ಇತ್ತೀಚಿನ ಸುದ್ದಿ
ದಾಖಲಾಯ್ತು 123.3 ಫ್ಯಾರನ್ ಹೀಟ್ ತಾಪಮಾನ : ಅಚಾನಕ್ ಆಗಿ ಉಂಟಾದ ಕಾಡ್ಗಿಚ್ಚಿಗೆ ಹಳ್ಳಿ ಜನರ ಪಲಾಯನ
01/07/2021, 19:12
ಲಿಟ್ಟನ್ (ReporterKarnataka.com)
ಕೆನಡಾ ದೇಶದ ಅತಿ ಹೆಚ್ಚು ತಾಪಮಾನವಾದ 49.6 ಸೆ. (121.3ಫ್ಯಾರನ್ ಹೀಟ್) ಅನ್ನು ದಾಖಲಿಸಿದ ಕೆನಡಾದ ಲಿಟನ್ ಹಳ್ಳಿಯ ನಿವಾಸಿಗಳು ಕಾಡ್ಗಿಚ್ಚಿನಿಂದ ಪಲಾಯನ ಮಾಡಬೇಕಾದ ಘಟನೆ ಇಂದು ನಡೆದಿದೆ.
ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಲಿಟ್ಟನ್‌ನ ಮೇಯರ್ ಜನರನ್ನು ಸ್ಥಳಾಂತರಿಸಲು ಆದೇಶಿಸಿದ ಕೇವಲ 15 ನಿಮಿಷಗಳಲ್ಲಿ ಹಳ್ಳಿಯಲ್ಲಿ ಜ್ವಾಲೆ ಹರಡಿಕೊಂಡಿದೆ.
ಈ ವಾರ ಪಶ್ಚಿಮ ಕೆನಡಾದಲ್ಲಿ ಹೀಟ್ ವೇವ್ ಅಪ್ಪಳಿಸಿದ್ದು, ಬ್ರಿಟಿಷ್ ಕೊಲಂಬಿಯಾದಲ್ಲಿ ಸಾಮಾನ್ಯ ಸಾವಿನ ಸಂಖ್ಯೆಗಿಂತ ಈಗ ಸಾವಿನ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ಕಳೆದ ಐದು ದಿನದಲ್ಲಿ ಇಲ್ಲಿ 486 ಜನ ಸಾವನಪ್ಪಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಅಸಹಜವಾಗಿ ಹೆಚ್ಚಿನ ತಾಪಮಾನವು ಉತ್ತರ ಅಮೆರಿಕದ ಭಾಗದಲ್ಲಿ ದಾಖಲಾಗುತ್ತಿರುವುದು ಜನರನ್ನು ಆತಂಕಕ್ಕೆ ದೂಡಿದೆ.