6:53 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಚೇತನಾಸ್ ಎಜುಕೇಶನ್ ಫೌಂಡೇಶನ್‌: ಏರ್‌ಬ್ರೆಶ್ ಎಚ್‌ಡಿ ಮೇಕಪ್ ಕೋರ್ಸ್‌ ಮೊದಲ ಬ್ಯಾಚ್ ಪದವಿ ಪ್ರದಾನ

08/05/2023, 00:01

ಮಂಗಳೂರು(reporterkarnataka.com): ಚೇತನಾಸ್ ಬ್ಯೂಟಿ ಲಾಂಜ್‌ನ ಅಂಗವಾದ ಚೇತನಾಸ್ ಎಜುಕೇಶನ್ ಫೌಂಡೇಶನ್‌ನ ಏರ್‌ಬ್ರೆಶ್ ಎಚ್‌ಡಿ ಮೇಕಪ್ ಕೋರ್ಸ್‌ನ ಮೊದಲ ಬ್ಯಾಚ್ ನ ಪದವಿ ಪ್ರದಾನ ಸಮಾರಂಭ ನಗರದ ಹೋಟೆಲ್ ಎಜೆ ಗ್ರ್ಯಾಂಡ್‌ನಲ್ಲಿ ನಡೆಯಿತು.
17 ವಿದ್ಯಾರ್ಥಿಗಳು ಪದವಿ ಪಡೆದಿದ್ದು, ಅವರ ಕೈಚಳಕದಲ್ಲಿ ವಿವಿಧ ರೀತಿಯ ಮೆಕಪ್ ಲುಕ್‌ಗಳು ಪ್ರದರ್ಶನಗೊಂಡಿತು. ವಿಕೆ ನವತಾರೆ ಸೀಸನ್ 5 ಮತ್ತು ಮಿಸ್ ಕರ್ನಾಟಕ 2023 ರ ವಿಜೇತರಾದ ತನಿಷ್ಕಾ ಮೂರ್ತಿ ಅವರು ಪದವಿ ದಿನವನ್ನು ಉದ್ಘಾಟಿಸಿದ್ದು, ಫೋರ್ಡರ್ ಅಕಾಡೆಮಿಯ ನಿರ್ದೇಶಕಿ, ಮೈಂಡ್ ಥೆರಪಿಸ್ಟ್ ತನುಜಾ ಮಾಬೆನ್ ಗೌರವ ಅತಿಥಿಯಾಗಿದ್ದರು.


ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ತುಳು ನಾಟಕ ಕಲಾವಿದ, ತುಳು ಚಲನಚಿತ್ರ ನಟ ಹರಿಶ್ಚಂದ್ರ ಪೆರಾಡಿ ಅವರನ್ನು ಸಂಪೂರ್ಣವಾಗಿ ಮೆಕಪ್ ಮೂಲಕ ಹುಡುಯಾಗಿ ಬದಲಾಯಿಸಿರುವುದು ಎಲ್ಲರ ಗಮನ ಸೆಳೆದಿದ್ದು, ಅವರ ಹುಡುಗಿ ಲುಕ್ ನ ಪೋಟೊ ಕೂಡ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹುಡುಗಿಯಂತೆ ಮೆಕಪ್ ಮಾಡಿದ್ದು, ರಾಂಪ್ ವಾಕ್ ಮಾಡಿದರು. ಚೇತನಾ ಅವರು ಹರಿಶ್ಚಂದ್ರ ಪೆರಡಿಯವರ ಸಂಪೂರ್ಣ ನೋಟವನ್ನು ಬದಲಿಸಿ, ಕಡಿಮೆ ಆಭರಣಗಳನ್ನು ಬಳಸಿ ಕೇಶವಿನ್ಯಾಸವನ್ನು ರಚಿಸಿದರು.


ಮೇಕಪ್ ಆರ್ಟಿಸ್ಟ್ ಪ್ರತಿಭಾ ದಯಾ ಕುಕ್ಕಜೆ ಸಹಿತ 16 ಮಂದಿ ಮೇಕಪ್ ಅರ್ಟಿಸ್ಟ್ ಗಳು ರಾಂಪ್ ವಾಕ್ ಮಾಡಿದರು. 17 ಮಂದಿ ಮಾಡೆಲ್ ಗಳು ಮೇಕಪ್ ರಾಂಪ್ ನಲ್ಲಿ ಭಾಗವಹಿಸಿದರು.



ಚೇತನಾಸ್ ಬ್ಯೂಟಿ ಲಾಂಜ್‌ನ ಮಾಲೀಕರಾಗಿರುವ ಚೇತನಾ ಎಸ್. ಅವರು ಮಂಗಳೂರಿನ ಪ್ರಖ್ಯಾತ ಬ್ಯೂಟಿಷಿಯನ್ ಆಗಿದ್ದು, ಅವರು 26 ವರ್ಷಗಳಿಂದ ವೃತ್ತಿಯಲ್ಲಿದ್ದಾರೆ. ಅವರು ಮೇಕಪ್ ಮತ್ತು ಕೇಶವಿನ್ಯಾಸದಲ್ಲಿ ತರಬೇತಿ ಪಡೆಯಲು ಹಲವಾರು ದೇಶಗಳಿಗೆ ಭೇಟಿ ನೀಡಿದ್ದಾರೆ. ಇತರ ಜಿಲ್ಲೆಯ ಅನೇಕ ವಿದ್ಯಾರ್ಥಿಗಳು ಬ್ಯೂಟಿಷಿಯನ್ ಕೋರ್ಸ್‌ಗಳು, ಅಡ್ವಾನ್ಸ್ ಮೇಕಪ್ ಮತ್ತು ಹೇರ್ ಸ್ಟೈಲ್‌ಗಾಗಿ ಚೇತನಾ ಪಾರ್ಲರ್‌ಗೆ ಭೇಟಿ ನೀಡುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು