5:51 PM Thursday12 - March 2026
ಬ್ರೇಕಿಂಗ್ ನ್ಯೂಸ್
ರಾಯಚೂರು | ಒಳ ಮೀಸಲಾತಿ ಹೋರಾಟ: ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಕ್ತರಲ್ಲಿ ಹೆಚ್ಚಿದ ಆತಂಕ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್‌: ಮೌಲ್ಯ 10 ಪಟ್ಟು ಹೆಚ್ಚು,… ಪೆಟಾ ಮೇಲ್ಮನವಿ ವಜಾ: ರಾಜ್ಯದೆಲ್ಲೆಡೆ ಕಂಬಳ ಆಯೋಜನೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನಿಗಮಗಳಿಗೆ ಅನುದಾನ ಕಡಿತ, ಆಸ್ಪತ್ರೆಗಳಲ್ಲಿ ಔಷಧಿ ಇಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕೆ ಚಿಕ್ಕಮಗಳೂರು: ಹಸುವನ್ನು ತುಳಿದು ಕೊಂದ ಕಾಡಾನೆ; ಮಾಣಿಮಕ್ಕಿ ಗ್ರಾಮಸ್ಥರಲ್ಲಿ ಆತಂಕ ತೀರ್ಥಹಳ್ಳಿ: ಕುವೆಂಪು ಜೈವಿಕ ಅರಣ್ಯದಲ್ಲಿ ಹತ್ತಿಕೊಂಡ ಬೆಂಕಿ; ಅರಣ್ಯಾಧಿಕಾರಿಗಳ ದೌಡು ಝೂ ಅಭಿ ಇನ್ನಿಲ್ಲ: ಕಾಲು ನೋವಿನಿಂದ ಬಳಲುತ್ತಿದ್ದ ಮತ್ತಿಗೋಡು ಶಿಬಿರದ ಸಾಕಾನೆ ವಿವಿಧ ಬೇಡಿಕೆ ಆಗ್ರಹಿಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಮಾ.11ರಂದು ಪ್ರತಿಭಟನೆ ಮೋದಿ ದೇಶದ ಮಾರ್ಯಾದೆ ಹಾಳು‌‌ ಮಾಡುತ್ತಿದ್ದಾರೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಟು‌…

ಇತ್ತೀಚಿನ ಸುದ್ದಿ

ದರೋಡೆಕೋರರು… ಬರಬಾರದ ರೋಗ ಬಂದು ಸಾಯತಾರ…!: ವಿಜಯನಗರ ಟ್ರಾಫಿಕ್ ಪೊಲೀಸರಿಗೆ ಮಹಿಳೆಯ ಹಿಡಿಶಾಪ!!

24/09/2021, 11:08

ವಿಜಯನಗರ(reporterkarnataka.com) ಜನರ ರೊಕ್ಕತಿನ್ನೋ ದರೋಡೆಕೋರರು (ಲಂಚ ತಿನ್ನೋರು)ಬರಬಾರದ ರೋಗ ಬಂದಾ ಸಾಯತಾರ ಎಂದು ನೊಂದ ಮಹಿಳೆ ಕಣ್ಣೀರಿಟ್ಟು ಶಾಪ ಹಾಕಿದ್ದಾಳೆ.!!

ಇದು ವಿಜಯನಗರ  ಜಿಲ್ಲೆಯ ಬಹುತೇಕ ಕಡೆಯ ಬೈಕ್ ಸೇರಿದಂತೆ ದ್ವಿಚಕ್ರ ವಾಹನ ಹಾಗೂ ಕಾರು ಸವಾರರ ಅಡ್ಡಗಟ್ಟಿ ತಪಾಸಣೆ ನೆಪದಲ್ಲಿ,

ಹಣ ವಸೂಲಿ ಮಾಡುತ್ತಿದ್ದ ಪೊಲೀಸರಿಗೆ ಮಹಿಳೆಯೊಬ್ಬರು ಶಾಪ ಹಾಕಿದ ಪರಿ.

ಕಷ್ಟಪಟ್ಟು ಬೆವರು ಸುರಿಸಿ ದುಡಿದ ಹಣ  ಕೊಟ್ಟ ನಂತರ ಅವರಿಗೆ ಮಹಿಳೆ ಶಾಪ ಹಾಕಿದ ಪರಿ ಇದು.

ಪೊಲೀಸರು ಕೈ ಅಂತಾರ ರೊಕ್ಕ ಕಸಿತಾರ ಏಳಾರು ಕೇಳಾರು ಯಾರು ಇಲ್ಲ..,ಕೊಡಲಿಲ್ಲ ಅಂದ್ರೆ ಹೊಲಸು ಬೈತಾರ ಎಂದೆಲ್ಲಾ ಬೈಕ್ ಹಿಂಬಂದಿ ಸವಾರಳು ಹೆಸರು ಹೇಳಲು  ಬಯಸದೇ ತನ್ನ ಒಡಲಾಳದ ನೋವನ್ನು ಹೊರ ಹಾಕಿದ್ದಾಳೆ. ಗ್ರಾಮೀಣ ಭಾಗದ ಮಹಿಳೆ ಪೊಲೀಸರಿಗೆ ಹಿಡಿಶಾಪ ಹಾಕಿದ್ದಾಳೆ. ಅವರು ತನ್ನ ಸಹೋರನ ಜತೆ ಕೂಡ್ಲಿಗಿ ಕಡೆಯಿಂದ ತನ್ನೂರಿಗೆ ತೆರಳುವಾಗ ಪಟ್ಟಣದ ಹೊರವಲಯದಲ್ಲಿ ತಮ್ಮ ಜೀಪನ್ನು ನಿಲ್ಲಿಸಿ ದರೋಡೆಕೊರರಂತೆ ಹಣ ಕಿತ್ತಿದ್ದಾರೆ.

ರಸ್ತೆಯ ಪಕ್ಕ ತಮ್ಮ ಜೀಪ್ ನಿಲ್ಲಿಸಿಕೊಂಡು ರಸ್ತೆಯಲ್ಲಿ ಸಂಚರಿಸುವ ಬೈಕ್ ಗಳನ್ನು ತಡೆದು ತಪಾಸಣೆ ಮಾಡುತ್ತಿದ್ದರೆನ್ನಲಾಗಿದೆ. ತಪಾಸಣೆ ನೆಪಕ್ಕೆ ಮಾತ್ರ ಎಂಬ ಆಭಿಪ್ರಾಯ ಬಹುತೇಕ ಸಾರ್ವಜನಿಕರದ್ದಾಗಿದೆ.

ಈ ನೆಪದಲ್ಲಿ ಬೈಕ್ ಸವಾರರಿಂದ ಹಾಗೂ ಇತರೆ ವಾಹನ ಸವಾರರಿಂದ ಬೇಕಾ ಬಿಟ್ಟಿ ಹಣ ವಸೂಲಿ ಮಾಡುತ್ತಾರೆ ಎಂಬ ದೂರು ಇದೆ.

ಪೊಲೀಸ್ ಜೀಪ್ ನಲ್ಲಿ ಪೊಲೀಸರು ಇರುತ್ತಾರೆ ಆಷ್ಟೇ ಆದ್ರೆ ಪೊಲೀಸ್ ಅಧಿಕಾರಿಗಳಿರಲ್ಲ, ಬದಲಿಗೆ ಜೀಪ್ ಚಾಲಕರು ಅಥವಾ ಎ ಎಸೈ ಇರುತ್ತಾರೆ ಅಥವಾ ಹೋಂ ಗಾರ್ಡ್ ಇರುತ್ತಾರೆ. ಇದು ಒಂದು ಎರೆಡು ಪೊಲೀಸ್ ಠಾಣೆಯ ದರೋಡೆ ಪೊಲೀಸರ ಕಥೆಯಲ್ಲ, ವಿಜಯನಗರ ಜಿಲ್ಲೆಯ ವ್ಯಾಪ್ತಿಯ ಬಹುತೇಕ ಠಾಣೆಯಲ್ಲಿ ಜರುಗುತ್ತಿರುವ  ಬಹುತೇಕ ದಿನಗಳ ದಿನಚರಿಯಾಗಿದೆ .ಇದನ್ನು ಸ್ವತಃ ಪೊಲೀಸ್ ಇಲಾಖೆಯ  ಠಾಣೆಯ ಪ್ರಾಮಾಣಿಕ ಸಿಬ್ಬಂದಿಯವರು ಹೇಳುವ ಮಾತಾಗಿದೆ. ಸಂಬಂಧಿಸಿದಂತೆ ಮೇಲಾಧಿಕಾರಿಗಳಿಗೆ ನೊಂದವರು ದೂರು ನೀಡಿದರೆ, ದೂರು ನೀಡಿದವರನ್ನೇ ಟಾರ್ಗೇಟ್ ಮಾಡುತ್ತಾರಂತೆ. ಪ್ರಾರಂಭದಲ್ಲಿ ದೂರು ಹಿಂತೆಗೆದುಕೊಳ್ಳುವಂತೆ ದೂರು ದಾರರನ್ನು ಮನಪರಿವರ್ತನೆ ಮಾಡಲು ಪ್ರಯತ್ನಿಸುತ್ತಾರೆ. ಕೆಲ ಭ್ರಷ್ಟ ಸಿಬ್ಬಂದಿ ತಾವು ಪಕ್ಕಾ ಲೋಕಲ್ಲು ನಮಗೆ ಅವರು ಗೊತ್ತು ಇವರು ಗೊತ್ತಿದ್ದಾರೆ. ಅಧಿಕಾರಿಗಳಿಗೆ ತಾವೇ ಕಲೆಕ್ಷನ್ ಮಾಡಿಕೊಡುತ್ತಿದ್ದು ಕಾರಣ ಕ್ರಮ ಕೈಗೊಳ್ಳಲಾಗಲ್ಲ, ರಾಜಕಾರಣಿಗಳು ತಮ್ಮ ಹುಗುಳು ದಾಟಲ್ಲ ಅದಕ್ಕಾಗಿ ಅವರಿಗೆ ಇಂತಿಷ್ಟು ಕೊಡಲಾಗುತ್ತೆ. ಅಧಿಕಾರಿಗಳಿಗೆ ತಾವು  ವಾಹನಗಳಿಂದ ವಸೂಲಿ ಮಾಡಿದ ಹಣದಲ್ಲಿ ಇಂತಿಷ್ಟು ಪಾಲುಕೊಡಲಾಗುತ್ತದೆ. ಕೆಲವು ಮೀಡಿಯಾಗಳಿಗೂ ಇದರಲ್ಲಿ ಪಾಲಿದೆ. ಇದು ಕೇವಲ ವಿಜಯನಗರ ಜಿಲ್ಲೆ ಒಂದು ತಾಲೂಕಿನ ಕಥೆಯಲ್ಲ. ಜಿಲ್ಲೆಯ ಬಹುತೇಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗುತ್ತಿರುವ, ಅಖಂಡ ಭ್ರಷ್ಟಾಚಾರ ಕೂಪದ ನೈಜ್ಯ ಚಿತ್ರಣವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು