11:01 PM Tuesday26 - August 2025
ಬ್ರೇಕಿಂಗ್ ನ್ಯೂಸ್
ಜಾತ್ಯತೀತತೆಯ ಸಂಕೇತವಾಗಿರುವ ನಾಡ ಹಬ್ಬ, ಧಾರ್ಮಿಕವಲ್ಲ: ಡಾ. ಪುರುಷೋತ್ತಮ ಬಿಳಿಮಲೆ Bangalore | ಪರಿಶಿಷ್ಟ ಜಾತಿ/ ಪಂಗಡ ದೌರ್ಜನ್ಯ ತಡೆ ಕಾಯ್ದೆ ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸಿ:… Kodagu | ಸಿದ್ದಾಪುರ: ಕರಡಿಗೋಡು ವಂದನಾಪುರ ಎಸ್ಟೇಟ್ ಮನೆ ಆವರಣದಲ್ಲಿ ಕಾಡಾನೆಗಳ ದಾoಧಲೆ ಡಿಸ್ಕಸ್ ಥ್ರೋ ವೇಳೆ ಅವಘಡ: ವಿದ್ಯಾರ್ಥಿ ಗಂಭೀರ: ಮಂಗಳೂರು ಆಸ್ಪತ್ರೆಗೆ ದಾಖಲು ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ದಿಲ್ಲಿಯಲ್ಲಿ ಮಾಜಿ ಸಿಎಂ… ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು

ಇತ್ತೀಚಿನ ಸುದ್ದಿ

ಸದನದಲ್ಲಿ ‘ನಮಸ್ತೆ ಸದಾ ವತ್ಸಲೇ’ ಹಾಡಿದ್ದ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕ್ಷಮೆಯಾಚನೆ

26/08/2025, 20:06

ಬೆಂಗಳೂರು(reporterkarnataka.com): ವಿಧಾನ ಸಭೆಯಲ್ಲಿ ಆರ್‌ಎಸ್‌ಎಸ್‌ನ ನಮಸ್ತೆ ಸದಾ ವತ್ಸಲೇ ಪ್ರಾರ್ಥನಾ ಗೀತೆ ಹಾಡಿದ್ದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕ್ಷಮೆ ಯಾಚಿಸಿದ್ದಾರೆ.
ಆರ್‌ಎಸ್‌ಎಸ್‌ನ ಗೀತೆಯನ್ನು ಬಿಜೆಪಿ ಕಾಲೆಳೆಯಲು ಹಾಡಿದ್ದೇ ಹೊರತು ಆರ್‌ಎಸ್‌ಎಸ್‌ನ ಹೊಗಳಬೇಕು ಎಂಬ ಉದ್ದೇಶ ಇದರಲ್ಲಿ ಇರಲಿಲ್ಲ ಎಂದು ಸ್ಪಷ್ಟನೆ ನೀಡಿರುವ ಅವರು, ನಾನು ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ಯಾರಿಗಾದರು ನೋವಾಗಿದ್ದರೆ, ಬೇಸರವಾಗಿದ್ದರೆ ಕ್ಷಮೆ ಕೇಳಲು ಸಿದ್ಧ. ನಾನು ಹುಟ್ಟು ಕಾಂಗ್ರೆಸ್ಸಿಗನಾಗಿಯೇ ಸಾಯುತ್ತೇನೆ ಎಂದು ಡಿ.ಕೆ ಶಿವಕುಮಾರ್ ಭಾವುಕರಾದರು.
ಕಳೆದ ವಿಧಾನಸಭಾ ಅಧಿವೇಶನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆರ್‌ಎಸ್‌ಎಸ್‌ನ ನಮಸ್ತೆ ಸದಾ ವತ್ಸಲೇ ಹಾಡು ಹೇಳಿದ್ದು, ಕಾಂಗ್ರೆಸ್ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿ ಹಲವು ನಾಯಕರಿಂದ ಟೀಕೆ-ಟಿಪ್ಪಣಿಗಳು ವ್ಯಕ್ತವಾಗಿದ್ದವು. ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾ‌ರ್ ಆರ್‌ಎಸ್‌ಎಸ್ ಗೀತೆ ಹಾಡಿದ್ದಾರೆ. ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಇಂದು ವಿಧಾನಸಭೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಕ್ಷಮೆ ಕೋರಲು ಸಿದ್ಧ ಎಂದು ಹೇಳಿ ಎಲ್ಲದ್ದಕ್ಕೂ ತೆರೆ ಎಳೆಯುವ ಪ್ರಯತ್ನ ಮಾಡಿದರು.
*ನಾನು ಯಾರಿಗೋ ಹೆದರಿ ಕ್ಷಮೆ ಕೇಳುತಿಲ್ಲ:*
ವಿಧಾನಸಭೆಯಲ್ಲಿ ಬಿಜೆಪಿಯವರ ಕಾಲೆಳೆಯಲು ಪಾಸಿಂಗ್ ರೆಫೆರೆನ್ಸ್ ಆಗಿ ಆರ್‌ಎಸ್‌ಎಸ್ ಗೀತೆ ಹಾಡಿದ್ದೇನೆ. ನನ್ನ ಪಕ್ಷದ ನಿಷ್ಠೆಯನ್ನು ಪ್ರಶ್ನೆ ಮಾಡುವುದು ಬೇಡ, ಪ್ರಶ್ನೆ ಮಾಡುವವರು ಮೂರ್ಖರು ಎಂದು ಹೇಳಿದರು.
ನಾನು ಏನೂ ತಪ್ಪು ಮಾಡಿಲ್ಲ. ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ನನ್ನ ಪಕ್ಷದ ಕಾರ್ಯಕರ್ತರಿಗೆ, ನಾಯಕರಿಗೆ ಇಂಡಿಯಾ ಕೂಟದ ನಾಯಕರಲ್ಲಿ ಕ್ಷಮೆ ಕೇಳುತ್ತೇನೆ ಎಂದೂ ಅವರು ಹೇಳಿದರು.
ಹೈಕಮಾಂಡ್ ಆಗಲಿ, ಇತರೆ ಯಾವುದೇ ನಾಯಕರಾಗಲಿ ನನ್ನನ್ನು ಈ ಬಗ್ಗೆ ಪ್ರಶ್ನೆ ಮಾಡಿಲ್ಲ. ನಾನು ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶ ಇರಲಿಲ್ಲ. ವಿರೋಧ ಪಕ್ಷದ ಸಿದ್ಧಾಂತದ ಅರಿವಿದೆ ಎಂಬುದನ್ನು ನಿರೂಪಿಸುವುದಕ್ಕೆ ಹಾಗೆ ಹೇಳಿದ್ದೆ ಅಷ್ಟೆ. ಹಾಗೆಯೇ ನಾನು ತಪ್ಪು ಮಾಡಿದ್ದೇನೆ ಎಂದು ಭಾವಿಸುವುದಾದರೆ ಎಲ್ಲರ ಕ್ಷಮೆ ಕೋರುತ್ತೇವೆ ಎಂದರು.

*ಗಾಂಧಿ ಕುಟುಂಬ ಭಗವಂತ, ನಾನು ಭಕ್ತ:*
ನಾನು 47ನೇ ವರ್ಷದಲ್ಲಿ ರಾಜಕೀಯ ಶಾಸ್ತ್ರದಲ್ಲಿ ಪದವಿ ಪಡೆದಿದ್ದೇನೆ. ಎಲ್ಲ ಪಕ್ಷಗಳ ಅಧ್ಯಯನ ಮಾಡಿದ್ದೇನೆ. ಕಮ್ಯುನಿಸ್ಟ್, ಬಿಜೆಪಿ, ಜೆಡಿಎಸ್, ಆರ್‌ಎಸ್‌ಎಸ್ ಎಲ್ಲರ ಸಿದ್ಧಾಂತದ ಬಗ್ಗೆ ತಿಳಿದಿದ್ದೇನೆ. ಮುಸ್ಲಿಂ ಲೀಗ್ ಕಾನ್ಸರೆನ್ಸ್‌ಗೂ ಹೋಗಿದ್ದೇನೆ.
ಅವರ ಶಿಸ್ತು ಕಂಡು ಬೆರಗಾಗಿದ್ದೇನೆ ಎಂದರು. ಕಾಂಗ್ರೆಸ್ ಪಕ್ಷದ ಕಟ್ಟಾಳು ಆಗಿ ನಾನು ಕೆಲಸ ಮಾಡಿದ್ದೇನೆ. ನನ್ನ ಹೋರಾಟ ಬಹಳ ಇದೆ. ಇದನ್ನು ಯಾರೂ ಸರಿ ದೂಗಿಸಲು ಆಗಲ್ಲ. ಈ ಹಿಂದೆ ಮಹಾರಾಷ್ಟ್ರದಲ್ಲಿ ವಿಲಾಸ್‌ರಾವ್ ದೇಶ್‌ ಮುಖ್ ಸರ್ಕಾರದ ಪತನದ ವೇಳೆ ಮಹಾರಾಷ್ಟ್ರ ಶಾಸಕರನ್ನು ರಾಜ್ಯಕ್ಕೆ ಕರೆತಂದು ಪಕ್ಷದ ಪರ ಕೆಲಸ ಮಾಡಿದ್ದೆ. ಆಗ ನಾನು ಜಿಂಕೆ ಮಾಂಸ ಹಂಚಿದೆ ಎಂದು ವಿವಾದ ಮಾಡಿದ್ದರು. ಗುಜರಾತ್‌ನ ರಾಜ್ಯಸಭಾ ಚುನಾವಣಾ ಸಂದರ್ಭದಲ್ಲೂ ಪಕ್ಷ ನೀಡಿದ ಜವಾಬ್ದಾರಿಯಂತೆ ಗುಜರಾತ್ ಸರ್ಕಾರದ ಶಾಸಕರನ್ನು ರಾಜ್ಯಕ್ಕೆ ಕರೆತಂದಿದ್ದೆ. ನಂತರ ನನ್ನ ಮೇಲೆ ಇಡಿ ದಾಳಿ ನಡೆಸಿ ಪ್ರಕರಣಗಳನ್ನು ದಾಖಲಿಸಿ ತಿಹಾರ್ ಜೈಲಿಗೆ ಕಳುಹಿಸಿದರು. ಜೈಲಿನಲ್ಲಿ ನನಗೆ ಒಂದು ಕುರ್ಚಿ ಸಹ ಕೊಡಲಿಲ್ಲ. 10*10 ಅಗಲದ ರೂಮಿನಲ್ಲಿ ಇದ್ದೆ ನಾನು ಎಷ್ಟು ಹಿಂಸೆ ಅನುಭವಿಸಿದೆ ಎಂದು ನನಗೆ ಗೊತ್ತಿದೆ. ಅದೆಲ್ಲ ಈಗ ಸುಪ್ರೀಂಕೋರ್ಟ್ ನನ್ನ ಪ್ರಕರಣಗಳನ್ನು ವಜಾ ಮಾಡಿದೆ. ಈಗ ಅದೆಲ್ಲ ಬೇಡ, ನಾನು ಯಾರನ್ನೂ ನೋಯಿಸಿಲ್ಲ. ಎಲ್ಲರಿಗೂ ಹೇಳುತ್ತೇನೆ ಇದರಲ್ಲಿ ರಾಜಕಾರಣ ಬೇಡ ಇಲ್ಲಿಗೆ ಎಲ್ಲದ್ದಕ್ಕೂ ತೆರೆ ಎಳೆಯುತ್ತೇನೆ
ಸಾಫ್ಟ್ ಹಿಂದುತ್ವವೇ ನಿಮಗೆ ಮುಳುವಾಯಿತಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್ ಅವರು,ನಾನು ಬೆಳಿಗ್ಗೆ ಮಂಜುನಾಥನ ಬೊಟ್ಟು ಇಟ್ಟುಕೊಂಡು ಬಂದಿದ್ದೇನೆ. ಮಾತು ಬಿಡದ ಮಂಜುನಾಥ ಕಾಸು ಬಿಡದ ತಿಮ್ಮಪ್ಪ ನಾನು ಬೆಳಿಗ್ಗೆ ಎದ್ದರೆ ಅಜ್ಜಯ್ಯನ ಪೂಜೆ ಮಾಡಿ ಬರುತ್ತೇನೆ. ಈಗಲೂ ವಿಭೂತಿ ಧರಿಸಿದ್ದೇನೆ ನನ್ನ ಧರ್ಮ ಬಿಡಲ್ಲ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು