2:12 PM Monday17 - November 2025
ಬ್ರೇಕಿಂಗ್ ನ್ಯೂಸ್
ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಸವಾಲು: ಚಾರ್ಮಾಡಿ ಅಡ್ಡದಾರಿಯಲ್ಲಿ ಅಳವಡಿಸಿದ್ದ 12 ಅಡಿ ಗೇಟ್‌… ಡಿಕ್ಕಿ ಹೊಡೆದ ಕಾರಿನ ಮೇಲೆಯೇ ಬಿದ್ದ ಕಾಡಾನೆ: ಕಾರಿನ ಮುಂಭಾಗ ಸಂಪೂರ್ಣ ಜಖಂ;… ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ ಬಿಹಾರ ಚುನಾವಣೆ ಫಲಿತಾಂಶದಿಂದ ಪ್ರಧಾನಿ ಮೋದಿಯವರ ಜನಪ್ರೀಯತೆ ಮತ್ತೆ ದೃಢಪಟ್ಟಿದೆ: ಮಾಜಿ ಸಿಎಂ… ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ…

ಇತ್ತೀಚಿನ ಸುದ್ದಿ

ಜೀವನದಲ್ಲಿ  ಮಾರ್ಗ ಬದಲಾಯಿಸಲು ಹಾಗೂ ಹೊಸ ವಿಚಾರಗಳನ್ನು ವ್ಯಕ್ತಿತ್ವದಲ್ಲಿ ರೂಢಿಸಿಕೊಳ್ಳಲು ಮಹೇಶ್ ಗುರೂಜಿ ಕರೆ

27/04/2021, 05:01

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದ ಸೋಮನಾಥ ವಿಜಯವ ಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಋಷಿ ಪ್ರಭಾಕರ್ ಗುರೂಜಿ ಇವರ ಸಹಯೋಗದಲ್ಲಿ ಸಿದ್ಧ ಸಮಾಧಿ ಯೋಗ ಎಂಬ ಕಾರ್ಯಕ್ರಮವನ್ನು ಶ್ರೀ ಮಹೇಶ ಚಾರ್ಯರು ಚಾಲನೆ ನೀಡಿದರು.

ನಂತರ ಮಾತನಾಡಿದ ಗುರೂಜಿ, ಇಂದಿನ ಸಮಾಜದಲ್ಲಿ ನಾವು ಹೇಗೆ ಬದುಕಬೇಕು. ನಮ್ಮ ಜೀವನ ಎಂದರೆ ಏನು? ಸಿದ್ದ ಸಮಾಧಿ ಯೋಗ ದಿಂದ ಏನು ಲಾಭ? ಎನ್ನುವುದರ ಬಗ್ಗೆ ಕಾರ್ಯಕ್ರಮದಲ್ಲಿ ಕಲಿಕಾರ್ಥಿಗಳಿಗೆ ತಿಳಿಸಲಾಯಿತು. ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಪ್ರತಿಯೊಬ್ಬರನ್ನು ಪ್ರೀತಿಸುವುದು ಸಕಲ ಜೀವರಾಶಿಗಳಲ್ಲಿ ಪ್ರೇಮ ನಿಸ್ವಾರ್ಥವಾಗಿ ಏನು ಇರುವುದಿಲ್ಲ. ಪ್ರಾಣಾಯಾಮ ಮಾಡುವುದರಿಂದ ರೋಗಗಳು ಬರುವುದಿಲ್ಲ. ಮನುಷ್ಯ ಜಾಸ್ತಿ ದಿನ ಬದುಕಬಹುದು. ಜೀವನದಲ್ಲಿ ಹೊಸ ಮಾರ್ಗ ಹೊಸ ಬದುಕು ಹೊಸ ಹೊಸ ವಿಚಾರಗಳನ್ನು ಅಳವಡಿಸಿಕೊಳ್ಳಬಹುದು. ಆಹಾರ ಪದ್ಧತಿಯಿಂದ ಒಳ್ಳೆಯ ವಿಚಾರವಾಗುತ್ತದೆ. ನೀ ಅಂದ್ರೆ ಸಪ್ತಮಾಧಿಪತಿ ಅಂತಾರಲ್ಲ ಪ್ರತಿಯೊಬ್ಬ ಮನುಷ್ಯನಲ್ಲಿ  ಈ ಧ್ಯಾನ ಪ್ರಾಣಾಯಾಮ ಮಾಡುವುದರಿಂದ ಶರೀರವು ಹಗುರವಾಗುತ್ತದೆ. ಮನುಷ್ಯನಲ್ಲಿ ಹೊಸ ಚೈತನ್ಯವು ರೂಪಿಸುತ್ತದೆ ಪ್ರತಿದಿನ ಬೆಳಗ್ಗೆ 5 ಗಂಟೆಗೆ ಧ್ಯಾನ ಪ್ರಾಣಾಯಾಮ ಮಾಡುವುದರಿಂದ ಮನಸ್ಸಿಗೆ ಜೀವನಕ್ಕೆ ತೃಪ್ತಿ ಸಿಗುತ್ತದೆ ಜೀವನದಲ್ಲಿ ನಾವು ಅಂದುಕೊಂಡಿದ್ದನ್ನು ಸಾಧಿಸುವುದೇ ಸಿದ್ಧ ಸಮಾಧಿ ಯೋಗದ ಒಂದು ಪರಿಪೂರ್ಣ ಅರ್ಥ ಪ್ರತಿಯೊಬ್ಬರು ಇವರ ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಮುಂದೆ ಸಾಗಿದರೆ ಒಳ್ಳೆಯ ಬದುಕು ಒಳ್ಳೆಯ ಜೀವನದ ಸಾಗಿಸಬಹುದು ಮನುಷ್ಯನಲ್ಲಿ ಸುಳ್ಳು ಹೇಳುವುದು ಮೋಸ ಮಾಡುವುದು ಕೆಟ್ಟವರ ಸಂಘ ಮಾಡುವುದು ಬಿಡುವುದು ಸಿದ್ದ ಸಮಾಧಿ ಯೋಗದ ಮೊದಲ ತಾತ್ಪರ್ಯ ಪ್ರತಿಕ್ಷಣವು ಮನುಷ್ಯನ ಜೀವನವು ಆನಂದ ವಾಗಿರುವುದನ್ನು ಸಿದ್ದ ಸಮಾಧಿ ಯೋಗ ಪಾಠವನ್ನು ಕಲಿಸುತ್ತದೆ ಆದ್ದರಿಂದ ಶ್ರೀ ಮಹೇಶ್ ಗುರೂಜಿಯವರ ಆಚಾರ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ಜೀವನ ಸುಖವಾಗಿರುತ್ತದೆ ಸಮೃದ್ಧವಾಗಿರುತ್ತದೆ ದಯವಿಟ್ಟು ಕಲಿಕಾರ್ಥಿಗಳ ಅಷ್ಟೇ ಅಲ್ಲದೆ ಮನೆಯಲ್ಲಿ ಎಲ್ಲರೂ ಸಿದ್ಧ ಸಮಾಧಿ ಯೋಗದ ಪ್ರಾಣಾಯಾಮ ಯೋಗಗಳಿಂದ ರೋಗಗಳು ದೂರವಾಗುತ್ತವೆ. ಕರ್ನಾಟಕದಲ್ಲಷ್ಟೇ ಅಲ್ಲ ಬೇರೆಬೇರೆ ರಾಷ್ಟ್ರಗಳಲ್ಲಿಯೂ ಸಿದ್ದ ಸಮಾಧಿ ಯೋಗದ ತರಬೇತಿಯು ಅದ್ಭುತವಾಗಿ ನಡೆಯುತ್ತದೆ. ನಾವು ಸುಖವಾಗಿರಬೇಕಾದರೆ ನಾವು ಸಮೃದ್ಧವಾಗಿ ಇರಬೇಕಾದರೆ ಸಿದ್ದ ಸಮಾಧಿ ಯೋಗದ ತಾತ್ಪರ್ಯವನ್ನು ಹರಿದು ಜೀವನದಲ್ಲಿ ನೊಂದು-ಬೆಂದು ಬಂದವರ ಈ ತರಬೇತಿ ಪಡೆಯುವುದರಿಂದ ಅವರ ಕಷ್ಟಗಳು ಪರಿಹಾರವಾಗುವುದು ಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ರಾಜೇಶ್ವರಿ ಅಮರೇಶ್,

ಅಮೃತ ಜೋಗಿನ್,  ಭಾರತಿ ಪತ್ತಾರ್,  ಶಂಕ್ರಪ್ಪ ಜೋಗಿನ್,  ವಿಶ್ವಜಿತ್, ಪತ್ರಕರ್ತ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ,  ಈರಣ್ಣ, ವಿಜಯಲಕ್ಷ್ಮಿ, ನಾಗರಾಜ್ ಮಡಿವಾಳ, ಕವಿತಾ ಮಡಿವಾಳ ಸೇರಿದಂತೆ ಇನ್ನಿತರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು