9:20 PM Wednesday19 - March 2025
ಬ್ರೇಕಿಂಗ್ ನ್ಯೂಸ್
APMC | ಯಶವಂತಪುರದಿಂದ 4 ಕೃಷಿ ಉತ್ಪನ್ನ ಶಿಫ್ಟ್: ದಾಸನಪುರ ಉಪ ಮಾರುಕಟ್ಟೆಗೆ… ತೊಗರಿ ಖರೀದಿ ನೊಂದಣಿ ಮಾರ್ಚ್ ತಿಂಗಳಾಂತ್ಯದವರೆಗೆ ವಿಸ್ತರಣೆ: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ… Farmers Loan | ಅರ್ಹತೆ ಇರುವ ರೈತ ಫಲಾನುಭಗಳಿಗೆ ಸಾಲ ಸೌಲಭ್ಯ: ವಿಧಾನ… ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) (ತಿದ್ದುಪಡಿ) ವಿಧೇಯಕ… Water Dispute | ಪೆನ್ನಾರ್ ನದಿ ನೀರು ವಿವಾದ ಕುರಿತು ಚರ್ಚೆಗೆ ದೆಹಲಿ… ಯುವನಿಧಿ ಯೋಜನೆ; ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪ್ರಚಾರಕ್ಕೆ ಕ್ರಮ: ಸಚಿವ ಡಾ. ಶರಣಪ್ರಕಾಶ್… Education | ದೈಹಿಕ ಶಿಕ್ಷಕರ ಸಹ ಶಿಕ್ಷಕರೆಂದು ಪರಿಗಣಿಸುವ ಕುರಿತು ಪರಿಶೀಲನೆ: ಶಿಕ್ಷಣ… Solar power & Wind power | ಸೌರ ಶಕ್ತಿ ಮತ್ತು ಪವನ… Legislative Council | ನಕಲಿ ಔಷಧಿ ನಿಯಂತ್ರಣಕ್ಕೆ ಅಗತ್ಯ ಕ್ರಮ: ಆರೋಗ್ಯ ಸಚಿವ… KSRTC | ಬಿಜೆಪಿ ಸರಕಾರ ಶೇ 47ರಷ್ಟು ಬಸ್ ದರ ಏರಿಕೆ ಮಾಡಿತ್ತು,…

ಇತ್ತೀಚಿನ ಸುದ್ದಿ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಧ್ಯಸ್ಥಿಕೆಯಲ್ಲಿ ಚಂಡೀಗಢ ರೈತರ ಸಂಧಾನ ಸಭೆ: ಸತ್ಯಾಗ್ರಹ ನಿರತ ರೈತ ನಾಯಕ ದಲ್ಲೆವಾಲ್ ಭೇಟಿ

19/03/2025, 21:14

ನವದೆಹಲಿ(reporterkarnataka.com): ಒಂದು ವರ್ಷದಿಂದ ಸಾಗಿರುವ ಚಂಡೀಗಢ ರೈತರ ಹೋರಾಟಕ್ಕೆ ಸ್ಪಂದಿಸಿ, ಸಚಿವ ಪ್ರಲ್ಹಾದ ಜೋಶಿ ಅವರ ಮಧ್ಯಸ್ಥಿಕೆಯಲ್ಲಿ ಕೇಂದ್ರ ತಂಡ ಇಂದು ಮೂರನೇ ಹಂತದ ಯಶಸ್ವಿ ಸಭೆ ನಡೆಸಿದ್ದು, ಮೇ 4ಕ್ಕೆ ಮತ್ತೊಂದು ಸುತ್ತಿನ ಸಭೆ ನಡೆಸಲು ನಿರ್ಣಯಿಸಲಾಗಿದೆ.

ಚಂಡೀಗಢದಲ್ಲಿ ರೈತರು ಮತ್ತು ಕೇಂದ್ರದ ನಡುವೆ ಈ ಹಿಂದೆ ನಾಲ್ಕು ಹಂತದಲ್ಲಿ ಮಾತುಕತೆ ನಡೆದರೂ ಸಫಲವಾಗದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೊನೆಗೆ ಪ್ರಭಾವಿ ಸಚಿವರು ಮತ್ತು ಉನ್ನತ ಅಧಿಕಾರಿಗಳ ಕೇಂದ್ರ ತಂಡವನ್ನೇ ಸಮಾಲೋಚನೆಗೆ ನೇಮಿಸಿದ್ದಾರೆ. ಅದರಂತೆ, ರೈತ ಹೋಟಗಾರರೊಂದಿಗೆ ಸಮಗ್ರ ಚರ್ಚೆ ನಡೆಸಿ, ಸಂಧಾನ ಸಭೆ ನಡೆಸುವ ಮೂಲಕ ಪ್ರತಿಭಟನೆಗೆ ಅಂತ್ಯ ಹಾಡಲು ಕೇಂದ್ರದಿಂದ ಆಹಾರ ಸಚಿವ ಪ್ರಲ್ಹಾದ ಜೋಶಿ, ಕೃಷಿ ಸಚಿವ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪಿಯೂಷ್ ಗೋಯಲ್ ಅವರನ್ನು ಒಳಗೊಂಡ ಉನ್ನತ ಹಂತದ ತಂಡ ರೈತರೊಂದಿಗೆ ಫಲಪ್ರದ ಮಾತುಕತೆಯಲ್ಲಿ ನಿರತವಾಗಿದೆ.
ಸಚಿವ ಪ್ರಲ್ಹಾದ ಜೋಶಿ ಅವರ ಮಧ್ಯಸ್ಥಿಕೆಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಪಿಯೂಷ್ ಗೋಯಲ್ ಮತ್ತು ಉನ್ನತ ಅಧಿಕಾರಿಗಳ ತಂಡ ಚಂಡಿಘಡಕ್ಕೆ ತೆರಳಿ ರೈತ ಮುಖಂಡರ ಸಭೆ ನಡೆಸಿ, ಕೇಂದ್ರ ಸರ್ಕಾರ ತಮ್ಮೊಂದಿಗಿದೆ ಎಂಬ ಭರವಸೆ ಮೂಡಿಸಿದೆ.
ಕಳೆದ ತಿಂಗಳು ಒಂದು ವಾರದಲ್ಲಿ ಸತತ ಎರೆಡು ಬಾರಿ ರೈತ ನಾಯಕರ ಸಭೆ ನಡೆಸಿ, ರೈತರ ಪ್ರಮುಖ ಬೇಡಿಕೆಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದ ಸಚಿವ ಜೋಶಿ ಮಧ್ಯಸ್ಥಿಕೆಯ ಕೇಂದ್ರ ತಂಡ ಇಂದೂ ಸಹ ರೈತ ಮುಖಂಡರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದೆ.
ಚಂಡೀಗಢದ ಸೆಕ್ಟರ್ -26 ರಲ್ಲಿರುವ ಮಹಾತ್ಮ ಗಾಂಧಿ ಸಾರ್ವಜನಿಕ ಆಡಳಿತ ಸಂಸ್ಥೆಯಲ್ಲಿ ಈ ಮಹತ್ವದ ಸಭೆ ನಡೆಯುತ್ತಿದ್ದು, ಸಚಿವದ್ವಯರು ಮತ್ತು ಕೇಂದ್ರ ಉನ್ನತ ಅಧಿಕಾರಿಗಳ ತಂಡ ರೈತರ ಹೋರಾಟ ಕೊನೆಗೊಳಿಸುವ ನಿಟ್ಟಿನಲ್ಲಿ ದೀರ್ಘ ಸಮಾಲೋಚನೆ ನಡೆಸಿದೆ.
ಸಭೆಯಲ್ಲಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಕಾನೂನುಬದ್ಧ ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಕುರಿತು ಸಚಿವದ್ವಯರು ಗಹನ ಚರ್ಚೆ ನಡೆಸಿದರು. ಪಂಜಾಬ್ ಸರ್ಕಾರದ ಸಚಿವರು ಮತ್ತು ಹಿರಿಯ ಅಧಿಕಾರಿಗಳೂ ಸಭೆಯಲ್ಲಿ ಭಾಗಿಯಾಗಿ ಸಮಾಲೋಚಿಸಿದರು.
ಸಂಯುಕ್ತ ಕಿಸಾನ್ ಮೋರ್ಚಾ(ರಾಜಕೀಯೇತರ), ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ನೇತೃತ್ವದ ರೈತ ನಾಯಕರೊಂದಿಗೆ ಸಚಿವ ಪ್ರಲ್ಹಾದ ಜೋಶಿ ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್, ಪಿಯೂಷ್ ಗೋಯಲ್ ಅವರು ಫೆಬ್ರವರಿ 14 ಮತ್ತು 22 ರಂದು ಮಹತ್ವದ ಸಭೆ ನಡೆಸಿ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದರು. ಅಲ್ಲದೇ, ಮಾರ್ಚ್ 19ಕ್ಕೆ ಮತ್ತೆ ಸಭೆ ನಿಗದಿಪಡಿಸಿ ಬಂದಿದ್ದರು.
ಅಂತೆಯೇ, ಸಚಿವದ್ವಯರು ಇಂದು ಮತ್ತೊಂದು ಸುತ್ತಿನ ಸಭೆ ನಡೆಸಿ, ಬೇಡಿಕೆಗಳ ಕುರಿತು ಸಕಾರಾತ್ಮಕ ಚರ್ಚೆ ನಡೆಸಿದ್ದು, ರೈತರಲ್ಲಿ ಆತ್ಮವಿಶ್ವಾಸ ಮೂಡಿಸಿದರು. ಸಚಿವರು ಮೊದಲಿಗೆ, ಕಳೆದ 113 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದು, ರೈತರು ಸಕಾರಾತ್ಮಕ ಸಂಕೇತವೆಂದೇ ಪರಿಗಣಿಸಿದರು.
ರೈತ ಹೋರಾಟ ಹಿನ್ನಲೆಯಲ್ಲಿ ಹರಿಯಾಣ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಇಲ್ಲಿಯವರೆಗೆ, ಸುಪ್ರೀಂ ಕೋರ್ಟ್‌ನಲ್ಲಿ 10 ವಿಚಾರಣೆಗಳು ನಡೆದಿವೆ. ಈ ಮಧ್ಯೆ ಜಟಿಲ ಸಮಸ್ಯೆ ಬಗೆಹರಿಸಲು ಸಚಿದ್ವಯರು ನಡೆಸಿದ ಸಭೆ ಬಹುತೇಕ ಯಶಸ್ವಿಕಾಣತೊಡಗಿದೆ.
ರೈತರ ಸಮಸ್ಯೆಗಳನ್ನು ಅರಿತಿರುವ ಪ್ರಲ್ಹಾದ ಜೋಶಿ, ಶಿವರಾಜ್ ಸಿಂಗ್, ಪಿಯೂಷ್ ಗೋಯಲ್ ರೈತಪರ ನಿಲುವುಳ್ಳವರು ಮತ್ತು ಪ್ರಭಾವಿ ಸಚಿವರು. ಇವರ ಸಕಾರಾತ್ಮಕ ಸ್ಪಂದನೆ ಮತ್ತು ಮಧ್ಯಸ್ಥಿಕೆಯಲ್ಲಿ ಹೋರಾಟಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು ರೈತ ಹೋರಾಟಗಾರರು.

ಇತ್ತೀಚಿನ ಸುದ್ದಿ

ಜಾಹೀರಾತು