ಇತ್ತೀಚಿನ ಸುದ್ದಿ
ದೇವರ ತೋಟದ ಸುಂದರ ಕುಸುಮಗಳು: ಮಕ್ಕಳ ಪ್ರಗತಿಯ ಬಗ್ಗೆ ನಮಗೆ ಬದ್ಧತೆ ಇರಲಿ
13/11/2021, 23:51
ಇಂದಿನ ಮಕ್ಕಳೇ ಮುಂದಿನ ಭಾವಿ ಪ್ರಜೆಗಳು.ಮಕ್ಕಳ ಸರ್ವತೋಮುಖ ಅಭಿವೃದ್ಧಿ ನಮ್ಮೆಲ್ಲರ ಕರ್ತವ್ಯ ಜವಾಬ್ದಾರಿ. ಇದಕ್ಕಾಗಿ ಮಕ್ಕಳಲ್ಲಿ ಯಾವ ಸಂಸ್ಕಾರಗಳನ್ನು ಬೆಳೆಸುತ್ತೇವೆ ಅದೇ ರೀತಿ ನಾಳಿನ ಭವಿಷ್ಯ ರೂಪುಗೊಳ್ಳುತ್ತದೆ.
ಶಾಲೆಗಳಲ್ಲಂತೂ ಈ ದಿನವೂ ಸಂಭ್ರಮವೋ ಸಂಭ್ರಮ ಹೊಸಬಟ್ಟೆ ತೊಟ್ಟು ಹರುಷದಿಂದ ನೋಡುವುದೇ ಸಂಭ್ರಮ. ನಾನು ಶಿಕ್ಷಕಿಯಾಗಿ, ಅದರಲ್ಲೂ ಪ್ರಾಥಮಿಕ ಶಿಕ್ಷಕಿ ಯಾಗಿರುವುದು ಭಾಗ್ಯವೇ ಸರಿ.
ಮಗು ಮನೆಯಲ್ಲಿನ ಮೊದಲ ಹೂವನ್ನು ನನಗೆ ತಂದು ನೀಡಿದಾಗ ಆ ಮುಖದಲ್ಲಿನ ಸಂತೋಷ ನನ್ನ ಶಿಕ್ಷಕ ವೃತ್ತಿಗೆ ಸಾರ್ಥಕತೆ ತಂದುಕೊಟ್ಟಿತು.
18-20 ವರ್ಷಗಳ ಮೊದಲು ಶಾಲೆಯಲ್ಲಿ ನನ್ನಿಂದ ಕೈತುತ್ತು ಉಂಡ ಮಗು ಬಹು ವರ್ಷಗಳ ನಂತರ ಸಿಕ್ಕಾಗ ನನ್ನನ್ನು ಪರಿಚಯಿಸಿದ ರೀತಿ ಇವರು “ನನ್ನ ಟೀಚರ್ ಅಲ್ಲ. ನನ್ನ ಅಮ್ಮ” ಎಂದಾಗ ಕಣ್ಣಲ್ಲಿ ಆನಂದಭಾಷ್ಪ.
ಮಕ್ಕಳು ದೇವರ ತೋಟದ ಸುಂದರ ಕುಸುಮಗಳು. ಒಂದೊಂದು ವಿಭಿನ್ನ ಸುಂದರ ಆಕರ್ಷಕ.ಮಕ್ಕಳ ಸರ್ವಾಂಗೀಣ ಪ್ರಗತಿ ಕೇವಲ ಶಿಕ್ಷಕರ, ಹೆತ್ತವರ ಜವಾಬ್ದಾರಿ ಆಗಿರದೆ ಸಮಾಜದ ಜವಾಬ್ದಾರಿಯೂ ಹೌದು.
ಎಳವೆಯಲ್ಲಿಯೇ ಮಗುವಿಗೆ ಮೌಲ್ಯಗಳ ಅರಿವು ಶಿಸ್ತು,ಸಂಯಮಗಳನ್ನು ಕಲಿಸಿ ಬೆಳೆಸಬೇಕು ಇದರ ಜೊತೆಗೆ ಒಂದು ಸಂಗತಿ ನೆನಪಿಡಬೇಕಾಗಿದೆ. ಮಗು ಎದುರಿಗಿದ್ದವರನ್ನು ನೋಡಿಯೇ ಅನುಸರಿಸಿ ಕಲಿಯುತ್ತದೆ. ಹಾಗಾಗಿ ಹಿರಿಯರಾದ ನಮ್ಮ ಜವಾಬ್ದಾರಿ ತುಂಬಾ ಹಿರಿದು.
ಮಗುವಿಗೆ ಆದರ್ಶವಾಗಿ ಮೌಲ್ಯಗಳನ್ನು ಅನುಸರಿಸಿ ನಾವು ಸಾಗಿದ್ದೆ ಆದರೆ ಮಗು ನಮ್ಮನ್ನು ಅನುಸರಿಸಬಹುದು. ಇಂದಿನ ಈ ಪುಟ್ಟ ಮಕ್ಕಳು ಮುಂದಿನ ದೇಶದ ಭವಿಷ್ಯದ ಪ್ರಜೆಗಳು ಭಾರತದ ನಿರ್ಮಾಣಕಾರರು. ಮಗುವಿನ ಮನಸ್ಸು ಮಣ್ಣಿನ ಮುದ್ದೆಯಂತೆ. ಅದಕ್ಕಾಗಿ ಕುಂಬಾರಿಕೆಯ ಕೆಲಸ ನಾವು ಮಾಡಬೇಕಾಗಿದೆ.
ಒಳಿತು ಕೆಡುಕುಗಳ ತಿಳುವಳಿಕೆ ಮತ್ತು ಮಣ್ಣಿನಿಂದ ಸುಂದರ ಕಲಾಕೃತಿಗಳ ನಿರ್ಮಾಣ ನಮ್ಮ ಜವಾಬ್ದಾರಕುಗಳ ತಿಳುವಳಿಕೆ ಇತ್ತು. ಮಣ್ಣಿನಿಂದ ಸುಂದರ ಕಲಾಕೃತಿಗಳ ನಿರ್ಮಾಣ ನಮ್ಮ ಜವಾಬ್ದಾರಿ.
ಒಟ್ಟಿನಲ್ಲಿ ಮಕ್ಕಳ ದಿನಾಚರಣೆ ಪರ್ವಕಾಲದಲ್ಲಿ ಮಕ್ಕಳ ಪ್ರಗತಿಯ ಬಗ್ಗೆ ನಮ್ಮ ಬದ್ಧತೆಯನ್ನು ನವೀಕರಿಸಲು ಸಕಾಲ ನಮ್ಮ ಭವ್ಯ ಭಾರತ ಮುಂದಿನ ಭವ್ಯ ಪ್ರಜೆಗಳಿಂದ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂಬುದೇ ನನ್ನ ಆಶಯ.
✍️