9:14 AM Sunday5 - October 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್

ಇತ್ತೀಚಿನ ಸುದ್ದಿ

ಕೊರೊನಾ ನಿಯಂತ್ರಣಕ್ಕ ಏನೇನು ಕ್ರಮ ಕೈಗೊಳ್ಳಬೇಕೋ ಕೈಗೊಳ್ಳಲಿ, ಕಾಂಗ್ರೆಸ್ ಬೆಂಬಲ ಸದಾ ಇದೆ:  ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ 

21/05/2021, 22:33

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ( reporterkarnataka news) :ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಏನೇನು ಕ್ರಮ ಕೈಗೊಳ್ಳಬೇಕೋ ಅದೆಲ್ಲವನ್ನೂ ಕೈಗೊಳ್ಳಲಿ, ಸರ್ಕಾರ ಮತ್ತು ಜಿಲ್ಲಾಡಳಿತ ರೋಗ ನಿಯಂತ್ರಣಕ್ಕೆ ಕೈಗೊಳ್ಳುವ ಎಲ್ಲಾ ಕ್ರಮಗಳಿಗೆ ಕಾಂಗ್ರೆಸ್ ಸದಾ ಬೆಂಬಲ ನೀಡುತ್ತದೆ ಎಂದು ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು. 

ಶುಕ್ರವಾರ ನಗರದ ಪ್ರವಾಸಿ ಮಂದಿರ ಮುಂಭಾಗ ವಿಧಾನಪರಿಷತ್ ಸದಸ್ಯ ಗೋವಿಂದರಾಜು ಒದಗಿಸಿರುವ ಎರಡು ಅಂಬುಲೆನ್ಸ್ ನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಏನೇನು ಕ್ರಮ ಕೈಗೊಳ್ಳಬೇಕೋ ಅದೆಲ್ಲವನ್ನೂ ಕೈಗೊಳ್ಳಲಿ, ಸರ್ಕಾರ ಮತ್ತು ಜಿಲ್ಲಾಡಳಿತದ ಜತೆ ಕಾಂಗ್ರೆಸ್ ಇರುತ್ತದೆ ಎಂದು ನುಡಿದರು. ಲಾಕ್‍ಡೌನ್ ಜಾರಿಗೊಳಿ ಸಿದ್ದರೂ ಕರೊನಾ ನಿಯಂತ್ರಣಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಅವರು, ಪಕ್ಷದಿಂದ ಇನ್ನೂ ಹೆಚ್ಚಿನ ಸಹಕಾರ ನೀಡಲು ಸಿದ್ದರಿದ್ದೇವೆ. ಮೆಡಿಸಿನ್ ಕಿಟ್ ಸೇರಿದಂತೆ ಸಂದರ್ಭ ಬಂದಾಗ ಜಿಲ್ಲಾಡಳಿತದ ಜತೆಗೆ ಚರ್ಚಿಸಿ ಇನ್ನಷ್ಟು ಸೌಲಭ್ಯ ಕೊಡಲು ರೆಡಿ ಎಂದರು.

ಅಂಬುಲೆನ್ಸ್ ಹಾಗೂ ಮೆಡಿಸಿನ್ ಕಿಟ್‍ನ್ನು ಹಸ್ತಾಂತರಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಹಾಗೂ ಒಲಂಪಿಕ್ ಸಮಿತಿ ಅಧ್ಯಕ್ಷ ಗೋವಿಂದರಾಜು, ನಮ್ಮ ಸೇವೆಯನ್ನು ಉಪ ಯೋಗಿಸಿಕೊಳ್ಳಲು ಜಿಲ್ಲಾಧಿಕಾ ರಿಗಳು ಮುಂದೆ ಬಂದಿರುವುದರಿ ಂದ ಇನ್ನಷ್ಟು ಸೇವೆ ಮಾಡಲು ಉತ್ತೇಜನ ಸಿಕ್ಕಿದೆ ಎಂದರು.ಸಾರ್ವಜನಿಕರು ಕಾರ್ಮಿಕರು, ಬಡವರಿಗೆ ಅನುಕೂಲವಾಗುವ ದೃಷ್ಠಿಯಿಂದ ಅಂಬುಲೆನ್ಸ್ ಸೇವೆ ಒದಗಿಸಲಾಗಿದೆ. ಸಂದರ್ಭ ಬಂದಾಗ ನಾಗರಿಕರು ಸೇವೆಯನ್ನು ಬಳ ಸಿಕೊಳ್ಳಬೇಕು ಹಾಗೂ ಸರ್ಕಾರದ ಆದೇಶ ಪಾಲಿಸುವ ಮೂಲಕ ಕರೊನಾ ನಿಯಂತ್ರಣಕ್ಕೆ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.

ಅಂಬ್ಯುಲೆನ್ಸ್‍ಗಳನ್ನು ಸ್ವೀಕರಿ ಸಿದ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಮಾತನಾಡಿ, ಎಂಎ ಲ್‍ಸಿ ಗೋವಿಂದರಾಜು ಅವರು 24/7ಉಚಿತ ಸೇವೆಯ 2 ಆಂಬ್ಯುಲೆನ್ಸ್‍ಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದಾರೆ ಎಂದು ತಿಳಿಸಿ ಧನ್ಯವಾದ ಸಲ್ಲಿಸಿದರು.ನಮ್ಮಲ್ಲಿ 67 ಆಂಬ್ಯುಲೆ ನ್ಸ್‍ಗಳಿದ್ದು, ಇವುಗಳನ್ನು ಒಳಗೊ ಂಡಂತೆ ಕೋವಿಡ್ ನಿರ್ವಹಣೆಗೆ ಬಳಸಿಕೊಳ್ಳುತ್ತೇವೆ. ಕೋವಿಡ್ ರೋಗಿಗಳನ್ನು ಕರೆದುಕೊಂಡು ಬರುವುದಕ್ಕೆ ಸೇರಿದಂತೆ ಎಲ್ಲ ಕೆಲಸಗಳಿಗೆ ಬಳಸಿಕೊಳ್ಳಲಾ ಗುವುದು. ಇವುಗಳನ್ನು ಡಿಜಿಟಲ್ ನರ್ವ್ ಸೆಂಟರ್‍ಗೆ ಲಿಂಕ್ ಮಾಡಿ ಜನರಿಗೆ ಸೇವೆ ನೀಡಲಾಗುವುದು ಎಂದು ಹೇಳಿದರು.

ಆಂಬ್ಯುಲೆನ್ಸ್ ಜತೆಗೆ ಮೆಡಿ ಸಿನ್, ಮಾಸ್ಕ್‍ಗಳನ್ನು ವಿತರಣೆ ಮಾಡಲಾಗಿದೆ. ಮೆಡಿಸಿನ್ ಬಹಳ ಅವಶ್ಯಕೆತಯಿದ್ದು, ಎ ಸಿಂತೆ ಮೆಟಿಕ್, ಹೋಂ ಐಸೋಲೇ ಷನ್, ಪ್ರಾಥಮಿಕ ಹಂತದಲ್ಲಿ ರುವವರಿಗೆ ಕೊಡಲಾಗುತ್ತಿದ್ದು, ಅದಕ್ಕೂ ಉಪಯೋಗವಾಗುತ್ತಿದೆ. ಎಲ್ಲವನ್ನು ಬಳಸಿಕೊಳ್ಳ ಲಾಗುª ÀÅದಾಗಿ ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷಾ ್ಠಧಿಕಾರಿ ಕಾರ್ತಿಕ್‍ರೆಡ್ಡಿ ಮಾತನಾಡಿ, ಜಿಲ್ಲಾಡಳಿತಕ್ಕೆ ಆಕ್ಸಿಜನ್ ಸಹಿತ 2 ಆಂಬ್ಯುಲೆನ್ಸ್‍ಗಳನ್ನು ನೀಡಿದ್ದಾರೆ. ನಾಗರೀಕರಿಗೆ ಉಚಿತ ಸೇವೆ ಇರುತ್ತದೆ.

ಈ ವಾಹನಗಳ ಚಾಲಕರ ಮೊಬೈಲ್ ಸಂಖ್ಯೆಯನ್ನು ಆಸ್ಪತ್ರೆ ಮತ್ತು ಡಿಜಿಟಲ್ ನರ್ವ್ ಸೆಂಟ ರ್‍ಗೆ ಲಿಂಕ್ ಮಾಡಲಾಗುವುದು. 24 ಗಂಟೆಯೂ ಇವುಗಳ ಸೇವೆ ಇರುವವುದರಿಂದ ಜನರು ಬಳಸಿ ಕೊಳ್ಳಬೇಕೆಂದು ಕೋರಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಚಂ ದ್ರಾರೆಡ್ಡಿ ಮಾತನಾಡಿ, ಪಕ್ಷದಿಂದ ಈಗಾಗಲೇ 4 ಆಂಬ್ಯುಲೆನ್ಸ್‍ಗಳನ್ನು ನೀಡಿದ್ದು, ಈಗ 2 ನೀಡುತ್ತಿದ್ದೇವೆ. ಮುಂದೆಯೂ 2 ಆಂಬ್ಯುಲೆನ್ಸ್ ನೀಡುತ್ತೇವೆ. ಅಲ್ಲದೆ ಚಿರಶಾಂತಿಯ 2 ವಾಹನಗಳನ್ನು ನೀಡಿದ್ದು, ಪುನಃ ಒಂದು ವಾಹನ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್, ಕಾಂಗ್ರೆಸ್ ಎಸ್ಸಿಘಟ ಕದ ಜಿಲ್ಲಾಧ್ಯಕ್ಷ ಕೆ.ಜಯದೇವ್, ಬೆಂಗಳೂರು ಉತ್ತರ ವಿವಿ ಸಿಂಡಿ ಕೇಟ್ ಸದಸ್ಯ ಎಂ.ವಿ.ರಂಗಪ್ಪ, ಬೆಂಗಳೂರಿನ ಎಸ್‍ಐಐಪಿ ವೈದ್ಯ ಡಾ.ಪರಮೇಶ್ವರ್ ಸಿ.ಎಂ., ಕಾಂ ಗ್ರೆಸ್ ಮುಖಂಡ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು