1:59 PM Wednesday18 - March 2026
ಬ್ರೇಕಿಂಗ್ ನ್ಯೂಸ್
Chikkamagaluru | ಕೈ ಮುಖಂಡನ ವಿರುದ್ಧ ನ್ಯಾಯಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ… ಸಚಿವರೇ ಇಲ್ಲ.. ಏನ್ ಮಾಡ್ಬೇಕು..?’ ಈಗ ಹೊರಟ್ಟಿ ಸರದಿ: ಸಚಿವರ ಗೈರು ಕುರಿತು… ಯುಗಾದಿ ಮತ್ತು ರಂಜಾನ್ ಹಬ್ಬಗಳ ಸರಣಿ ರಜೆ | ಪ್ರಯಾಣಿಕರಿಗೆ ಶಾಕ್‌: ಖಾಸಗಿ… Kodagu | ಅಕಾಲಿಕ ಮಳೆ: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಹಾನಿ ಸ್ಪೀಕರ್‌ ಸಭಾತ್ಯಾಗ ಪ್ರಕರಣ: ಖಾದರ್ ಸಿಟ್ಟಿಗೆ 8 ಹಿರಿಯ ಐಎಎಸ್‌ ಅಧಿಕಾರಿಗಳಿಗೆ ಶೋಕಾಸ್… Mangaluru | ಕೊಂಕಣಿ ಸಾಹಿತಿ ಎಚ್.ಎಂ. ಪೆರ್ನಾಲ್ ಗೆ 2025 ಕೇಂದ್ರ ಸಾಹಿತ್ಯ… ಉತ್ತರಿಸದ ಸಚಿವರು: ಇದೇ ಮೊದಲ ಬಾರಿಗೆ ಸ್ಪೀಕರ್ ಸಭಾತ್ಯಾಗ; ಮೂವರು ಅಧಿಕಾರಿಗಳಿಗೆ ತಲೆದಂಡ ರಾಜ್ಯ ಉಪ ಚುನಾವಣೆ: ಬಾಗಲಕೋಟೆ, ದಾವಣಗೆರೆ ದಕ್ಷಿಣದಲ್ಲಿ ಏಪ್ರಿಲ್ 9ರಂದು ಮತದಾನ, ಮೇ… ಕಾರಿನ ಮೇಲೆ ಉರುಳಿದ ಕಟ್ಟಿಗೆ ತುಂಬಿದ ಲಾರಿ: ಮಗು ಸಹಿತ ದಂಪತಿ ಪವಾಡಸದೃಶ… ಕಲಬುರಗಿ; ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ: ವಿಧಾನಸಭೆಯಲ್ಲಿ ಸಚಿವ ಬೈರತಿ ಸುರೇಶ್…

ಇತ್ತೀಚಿನ ಸುದ್ದಿ

Chikkamagaluru | ಡ್ರಂಕ್​​ ಆ್ಯಂಡ್​​ ಡ್ರೈವ್​​ ಮಾಡಿದವನಿಗೆ ಕೋರ್ಟ್​​ ಏನು ಶಿಕ್ಷೆ ನೀಡಿದೆ ನೀವೇ ನೋಡಿ!

18/03/2026, 13:59

ಚಿಕ್ಕಮಗಳೂರು(reporterkarnataka.com):ಚಿಕ್ಕಮಗಳೂರು ಕೋರ್ಟ್ ಡ್ರಂಕ್ ಆ್ಯಂಡ್ ಡ್ರೈವ್ ಮಾಡಿದವನಿಗೆ ವಿಶಿಷ್ಟ ಶಿಕ್ಷೆ ವಿಧಿಸಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದ ವ್ಯಕ್ತಿಗೆ ಟ್ರಾಫಿಕ್ ರೂಲ್ಸ್ ಬೋರ್ಡ್ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ನಿಲ್ಲುವಂತೆ ಕಡೂರು ಜೆಎಂಎಫ್ ಸಿ ನ್ಯಾಯಾಲಯ ಆದೇಶಿಸಿದೆ.

ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಹೆಚ್ಚೆಂದರೆ ದಂಡ ಹಾಕಬಹುದು ಎಂಬ ಉಡಾಫೆಯ ಮನಸ್ಥಿತಿಗೆ ತಲುಪಿರುವವರಿಗೆ ಈ ಆದೇಶ ಉತ್ತಮ ಪಾಠ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಅದೆಷ್ಟೇ ಜಾಗೃತಿ ಕೆಲಸಗಳನ್ನು ಸಂಚಾರಿ ಪೊಲೀಸರು ಮಾಡಿದರೂ ಕೆಲ ವಾಹನ ಸವಾರರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನಗಳ ಚಾಲನೆ ಹಲವರ ಅಭ್ಯಾಸವಾಗಿಹೋಗಿದೆ. ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಹೆಚ್ಚೆಂದರೆ ದಂಡ ಹಾಕಬಹುದು ಎಂಬ ಉಡಾಫೆಯ ಮನಸ್ಥಿತಿಗೆ ಜನ ತಲುಪುತ್ತಿದ್ದಾರೆ. ಆದರೆ ಚಿಕ್ಕಮಗಳೂರಿನಲ್ಲಿ ನಡೆದ ಪ್ರಕರಣವೊಂದು ಅಂತವರಿಗೆ ಪಾಠವಾಗುವಂತಿದೆ. ಮದ್ಯಪಾನ ಮಾಡಿ ಬೈಕ್ ಚಾಲನೆ ಮಾಡಿದ್ದ ವ್ಯಕ್ತಿಗೆ ನ್ಯಾಯಾಲಯ ಶಾಕ್​​ ಕೊಟ್ಟಿದ್ದು, ಟ್ರಾಫಿಕ್ ರೂಲ್ಸ್ ಇರುವ‌ ಬೋರ್ಡ್ ಹಿಡಿದು ನಿಲ್ಲುವಂತೆ ಆದೇಶ ಮಾಡಿದೆ.
ಹೌದು, ಕಡೂರು ತಾಲೂಕಿನ ಬಿಸಲೆಹಳ್ಳಿ ಗ್ರಾಮದ ರಂಜಿತ್ ಕುಮಾರ್ ವಿರುದ್ಧ ಮದ್ಯಪಾನ ಮಾಡಿ ಬೈಕ್​​ ಚಾಲನೆ ಮಾಡಿದ್ದ ಕೇಸ್​​ ದಾಖಲಾಗಿತ್ತು. ಪ್ರಕರಣದ ವಿಚಾರಣೆ ವೇಳೆ ಕಡೂರು JMFC ಕೋರ್ಟ್ ನಿರೀಕ್ಷೆಗೂ ಮೀರಿದ ಆದೇಶ ನೀಡಿದ್ದು, ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಟ್ರಾಫಿಕ್ ರೂಲ್ಸ್ ಇರುವ‌ ಬೋರ್ಡ್ ಹಿಡಿದು ರಂಜಿತ್ ಕುಮಾರ್ ರಸ್ತೆಯಲ್ಲಿ ನಿಲ್ಲಬೇಕು ಎಂದು ತಿಳಿಸಿದೆ.
ಪ್ರಕರಣ ಸಂಬಂಧ ಆರೋಪಿ ರಂಜಿತ್​​ ಕುಮಾರ್​​ ಕೂಡ ವಿಚಾರಣೆ ವೇಳೆ ತನ್ನ ತಪ್ಪು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಮರವಂಜಿ ಸರ್ಕಲ್​​/ ಮಲ್ಲೇಶ್ವರ ಸರ್ಕಲ್​​ನಲ್ಲಿ ಮಾರ್ಚ್​​ 17ರಂದು (ಇಂದು) ಬೆಳಿಗಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗೆ ಟ್ರಾಫಿಕ್ ರೂಲ್ಸ್ ಇರುವ‌ ಬೋರ್ಡ್ ಹಿಡಿದು ರಂಜಿತ್​​ ನಿಲ್ಲಬೇಕು ಎಂದಿರುವ ಕೋರ್ಟ್​​, ಈತ ಕಮ್ಯುನಿಟಿ ಸೇವೆ ಮಾಡುತ್ತಿರುವುದನ್ನು ನೋಡಿಕೊಳ್ಳಲು ಓರ್ವ ಪೊಲೀಸ್​​ ಸಿಬ್ಬಂದಿ ನಿಯೋಜನೆಗೂ ಸೂಚಿಸಿದೆ. ಸಂಜೆ 5 ಗಂಟೆಯ ಬಳಿಕ ಕೋರ್ಟ್​​ ಸೂಚನೆಯನ್ನು ಆತ ಪಾಲಿಸಿದ್ದಾನೆಯೋ ಅಥವಾ ಇಲ್ಲವೋ ಎನ್ನುವ ಬಗ್ಗೆ ನ್ಯಾಯಾಲಯಕ್ಕೆ ವರದಿ ನೀಡುವಂತೆಯೂ ಸೂಚಿಸಿದೆ. ಕೋರ್ಟ್​​ ಆದೇಶದ ಹಿನ್ನೆಲೆ ಮರವಂಜಿ ಸರ್ಕಲ್​​ನಲ್ಲಿ ರಂಜಿತ್​​ ಬೋರ್ಡ್​​ ಹಿಡಿದು ನಿಂತಿದ್ದು, ಪೊಲೀಸ್​​ ಸಿಬ್ಬಂದಿಯನ್ನೂ ನಿಯೋಜನೆ ಮಾಡಲಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು