10:28 AM Sunday12 - October 2025
ಬ್ರೇಕಿಂಗ್ ನ್ಯೂಸ್
ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ…

ಇತ್ತೀಚಿನ ಸುದ್ದಿ

ದರೂರ ಗ್ರಾಪಂ: ಅಧ್ಯಕ್ಷ, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಮಹೇಶ್ ಬಾಬು ಕಾಂಬಳೆ  ಹಾಗೂ ತಂಗೆವ್ವ ಶಂಕರ್ ಐಗಳಿ ಆಯ್ಕೆ

02/07/2021, 17:42

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮ ಪಂಚಾಯತಿಗೆ  ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಮಹೇಶ್ ಬಾಬು ಕಾಂಬಳೆ  ಹಾಗೂ ತಂಗೆವ್ವ ಶಂಕರ್ ಐಗಳಿ   ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಮಹೇಶ್ ಬಾಬು ಕಾಂಬಳೆ, ನಾವು ಗ್ರಾಮದ ಅಭಿವೃದ್ಧಿಗಾಗಿ ಪಕ್ಷದ ಬೇಧ ಮರೆತು ಜನರ ಹಿತದೃಷ್ಟಿಯಿಂದ ಗ್ರಾಮದ ಜನರ ಕಷ್ಟಗಳಿಗೆ ಸರ್ವ ಸದಸ್ಯರೆಲ್ಲರೂ ಕೂಡಿ ಸ್ಪಂದಿಸುತ್ತೇವೆ  ಎಂದು ಹೇಳಿದರು. 

ತಮ್ಮನ್ನು  ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ ಇನ್ನುಳಿದ ಸದಸ್ಯರಿಗೆ  ಹಾಗೂ ಗ್ರಾಮದ ಜನತೆಗೆ ಕೃತಜ್ಞತೆ ಸಮರ್ಪಿಸಿದರು.

ಚುನಾವಣಾ ಅಧಿಕಾರಿ ಉದಯ್ ಪಾಟೀಲ್, ರವೀಂದ್ರ ಬಂಗಾರಪ್ಪ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಸ್. ಎಂ. ಬರಬರೇ, ಸದಸ್ಯರುಗಳಾದ ಮಹೇಶ್ ಡವಳೇಶ್ವರ್, ಶಾಂತಾ ಅಶೋಕ್ ಖುರ್ದ್, ಸುರೇಖಾ ಮಹೇಶ್ ಬೇನಾಡಿ, ವೃಷಭ ನಾಯಿಕ್, ಪ್ರೇಮಾ ಕಾಂಬಳೆ, ಸಿದ್ದಪ್ಪ ದಳವಾಯಿ, ಅಪ್ಪಸಾಬ ಸದಾಶಿವ ಹಳ್ಳೂರ್, ಶೋಭಾ ನೇಮಿನಾಥ್ ಅಸ್ಕಿ, ಹೌಸವ್ವ ಶಂಕರ್ ಕಾಂಬಳೆ, ಅಸ್ಮಾ ಆರ್ ಬಿಜಾಪುರ್, ಆಯಿಷಾ ಮುಲ್ಲಾ, ರಾಜಶ್ರೀ ಎಮ್ ಬಾಳಿಗೇರಿ, ಮಹದೇವ್ ಮಲ್ಲಪ್ಪ ಕಲ್ಲೋಳಿ ಮತ್ತು ಬಿಜೆಪಿ ಅಥಣಿ ಮಂಡಲ ಅಧ್ಯಕ್ಷ ಅಣ್ಣಾಸಾಬ ನಾಯಿಕ್, ಗ್ರಾಮದ ಹಿರಿಯರಾದ ಜಗದೀಶ್ ದಳವಾಯಿ, ಗುರುನಿಂಗ್ ಗುಮತಾಜ. ಗುರುರಾಜ ಗಳತಗಿ,ಪ್ರಕಾಶ ತೇಲಿ,ಪುಟ್ಟು ಹಿರೇಮಠ,ಧರಿಗೌಡ ಬಸಗೌಡರ್, ಅಮೂಲ ನಾಯಿಕ  ಕೂಡ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು