ಇತ್ತೀಚಿನ ಸುದ್ದಿ
ಧರ್ಮಸ್ಥಳ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನ ಉದ್ಘಾಟಿಸಿದ ಸಚಿವ ಡಾ. ಎಂ.ಬಿ. ಪಾಟೀಲ್
19/11/2025, 19:16
ಬೆಳ್ತಂಗಡಿ(reporterkarnataka.com): ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದ ಅಂಗವಾಗಿ ನಡೆದ ಸರ್ವಧರ್ಮ ಸಮ್ಮೇಳನದ 93ನೇಯ ಅಧಿವೇಶನವನ್ನು ಸಚಿವ ಡಾ. ಎಂ.ಬಿ. ಪಾಟೀಲ್ ಉದ್ಘಾಟಿಸಿದರು.


ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಲಕ್ಷದೀಪೋತ್ಸವದ ನವೆಂಬರ್ 14ರಂದು ಆರಂಭಗೊಂಡಿತ್ತು. ಇದರ ಅಂಗವಾಗಿ ಪ್ರತಿವರ್ಷ ಸರ್ವಧರ್ಮ ಸಮ್ಮೇಳನ ನಡೆಯುತ್ತದೆ. ಇದೇ ವೇಳೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರು ಆಶೀವರ್ಚನ ನೀಡಿದರು.
ಲಕ್ಷದೀಪೋತ್ಸವದ ನಾಲ್ಕನೇ ದಿನ ಬಹಳ ವಿಜೃಂಭಣೆಯಿಂದ ಕಂಚಿಮಾರುಕಟ್ಟೆ ಉತ್ಸವ ನಡೆಯಿತು. ಲಕ್ಷದೀಪಗಳ ಪ್ರಭೆಯಲ್ಲಿ ಶ್ರೀಮಂಜುನಾಥಸ್ವಾಮಿಯ ಉತ್ಸವ ಮೂರ್ತಿಯನ್ನು ಸಹಸ್ರಾರು ಭಕ್ತಾಧಿಗಳು ಕಣ್ತುಂಬಿಕೊಂಡರು.












