3:09 AM Tuesday26 - November 2024
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ

ಇತ್ತೀಚಿನ ಸುದ್ದಿ

ಚಳ್ಳಕೆರೆ ದೊಡ್ಡಉಳ್ಳಾರ್ತಿ ಜಾತ್ರೆ  ಸಮಾಪನ: ಗೌರಿದೇವಿ ವಿಸರ್ಜನೆ; ಮಕ್ಕಳಿಗಾಗಿ ಹೂ ತೊಟ್ಟಿಲ ಸೇವೆ

23/11/2021, 19:16

ಗೋಪಾನಹಳ್ಳಿ ಶಿವಣ್ಣ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಚಳ್ಳಕೆರೆ ತಾಲೂಕಿನ ದೊಡ್ಡಉಳ್ಳಾರ್ತಿಯ ಶ್ರೀಗೌರಿದೇವಿ ಜಾತ್ರೆ ಸಡಗರ ಸಂಭ್ರಮದಿಂದ ನಡೆದಿದ್ದು, ಗೌರಿದೇವಿ ವಿಸರ್ಜನೆ ಕಾರ್ಯ ನೆರವೇರಿತು.

ಗೌರಿ ದೇವಿಯ ಮೂರ್ತಿಗೆ ದೀಪಾಲಂಕರದಿಂದ ಶೃಂಗಾರಗೊಳಿಸಿ ದೊಡ್ಡ ಹಬ್ಬದಂತೆ ಆಚರಣೆ ಮಾಡಿದ್ದು ಒಂದು ವಿಶೇಷವಾಗಿತ್ತು. ಗ್ರಾಮದ ಗಂಡನ ಮನೆಯಾದ ವೀರಭದ್ರಸ್ವಾಮಿ ದೇವಾಲಯದಿಂದ ಸಂಪ್ರದಾಯದಂತೆ ಗೌರಿದೇವಿಯನ್ನು ಬೆಳಗಿನ ಜಾವ ಸುಮಾಎಉ 3.30ರಲ್ಲಿ ಎಡೆಮುಡಿ ಮೇಲೆ ಗೌರಿಯನ್ನು ಮೆರವಣಿಗೆಯ ಮೂಲಕ ತವರು ಮನೆಗೆ ಕರೆ ತರಲಾಯಿತು.ಊರಿನಲ್ಲಿ ಗುಡಿ ನಿರ್ಮಿಸಿ ಜಾತ್ರೆ ಮಾಡುತ್ತಿದ್ದರು ಎಂಬ ಪ್ರತೀತಿ ಇದೆ.ನಾವು ಸಹ ಹಿರಿಯರ ಆಶಯದಂತೆ ಮುಂದುವರೆಸಿಕೊಂಡು ಬರಲಾಗಿದೆ ಎಂಬುದು ಭಕ್ತರ ನಂಬಿಕೆ.

ಗೌರಿದೇವಿ ಜಾತ್ರೆ ಮೂಲತಃ ಹೆಣ್ಣು ಮಕ್ಕಳ ಹಬ್ಬ. ದೇವಿಗೆ ಪೂಜಾ ಕೈಂಕರ್ಯ ನಡೆಸುವವರೆಲ್ಲ ಒಪ್ಪತ್ತು ಮಾತ್ರ ಊಟ ಮಾಡಬೇಕು. ಆಚರಣೆಯಂತೆ ವಿದಿವಿಧಾನದಂತೆ ಸಮಂಗಲಿಯರು ಮಧ್ಯೆ ರಾತ್ರಿ ತಣ್ಣಿರಿನ ಸ್ನಾನ ಬಣ್ಣಬಣ್ಣದ ಮಡಿ ಸೀರೆಗಳನ್ನು ಉಟ್ಟುಕೊಂಡು ಮಂಜಾನೆ ದೇವಿಗೆ ಮಹಾ ಮಂಗಳಾರತಿ ಸಮರ್ಪಿಸಿದರು.

ದಿನವೆಲ್ಲ ಉಪವಾಸವಿರುವ ಪುರುಷರು ನಂತರ ರಾತ್ರಿ  ಚಳಿಯನ್ನು ಲೆಕ್ಕಿಸದೆ ತಣ್ಣಿರಿನಲ್ಲಿ ಸ್ನಾನಮಾಡಿ ದೇವಿಯನ್ನು ತವರು ಮನೆಯಿಂದ ಕರೆ ತರುವ ಸಂದರ್ಭದಲ್ಲಿ ಡಿಂಡುರುಳು ಸೇವೆ ಅರ್ಪಿಸಿದರು. ಇವರಿಗೆ ಮಹಿಳೆಯರು ಆರತಿ ಹಿಡಿಯುವ ಮೂಲಕ ಪ್ರೋತ್ಸಾಹ ನೀಡಿ ಚಳಿಯಲ್ಲು ಜಾತ್ರೆ ಕಳೆಕಟ್ಟುವಂತೆ ಮಾಡಿದರು.

ಕಂಕಣ ಬಲ ಕೂಡಿ ಬರಲು, ಒಳ್ಳೆಯ ಪತಿ ದೊರೆಯಲೆಂದು ಯುವತಿಯರು ದಿಂಡುರುಳು ಮತ್ತು ಆರತಿ ಹಿಡಿಯುವ ಹರಕೆ ಅರ್ಪಿಸಿದರು. ಮಕ್ಕಳ ಫಲ ಲಭಿಸಲಿ ಎಂದು ಮಕ್ಕಳಿಲ್ಲದವರು ಹೂವಿನ ತೊಟ್ಟಿಲ ಹರಕೆ ತೀರಿಸಿ ದೇವಿಯಲ್ಲಿ ತಮ್ಮ ಇಷ್ಟಾರ್ಥಗಳನ್ನು ಪುರೈಸು ಎಂಬ ಭಾವ ಮಹಿಳೆಯರಲ್ಲಿ ಎದ್ದು ಕಾಣುತ್ತಿತ್ತು. 

ಇತ್ತೀಚಿನ ಸುದ್ದಿ

ಜಾಹೀರಾತು