11:22 PM Tuesday1 - April 2025
ಬ್ರೇಕಿಂಗ್ ನ್ಯೂಸ್
Chikkamagaluru | ಅನ್ನದಾತ ಆತ್ಮಹತ್ಯೆ: ಕಿರುಕುಳ ನೀಡಿದ ಬ್ಯಾಂಕ್ ಎದುರು ರೈತನ ಪಾರ್ಥಿವ… Mangaluru | ಜಾಮರ್ ಸಮಸ್ಯೆ ಬಗೆಹರಿಸದಿದ್ದರೆ ಜೈಲಿನೊಳಗೆ ನುಗ್ಗಿ ಕಿತ್ತು ಬಿಸಾಕ ಬೇಕಾಗುತ್ತದೆ:… Delhi | ರಾಜ್ಯದ್ದು “ಜನ-ಕರ” ವಸೂಲಿ ಸರಕಾರ: ಕಾಂಗ್ರೆಸ್‌ ವಿರುದ್ಧ ಕೇಂದ್ರ ಸಚಿವ… Chikkamagaluru | ಕೆಮ್ಮಣ್ಣುಗುಂಡಿ ಸಮೀಪ ವಿದ್ಯುತ್ ಶಾಕ್ ನಿಂದ ಕಾಡಾನೆ ದಾರುಣ ಸಾವು ಕೂಡ್ಲಿಗಿ: ರಂಜಾನ್ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಭಾಗಿ ಭಾಗಿ Kolara | ಶ್ರೀನಿವಾಸಪುರದಲ್ಲಿ ಸಂಭ್ರಮ- ಸಡಗರದಲ್ಲಿ ಈದ್-ಉಲ್-ಫಿತರ್ ಆಚರಣೆ: ಸಾಮೂಹಿಕ ಪ್ರಾರ್ಥನೆ PDO | ಮಾದರಿ ಗ್ರಾಮ ಪಂಚಾಯತಿ ನಿರ್ಮಾಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ… Bangalore | ಸಬಲೀಕರಣ ಜತೆಗೆ ಮಹಿಳಾ ಸುರಕ್ಷತೆ: ‘ಬಿ.ಸೇಫ್’ ಸಮೀಕ್ಷಾ ವರದಿ ಬಿಡುಗಡೆ Bangalore | ಬೇಡಿಕೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಬ್ಯಾಂಕ್ ನಿವೃತ್ತರ ಒಕ್ಕೂಟಗಳ… MSIL | ಸರಕಾರಿ, ಖಾಸಗಿ ಉತ್ಪನ್ನಗಳ ಮಾರಾಟ, ಖರೀದಿಗೆ ನೆರವಾಗಲಿದೆ ಇ ಪೋರ್ಟಲ್‌

ಇತ್ತೀಚಿನ ಸುದ್ದಿ

ಚುನಾವಣಾ ಸಾಕ್ಷರತಾ ಕ್ಲಬ್ ರಸಪ್ರಶ್ನೆ: ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಹೊಸೂರು ಗುಡ್ಡೇಕೇರಿ ಪ್ರೌಢಶಾಲೆ ವಿದ್ಯಾರ್ಥಿಗಳು

24/11/2024, 16:24

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಚುನಾವಣಾ ಸಾಕ್ಷರತಾ ಕ್ಲಬ್ ಆಶ್ರಯದಲ್ಲಿ ನಡೆದ ತಾಲೂಕು ‌ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಗುಡ್ಡೇಕೇರಿ ಶಾಲಾ ಮಕ್ಕಳು ಲಿಖಿತ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು, ಮೌಖಿಕ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ಅಂತಿಮ ಸುತ್ತಿನಲ್ಲಿ, ಸಹ್ಯಾದ್ರಿ ಪ್ರೌಢಶಾಲೆ, ವಾಗ್ದೇವಿ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಮೇಗರವಳ್ಳಿ, ಸರ್ಕಾರಿ ಪ್ರೌಢಶಾಲೆ ಕೊಡ್ಲು ಹಾಗೂ ಗುಡ್ಡೇಕೇರಿ ಪ್ರೌಢಶಾಲೆ ಭಾಗವಹಿಸಿದ್ದವು. ಅಂತಿಮವಾಗಿ ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಯ ಮಕ್ಕಳು ಪ್ರಥಮ ಸ್ಥಾನ ಪಡೆದಿದ್ದಾರೆ.
ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾದ ವೀರೇಶ್ ಟಿ. ಅವರ ಮಾರ್ಗದರ್ಶನ ಹಾಗೂ ಎಲ್ಲಾ ಶಿಕ್ಷಕರ ಸಹಕಾರದಲ್ಲಿ ಸ್ಪರ್ಧೆಗೆ ಭಾಗವಹಿಸಿದ್ದ ಅಶ್ವಿನಿ ಪ್ರಭುಗೌಡರ್ ತುಂಬಿಗಿ ಹಾಗೂ ನಮ್ರತಾ ಮೋಹನ್ ನಂಟೂರು ಈಗ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಇದೇ ಸ್ಪರ್ಧೆಯಲ್ಲಿ ಇದೇ ಶಾಲೆಯ ಅಕ್ಷತಾ ಎಚ್. ಯು. ಮತ್ತು ಶ್ರೀರಕ್ಷಾ ಕರ್ನಾಟಕ ರಾಜ್ಯ ಮಟ್ಟದಲ್ಲಿ ರನ್ನರ್ ಆಪ್ ಪ್ರಶಸ್ತಿ ಪಡೆದು ಜಿಲ್ಲೆಗೆ ತಾಲೂಕಿಗೆ ಕೀರ್ತಿ ತಂದಿದ್ದರು.
ಮಕ್ಕಳಿಗೆ ಅತ್ಯುತ್ತಮ ತರಬೇತಿ ನೀಡಿದ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ವೀರೇಶ್ ಟಿ. ಹಾಗೂ ಸಹಕಾರ ನೀಡಿದ ಎಲ್ಲಾ ಶಿಕ್ಷಕರಿಗೆ, ವಿಜಯಿ ಶಾಲಿಯಾದ ಅಶ್ವಿನಿ ಪ್ರಭುಗೌಡರ್ ತುಂಬಿಗಿ ಹಾಗೂ ನಮ್ರತಾ ಮೋಹನ್ ಅವರಿಗೆ ಪೋಷಕರ ಪರವಾಗಿ, ಮಕ್ಕಳ ಪರವಾಗಿ ಎಸ್ ಡಿಎಂಸಿ ಪರವಾಗಿ, ಎಸ್ ಡಿಎಂಸಿ ಅಧ್ಯಕ್ಷರಾದ ಸುರೇಶ್ ಎಂ. ಜಿ. ಹಾಗೂ ಮುಖ್ಯ ಶಿಕ್ಷಕ ಮಂಜು ಬಾಬು ಎಚ್. ಪಿ. ಅಭಿನಂದನೆಗಳನ್ನು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು