ಇತ್ತೀಚಿನ ಸುದ್ದಿ
ದಾಖಲೆ ಬರೆದ ಅಡಿಕೆ ಬೆಲೆ: ಬೆಳ್ಳಾರೆಯಲ್ಲಿ ಕೆಜಿಗೆ 505 ರೂಪಾಯಿಗೆ ಮಾರಾಟ; ಇನ್ನೂ ಹೆಚ್ಚುವ ಸಾಧ್ಯತೆ
17/09/2021, 19:34
ಪುತ್ತೂರು(reporterkarnataka.com):
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಮಾರುಕಟ್ಟೆಯಲ್ಲಿ ಅಡಿಕೆ ಕೆಜಿಗೆ 505 ರೂಪಾಯಿಗೆ ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ. ಕ್ವಿಂಟಾಲ್ ಅಡಿಕೆ 50 ಸಾವಿರದ ಗಡಿ ದಾಟಿದ್ದು ಅಡಿಕೆ ಧಾರಾಣೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಳೆದ ವರ್ಷ ಅಡಿಕೆ ಇದ್ದರೂ ಧಾರಣೆ 450 ಆಸುಪಾಸಿನಲ್ಲಿತ್ತು. ಆದರೆ ಈ ವರ್ಷ ಕೆಲವು ಹೆಬ್ರಿ ಮಲೆನಾಡಿನ ಭಾಗಗಳಲ್ಲಿ ಅಧಿಕ ಮಳೆಯಿಂದ ಕೊಳೆರೋಗ ಅಧಿಕವಾಗಿ ವ್ಯಾಪಿಸಿದೆ. ಇದರಿಂದಾಗಿ ಅಡಿಕೆ ಫಸಲು ಕಮ್ಮಿಯಾಗಬಹುದು ಕೃಷಿಕರ ಊಹೆಯಾಗಿದೆ.
ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಕೆ.ಜಿ. ಅಡಿಕೆಗೆ 480 ರೂಪಾಯಿ ದರವಿದೆ. ಆದ್ರೆ ಈ ದರ ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.