ಇತ್ತೀಚಿನ ಸುದ್ದಿ
ಡಿಸೆಂಬರ್ 3: ವಿಶ್ವ ವಿಶೇಷಚೇತನರ ದಿನ: ಅನುಕಂಪದ ಬದಲು ಸ್ವಾಭಿಮಾನದ ಬದುಕಿಗೆ ಪ್ರೋತ್ಸಾಹಿಸೋಣ
03/12/2021, 23:50
ಸಮಾಜದಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯೂ ಅನನ್ಯ.. ಹಲವಾರು ರೀತಿಯ, ವಿವಿಧ ಮನೋಸ್ಥಿತಿಯ ವ್ಯಕ್ತಿಗಳನ್ನು ಸಮಾಜದಲ್ಲಿ ನಾವು ಕಾಣಬಹುದು. ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮ ಜೊತೆ ಇರುವ ಹಲವಾರು ವ್ಯಕ್ತಿಗಳಲ್ಲಿ ವಿಶೇಷಚೇತನರೂ ಸೇರಿದ್ದಾರೆ. ವಿವಿಧ ರೀತಿಯ ದೈಹಿಕ, ಮಾನಸಿಕ, ಬೌದ್ಧಿಕ ಸಾಮರ್ಥ್ಯಗಳಲ್ಲಿ ಸಾಮಾನ್ಯ ವ್ಯಕ್ತಿಗಿಂತ ವಿಭಿನ್ನವಾಗಿರುವವರನ್ನು ವಿಶೇಷಚೇತನ ವ್ಯಕ್ತಿಗಳೆಂದು ಕರೆಯುತ್ತಾರೆ.. ಅಂಗವಿಕಲತೆಯಲ್ಲಿ ದೃಷ್ಟಿ ದೋಷ, ಶ್ರವಣ
ದೋಷ, ದೈಹಿಕ, ಮಾತಿನ ವಿಕಲತೆ ಹೀಗೆ ಸುಮಾರು ಇಪ್ಪತ್ತು ವಿಧದ ವಿಕಲತೆಯನ್ನು ಕಾಣಬಹುದು..
ಇಂತಹ ವ್ಯಕ್ತಿಗಳಲ್ಲೂ ವಿಶೇಷ ಪ್ರತಿಭೆಗಳು ಸಾಮರ್ಥ್ಯಗಳು ಹುದುಗಿಕೊಂಡಿರುತ್ತದೆ.
ಸಾಮಾನ್ಯ ವ್ಯಕ್ತಿಗಳಂತೆ ಭಾವನೆಗಳು ಭಾವನೆಗಳು ,ಆಸಕ್ತಿ ,ಆಸೆ, ಆಕಾಂಕ್ಷೆಗಳು ಇರುತ್ತವೆ ಇಂಥವರಿಗೆ ಅನುಕಂಪವನ್ನು ತೋರಿಸುವ ಬದಲು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಹಾಗೂ ಸ್ವಸಾಮರ್ಥ್ಯದ ಮೇಲೆ ಬರಲು ಪ್ರೋತ್ಸಾಹ ಮತ್ತು ಸಹಕಾರವನ್ನು ನೀಡಬೇಕು.
ಇಂತಹ ಮಕ್ಕಳಿಗೆ ಬಾಲ್ಯದಲ್ಲಿ ಮನೆಯಲ್ಲಿ ತಂದೆ-ತಾಯಿ , ಶಾಲೆಗಳಲ್ಲಿ ಶಿಕ್ಷಕರು ಸರಿಯಾದ ರೀತಿಯಲ್ಲಿ ಪ್ರೋತ್ಸಾಹ, ಸಹಾಯ-ಸಹಕಾರ ನೀಡಿದರೆ,ಈ ಮಕ್ಕಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ,ರಾಜಕೀಯವಾಗಿ, ಉದ್ಯೋಗ ,ಕ್ರೀಡೆ ,ಸಂಗೀತ ,ತಾಂತ್ರಿಕ ,ಮನೋರಂಜನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವಲ್ಲಿ ಎರಡು ಮಾತೇ ಇಲ್ಲ.
ಈ ನಿಟ್ಟಿನಲ್ಲಿ 1992 ರಲ್ಲಿ ವಿಶ್ವಸಂಸ್ಥೆಯು ಅಂಗವಿಕಲರ ಏಳಿಗೆಗಾಗಿ ಹಾಗೂ ಸ್ವಾಭಿಮಾನದ ಬದುಕಿಗಾಗಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿಶ್ವ
ವಿಶೇಷ ಚೇತನರ ದಿನಾಚರಣೆಯನ್ನು ಪ್ರತಿವರ್ಷ ಡಿಸೆಂಬರ್ 3ರಂದು ಆಚರಿಸಲು ಪ್ರಾರಂಭಿಸಿತು. ಈ ದಿನದಂದು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಮೂಲಕ ಅಂಗವಿಕಲರು ಕೂಡ ಈ ಸಮಾಜದ ಎಲ್ಲರೊಂದಿಗೆ ಬೆರೆತು ಸ್ವಾಭಿಮಾನಿಗಳಾಗಿ ಬದುಕಬಹುದು ಎಂಬುದನ್ನು ಮನವರಿಕೆ ಮಾಡಲಾಗುತ್ತದೆ.
ಅಂಗವಿಕಲತೆ ಶಾಪವಲ್ಲ, ಅಂಗವಿಕಲರು ಕೂಡ ಎಲ್ಲರಂತೆ ಸಾಧನೆಯನ್ನು ಮಾಡಬಲ್ಲರು, ಅಂಗವಿಕಲರು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ಅಸಾಮಾನ್ಯ ವ್ಯಕ್ತಿಗಳಾಗಿ ಬೆಳೆಯಬೇಕೆಂಬುದೇ ನಮ್ಮ ಆಶಯ…
✍️