2:19 PM Friday19 - December 2025
ಬ್ರೇಕಿಂಗ್ ನ್ಯೂಸ್
ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ

ಇತ್ತೀಚಿನ ಸುದ್ದಿ

ರಾಜ್ಯದಲ್ಲಿ ಕಾಂಗ್ರೆಸ್ ತಾಲಿಬಾನ್ ರೀತಿ ಆಡಳಿತ ನಡೆಸುತ್ತಿದೆ: ಮಂಗಳೂರಿನಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆರೋಪ

12/06/2024, 16:24

ಮಂಗಳೂರು(reporterkarnataka.com): ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಕೋಮು ಸೌಹಾರ್ದತೆ ಹಾಳು ಮಾಡುವ ಮೂಲಕ ತಾಲಿಬಾನಿ ರೀತಿಯಲ್ಲಿ ಸರಕಾರ ನಡೆಸುತ್ತಿದೆ. ತಾಲಿಬಾನ್ ಸರಕಾರವನ್ನು ನಾವು ಬಗ್ಗು ಬಡಿಯುತ್ತೇವೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.
ಮಂಗಳೂರಿನ ಹೊರ ವಲಯದ ಬೋಳ್ಯಾರ್‌ನಲ್ಲಿ ನಡೆದ ಚೂರಿ ಇರಿತ ಪ್ರಕರಣದ ಕುರಿತು ನಗರದಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು, ವಿಜಯೋತ್ಸವದ ವೇಳೆ ಬಿಜೆಪಿ ಕಾರ್ಯಕರ್ತರು
ಭಾರತ್ ಮಾತಾ ಕೀ ಜೈ ಘೋಷಣೆ ಮಾತ್ರ ಕೂಗಿದ್ದಾರೆ.
ನಂತರ ಅವರನ್ನು ಅಟ್ಟಾಡಿಸಿ ಡ್ರ್ಯಾಗನ್ ನಿಂದ ಹೊಟ್ಟೆಗೆ ತುಚ್ಚಿದ್ದಾರೆ. ಅವರ ಕೈಯಲ್ಲಿ ಡ್ರ್ಯಾಗನ್‌ ಹೇಗೆ ಬಂತು, ಇದು ಪೂರ್ವ ನಿಯೋಜಿತ ಕೊಲೆ ಪ್ರಯತ್ನ ಎಂದು ಆರ್. ಅಶೋಕ್ ಆಪಾದಿಸಿದರು.


ವಿಧಾನಸಭೆಯಲ್ಲಿ ಪಾಕಿಸ್ತಾನಕ್ಕೆ ಜೈ ಅಂದವರಿಗೆ ಬೇಲ್ ಕೊಡಿಸಿದ್ದಾರೆ. ಕರ್ನಾಟಕವನ್ನು ತಾಲಿಬಾನ್ ಮಾಡಲು ಹೋಗಿದ್ದಾರೆ. ತಾಲಿಬಾನ್ ಸರ್ಕಾರವನ್ನು ನಾವು ಬಗ್ಗು ಬಡಿಯುತ್ತೇವೆ. ಇದನ್ನು ಇಲ್ಲಿಗೆ ಬಿಡುದಿಲ್ಲ, ವಿಧಾನಸಭೆಯಲ್ಲಿ ಸ್ಪೀಕರ್ ಮುಂದೆ ಹೋರಾಟ ಮಾಡುತ್ತೇವೆ. ಇದು ಸ್ಪೀಕರ್ ಕ್ಷೇತ್ರದಲ್ಲಿ ನಡೆದಿರುವುದು.
ಹಲ್ಲೆಗೆ ಒಳಗಾದ ಪರವಾಗಿ ನಿಲ್ಲಬೇಕು ಅದು ಮನುಷ್ಯತ್ವ.
ಅದೇ ಆಸ್ಪತ್ರೆಗೆ ಆರೋಗ್ಯ ಸಚಿವರು ಹೋಗಿದ್ದರು, ಗಾಯಗೊಂಡವರನ್ನು ವಿಚಾರಿಸಿಲ್ಲ. ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಮತ್ತೆ ಕೇಸ್ ಹಾಕಿದ್ದಾರೆ.
ಘಟನೆ ಆಗಿ ಮರುದಿನ ಕೇಸ್ ಮಾಡಿದ್ದಾರೆ, ಅಷ್ಟೋತ್ತು ಮಣ್ಣು ತಿನ್ನುತಿದ್ರಾ..? ಎಂದು ಅವರು ಕಿಡಿ ಮಾರಿದರು.
ವಿಡಿಯೋದಲ್ಲಿ ಪ್ರಚೋದನೆಕಾರಿ ಹೇಳಿದ್ರೆ ಬಿಡುಗಡೆ ಮಾಡಿ. ಅಮಾಯಕ ಮೇಲೆ ಕೇಸ್ ಮಾಡಿ, ಮೈನ್ ಕೇಸ್ ವೀಕ್ ಮಾಡುತ್ತಿದ್ದಾರೆ.
ಕಾರ್ಯಕರ್ತರ ಮೇಲೆ ಹಾಕಿದ ಕೇಸ್ ವಾಪಾಸು ತೆಗೆದುಕೊಳ್ಳಬೇಕು. ಕಾನೂನಿಗೆ ಬೆಲೆ ಇಲ್ಲ, ಹಾಳಾಗಿ ವರ್ಷ ಆಗಿದೆ. ಜಿಲ್ಲೆಗೆ ಒಬ್ಬೊಬ್ಬ ಹೋಮ್ ಮಿನಿಸ್ಟರ್ ಆಗಿದ್ದಾರೆ.
ಕ್ರೈಂ ರೇಟ್ 40% ಜಾಸ್ತಿಯಾಗಿದೆ. ಗೂಂಡಾ ರಾಜ್ಯ ಆಗೋಕೆ ಎಲ್ಲರನ್ನು ಪ್ರಿಪೇರ್ ಮಾಡಿದ್ದಾರೆ ಎಂದು ಅವರು ನುಡಿದರು.
ಸರ್ಕಾರ ಬದುಕಿದೆಯಾ? ಸತ್ತಿದೆಯಾ ಗೊತ್ತಾಗುತ್ತಿಲ್ಲ.
ಕಾಂಗ್ರೆಸ್‌ನಲ್ಲಿ ಪುಡಿ ರೌಡಿಗಳಿಗೆ ಪರವಾನಿಗೆ ಕೊಟ್ಟಂತೆ ಆಗಿದೆ.
ನಿಮ್ಮ ಯೋಗ್ಯತೆಗೆ ಗ್ಯಾರಂಟಿ ಏನಾಯ್ತು?, ನಿಮ್ಮ ಶಾಸಕರೇ ಉಗಿಯುತ್ತಿದ್ದಾರೆ.
ನಾಳೆ ಸಭೆ ಸೇರಿ, ಇದಕ್ಕೆ ಯಾವ ಹೋರಾಟ ಮಾಡುತ್ತೇವೆ ಎನ್ನುವ ತೀರ್ಮಾನ ಮಾಡುತ್ತೇವೆ. ಕಾರ್ಯಕರ್ತರ ಪರವಾಗಿ ನಿಲ್ಲುತ್ತೇವೆ
ಜಿಲ್ಲಾಡಳಿತ ಚೂರಿ ಇರಿತಕ್ಕೆ ಒಳಗಾದವರ ವೆಚ್ಚ ಭರಿಸಬೇಕು‌ ಎಂದು ಅವರು ಒತ್ತಾಯಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು