ಇತ್ತೀಚಿನ ಸುದ್ದಿ
ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಗೆ ಕಂಕಣ ಭಾಗ್ಯ: ಅರಮನೆ ಮೈದಾನದಲ್ಲಿ ಅದ್ದೂರಿ ಮದುವೆ
21/08/2022, 19:22
ಬೆಂಗಳೂರು(reporterkarnataka.com): ಸ್ಯಾಂಡಲ್ ವುಡ್ ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ಅವರ ವಿವಾಹ ಸಂಗೀತ ದೀಪಕ್ ಜೊತೆ ಇಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ವೈಟ್ ಪೆಟಲ್ಸ್ ತ್ರಿಪುರ ವಾಸಿನಿಯಲ್ಲಿ ಚಿತ್ರರಂಗದ ಗಣ್ಯರ ಸಮಕ್ಷಮದಲ್ಲಿ ನಡೆಯಿತು.
2017ರಲ್ಲಿ “ಸಾಹೇಬ”ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದರ್ಪಣೆ ಗೈದಿದ್ದ ಮನೋರಂಜನ್ ಬೃಹಸ್ಪತಿ, ಮುಗಿಲ್ ಪೇಟೆ , ಚಿತ್ರಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದರು. ವಿವಾಹ ಮಹೋತ್ಸವಕ್ಕೆ ಡಾ. ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್, ಖುಷ್ಭೂ, ಉಮಾಶ್ರೀ, ಹಂಸಲೇಖ ರಾಕ್ ಲೈನ್ ವೆಂಕಟೇಶ್ ,ಶರಣ್, ಸೇರಿದಂತೆ ಬಹುತೇಕ ಸ್ಯಾಂಡಲ್ವುಡ್ ನ ಪ್ರಮುಖರು ಭಾಗಿಯಾಗಿದ್ದರು.