ಇತ್ತೀಚಿನ ಸುದ್ದಿ
ದತ್ತಪೀಠದಲ್ಲಿ ಮುಜಾವರ್ V/S ಹಿಂದೂ ಅರ್ಚಕರ ನೇಮಕ ವಿವಾದ: ನಾಳೆ ಉಪ ಸಮಿತಿ ಭೇಟಿ
06/02/2022, 10:10
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ದತ್ತಪೀಠದಲ್ಲಿ ಮುಜಾವರ್ V/S ಹಿಂದೂ ಅರ್ಚಕರ ನೇಮಕ ವಿವಾದಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಗೆ ಸಚಿವ ಸಂಪುಟದ ಉಪಸಮಿತಿ ಭೇಟಿ ನೀಡಲಿದೆ.
ಕಾನೂನು ಸಚಿವ ಮಾಧುಸ್ವಾಮಿ, ಮುಜರಾಯಿ ಸಚಿವೆ ಶಶಿಕಲಾ ಜೋಲ್ಲೆ, ಸಚಿವ ಅಂಗಾರ ನೇತೃತ್ವದ ಉಪಸಮಿತಿಯನ್ನು ರಚಿಸಲಾಗಿದೆ.
ಸ್ಥಳೀಯರು ಮತ್ತು ಸಾರ್ವಜನಿಕರಿಂದ ಲಿಖಿತ ಅಹವಾಲನ್ನು ಉಪ ಸಮಿತಿಯಿ ಸ್ವೀಕರಿಸಲಿದೆ.
ಅರ್ಚಕರ ನೇಮಕ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಫೆಬ್ರವರಿ 7 ರಂದು ಚಿಕ್ಕಮಗಳೂರಿಗೆ ಆಗಮಿಸಲಿರುವ ಉಪ ಸಮಿತಿ ಆಗಮಿಸಲಿದೆ. ವಿಶ್ರಾಂತ ಜಡ್ಜ್ ನಾಗಮೋಹನದಾಸ್ ಕಮಿಟಿಯನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ನೇಮಕ ಮಾಡಿತ್ತು.
ಕಮಿಟಿ ಮುಜಾವರ್ ನೇಮಕ ಸಂಬಂಧಿಸಿದಂತೆ ವರದಿಯನ್ನು ಸರ್ಕಾರಕ್ಕೆ ನೀಡಿತು. ಇದನ್ನ ಪ್ರಶ್ನಿಸಿ ಹಿಂದೂಪರ ಸಂಘಟನೆಗಳಿಂದ ಹೈಕೋರ್ಟ್ ಮೊರೆ ಹೋಗಿವೆ. ಈ ಹಿನ್ನೆಲೆಯಲ್ಲಿ ಎರಡು ಸಮುದಾಯದ ಅವಾಹಲು ಸ್ವೀಕರಿಸಲು ಹೈಕೋರ್ಟ್ ಆದೇಶ ನೀಡಿತ್ತು.
ಚಿಕ್ಕಮಗಳೂರು ತಾಲೂಕಿನ ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾ ಆಗಿದೆ.