ಇತ್ತೀಚಿನ ಸುದ್ದಿ
ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 6: ಕೊಡಗಿನ ದಿಶಾ ದೇಚಮ್ಮ ಆಯ್ಕೆ
19/04/2022, 12:49
ಮಡಿಕೇರಿ(reporterkarnataka.com): ಝಿ ಟಿವಿಯಲ್ಲಿ ಪ್ರಸಾರವಾಗುವ ಜನಪ್ರಿಯ ನೃತ್ಯ ಕಾರ್ಯಕ್ರಮ ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 6 ಗೆ ಕೊಡಗು ಮೂಲದ ದಿಶಾ ದೇಚಮ್ಮ ಆಯ್ಕೆಯಾಗಿದ್ದಾರೆ.
ಚೋಟ್ರಂಡ ರವಿ ಮತ್ತು ಚೋಟ್ರಂಡ ಮಮತಾ ದಂಪತಿ ಮಗಳಾದ ದಿಶಾ ದೇಚಮ್ಮ ಮೂಲತಃ ದಕ್ಷಿಣ ಕೊಡಗಿನ ಬಿಟ್ಟಂಗಾಲದವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರಿಗೆ “ಮಡಿಕೇರಿಯ ಗುರುಕುಲ ಕಲಾ ಮಂಡಳಿಯ ನೃತ್ಯ ತರಬೇತುದಾರರಾದ ದಿನೇಶ್ ಪಿ.ಎನ್” ಅವರು ಮಾರ್ಗದರ್ಶನ ನೀಡಿರುತ್ತಾರೆ.