2:04 PM Saturday29 - August 2026
ಬ್ರೇಕಿಂಗ್ ನ್ಯೂಸ್
ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ

ಇತ್ತೀಚಿನ ಸುದ್ದಿ

ಕೊರೊನಾದಿಂದ ಸತ್ತವರು 30 ಸಾವಿರ ಅಲ್ಲ, 3 ಲಕ್ಷಕ್ಕೂ ಅಧಿಕ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್

20/07/2021, 17:53

ಮಂಗಳೂರು(reporterkarnataka): ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯ ಕರ್ತರಿಗೆ ಪಕ್ಷ ಬಲಗೊಳಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ  ಸಲೀಂ ಅಹಮ್ಮದ್ ಹೇಳಿದರು.

ಅವರು  ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

ಜುಲೈ 23ರಿಂದ 31ವರೆಗೆ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯಾದ್ಯಂತ ಕಾಂಗ್ರೆಸ್ ಮುಖಂಡರುಗಳಿಗೆ ಪಕ್ಷ ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ   ಸಭೆ ನಡೆಸಲಾಗುವುದು. ಆಗಸ್ಟ್ 23ಕ್ಕೆ ಮಂಗಳೂರಿಗೆ   ರಣದೀಪ್ ಸಿಂಗ್ ಸುರ್ಜೇವಾಲ ಆಗಮಿಸಿ ಸಭೆಯ ನೇತೃತ್ವ ವಹಿಸಲಿದ್ದಾರೆ.ಸಭೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,
ಹಾಲಿ ಮಾಜಿ, ಶಾಸಕರು, ಸಂಸದರು, ಜಿಲ್ಲಾವಾರು ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕೊರೊನಾ 2ನೇ ಅಲೆಯ ಬಗ್ಗೆ ಕಾಂಗ್ರೆಸ್ ಎಚ್ಚರಿಕೆ ನೀಡಿದ್ದರೂ ಬಿಜೆಪಿ ಸರ್ಕಾರ ಜನರ ಜೀವದ ಜತೆ ಚೆಲ್ಲಾಟವಾಡಿದೆ. ಸರಕಾರ ಕೊರೊನಾದಿಂದ ಸತ್ತವರಿಗೆ  ಪರಿಹಾರ ನಿಧಿ ಕೊಡಬೇಕಾದ್ದರಿಂದ ಸತ್ತವರು 30 ಸಾವಿರ ಎಂದು ಘೋಷಿಸಿದೆ. ಆದರೆ ಸತ್ತವರ ಸಂಖ್ಯೆ 3 ಲಕ್ಷಕ್ಕಿಂತ ಹೆಚ್ಚಿದೆ ಎಂದು ಆರೋಪಿಸಿದರು. ಈ ಬಗ್ಗೆ ಕಾಂಗ್ರೆಸ್ ಡೆತ್ ಸಮೀಕ್ಷೆ ನಡೆಸಲಿದೆ ಎಂದು ಹೇಳಿದರು. 

3ನೇ ಅಲೆಯ ಬರುತ್ತಿದೆ. ನಿಮ್ಮ ರಾಜಕೀಯ ಡೊಂಬರಾಟ ನಿಲ್ಲಿಸಿ ಜನರ ಪ್ರಾಣ ರಕ್ಷಿಸಿ ಎಂದು  ಬಿಜೆಪಿ ಸರಕಾರಕ್ಕೆ ಎಚ್ಚರಿಕೆ  ನೀಡುತ್ತಿದ್ದೇವೆ. ಎಂದರು. 

ಸಂಸದ ನಳಿನ್ ಕುಮಾರ್ ಆಡಿಯೋ ಬಗ್ಗೆ ಪ್ರತಿಕ್ರಿಯಿಸಿ ಯು. ಟಿ. ಖಾದರ್ ಈ ಧ್ವನಿ ಅವರದಲ್ಲ ಎಂದು ಮುಖ್ಯ ಮಂತ್ರಿ ಪ್ರಮಾಣೀಕರಿಸಲಿ ಎಂದು ಕುಟುಕಿದರು. 

ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ದ. ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹರೀಶ್ ಕುಮಾರ್, ಮಾಜಿ ಶಾಸಕ ಜೆ. ಆರ್. ಲೋಬೊ, ಯುತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮತ್ತಿತರರು ಉಪಸ್ಥಿತರಿದ್ದರು

ಇತ್ತೀಚಿನ ಸುದ್ದಿ

ಜಾಹೀರಾತು