆ. ಕೋಣಂದೂರು ಹಾಗೂ ಹುಲ್ಲತ್ತಿಯಲ್ಲಿ ಗಾಂಜಾ ಬೆಳೆದ ಬಗ್ಗೆ ಕೇಸ್ ದಾಖಲಿಸಿದ್ದೇವೆ. ಗಾಂಜಾ ಸರಬರಾಜು ಮಾಡುವ ಪ್ರಕರಣ ಕೂಡ ಹಿಡಿದಿದ್ದೇವೆ. ಗಾಂಜಾ ಸೇದುವುದು ಕೂಡ ಕಂಡು ಬಂದಲ್ಲಿ ಪ್ರಕರಣ ದಾಖಲಿಸಿದ್ದೇವೆ. ಈ ವರ್ಷದಲ್ಲಿ 22 ಕೇಸ್ ಈಗಾಗಲೇ ದಾಖಲಿಸಿದ್ದೇವೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು