ಇತ್ತೀಚಿನ ಸುದ್ದಿ
ಕರಿಮಣೇಲು ಸಂತ ಜೂಡರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಬಡ್ಡಿ ಪಂದ್ಯಾಟ
22/08/2025, 01:39

ಬೆಳ್ತಂಗಡಿ(reporterkarnataka.com): ಬೆಳ್ತಂಗಡಿ ತಾಲೂಕಿನ ಬಜಿರೆ, ನಿಟ್ಟಿಡೆ ಮತ್ತು ಪಡ್ಡಂದಡ್ಕ ಕ್ಲಸ್ಟರ್ ಗಳ ವಲಯ ಮಟ್ಟದ ಕಬಡ್ಡಿ ಪಂದ್ಯಾಟ ಕರಿಮಣೇಲು ಸಂತ ಜೂಡರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.
ವೇಣೂರು ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ಕಾಶಿನಾಥ್ ಉದ್ಘಾಟಿಸಿದರು. ಎಲ್. ಜೆ. ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಸಮೂಹ ಸಂಪನ್ಮೂಲ ವ್ಯಕ್ತಿ ಆರತಿ, ನೋಡಲ್ ಅಧಿಕಾರಿ ಪುಷ್ಪಾ, ಶಿಕ್ಷಕ ಸಂಘದ ಕೋಶಾಧಿಕಾರಿ ರಾಜೇಶ್ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಮರ್ಸೆಲಿನ್ ಸ್ವಾಗತಿಸಿದರು. ಸುಪ್ರೀತಾ ವಂದಿಸಿದರು. ಶಿಕ್ಷಕಿ ಮೀನಾ ಮೋನಿಸ್ ನಿರ್ವಹಿಸಿದರು.