11:46 AM Sunday19 - January 2025
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿ ಕೃಷಿ ಬಲವರ್ಧನೆ ನೆರವಿಗೆ ಸಚಿವ ಚಲುವರಾಯಸ್ವಾಮಿ ಮನವಿ: ಕೇಂದ್ರ ಸಮ್ಮತಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೋತಿಗೆ ಗ್ರಾಪಂ ಮಾಜಿ ಅಧ್ಯಕ್ಷರಿಂದ ಅಂತ್ಯ ಸಂಸ್ಕಾರ: ರಾತ್ರಿ… ಜಾತಿಗಣತಿ ವರದಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡನೆ: ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ… ಸಂಭ್ರಮ- ಸಡಗರಕ್ಕೆ ಸಾಕ್ಷಿಯಾದ ಕಡಲನಗರಿಯ ಮಂಗಳಾ ಕ್ರೀಡಾಂಗಣ: 4500 ಕ್ರೀಡಾಪಟುಗಳ ಪಾದಸ್ಪರ್ಶ ಎಷ್ಟಾದರೂ ಹಣ-ಸವಲತ್ತು ಕೇಳಿ ಕೊಡ್ತೀನಿ, ಆದರೆ ಒಲಂಪಿಕ್ ಮೆಡಲ್ ತನ್ನಿ: ಮಂಗಳೂರಿನಲ್ಲಿ ಸಿಎಂ… ಮಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕಚೇರಿಗೆ ಸಿಎಂ ಸಿದ್ದರಾಮಯ್ಯ… ಮಂಗಳೂರಿಗೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ: ರಾಜೀವ್ ಗಾಂಧಿ ವಿವಿ ಪ್ರಾದೇಶಿಕ ಕೇಂದ್ರಕ್ಕೆ ಶಿಲಾನ್ಯಾಸ ಕುರ್ಚಿಗಾಗಿ ಕಾದಾಟದಲ್ಲೇ ಎಲ್ಲರೂ ಮಗ್ನ, ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆ: ಪ್ರತಿಪಕ್ಷ… ಕೆಎಎಸ್‌ ಪೂರ್ವಭಾವಿ ಮರುಪರೀಕ್ಷೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್… ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ…

ಇತ್ತೀಚಿನ ಸುದ್ದಿ

ಕಾರ್ಟೂನ್ ನೋಡುತ್ತಿದ್ದ ಮಾರ್ಜಾಲ ಇನ್ನಿಲ್ಲ!!: ಯೂ ಟ್ಯೂಬ್ ಚಾನೆಲ್ ನಲ್ಲಿ ಸುದ್ದಿಯಾಗಿದ್ದಳು ‘ಅಬ್ಬುಟ’!

18/05/2023, 11:50

ಮಂಗಳೂರು(reporterkarnataka.com) ಮೊಬೈಲ್ ನಲ್ಲಿ ಕಾರ್ಟೂನ್ ನೋಡುವ ಮೂಲಕ ಯೂ ಟ್ಯೂಬ್ ಚಾನೆಲ್ ನಲ್ಲಿ ಸುದ್ದಿ ಮಾಡಿದ್ದ ಜಿಮ್ಮಿ ಯಾನೆ ಅಬ್ಬುಟ ಹೆಣ್ಣು ಬೆಕ್ಕು ಕೊನೆಯುಸಿರೆಳೆದಿದೆ.
ಸುಮಾರು ಆರೂವರೆ ವರ್ಷ ಕಾಲ ಮನೆ ಮಂದಿಗೆ ಮನೋರಂಜನೆ ನೀಡುತ್ತಾ ಪ್ರೀತಿಗೆ ಪಾತ್ರವಾಗಿದ್ದ ಅಬ್ಬುಟ ಜಾಂಡಿಸ್ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿದೆ. ಸುಮಾರು ಎರಡೂವರೆ ತಿಂಗಳ ಕಾಲ ಅದು ಕೇವಲ ದ್ರವರೂಪದ ಆಹಾರ ಸೇವಿಸುತ್ತಿತ್ತು. ಹಾಗೆ ಡಾ. ಅಶೋಕ್, ಡಾ. ಗೋಪಾಲಕೃಷ್ಣ ಭಟ್ ಹಾಗೂ ಡಾ.ಉಪಾಧ್ಯಾಯ ಅವರು ಅಬ್ಬುಟನಿಗೆ ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅದು ಕೊನೆಯುಸಿರೆಳೆದಿದೆ.


ಅಬ್ಬುಟನನ್ನು ಉಳಿಸಿಕೊಳ್ಳಬೇಕೆನ್ನುವ ಮನೆ ಮಂದಿಯ ಪ್ರಯತ್ನ 2 ತಿಂಗಳು 8 ದಿನಗಳಲ್ಲಿ ಕೊನೆಗೂ ವಿಫಲವಾಯಿತು. ಮಂಗಳೂರಿನ ಮೂವರು ಖ್ಯಾತ ವೈದ್ಯರು ಆಕೆಗೆ ಟ್ರೀಟ್ ಮೆಂಟ್ ಕೊಟ್ರೂ, 24 ಇಂಜೆಕ್ಷನ್, 22 ಬಾರಿ ಡ್ರಿಪ್ಸ್ , 3 ವಿಧದ ಔಪಧಿ.. ಏನೆಲ್ಲ ಉಪಚಾರ ಮಾಡಿದ್ರೂ ಎಲ್ಲವೂ ವ್ಯರ್ಥ ವಾಯಿತು.
ಅಬ್ಬುಟ 2 ತಿಂಗಳ ಮರಿ ಇರುವಾಗ ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ನ ರಸ್ತೆಯಲ್ಲಿ ಅನಾಥವಾಗಿ ಸಿಕ್ಕಿತ್ತು. ಮನೆ ಸೇರಿದ ಬಳಿಕ ಅದನ್ನು ಜೋಪಾನವಾಗಿ ಸಾಕಿದ್ದರು. ಮನೆಯವರು ಜಿಮ್ಮಿ ಅಂತ ಆಕೆಗೆ ನಾಮಕರಣ ಮಾಡಿದ್ದರು. ನಂತರ ಕೊಂಡಾಟದಲ್ಲಿ ಅಬ್ಬುಟ, ಅಮ್ಮು, ಅಬ್ಬು, ಮುಂಞ ಅಂತ ತುಂಬಾ ಹೆಸರಿನಲ್ಲಿ ಕರೆಯುತ್ತಿದ್ದರು. ಅದು ಬರೇ ಬೆಕ್ಕು ಅಗಿರದೆ ಮನೆಯ ಸದಸ್ಯೆಯಾಗಿತ್ತು.
ಅಬ್ಬುಟ ಊಟ, ಇಡ್ಲಿ, ದೋಸೆ ತಿನ್ನುತ್ತಿರಲಿಲ್ಲ. ಬರೇ ಕ್ಯಾಟ್ ಫುಡ್ ಮತ್ತು ಸ್ವಲ್ಪ ಹಾಲು- ಮೊಸರು ಅಷ್ಟೇ. ಮೀನನ್ನು ಎದುರಿಟ್ಟರೂ ಮೂಸಿ ನೋಡುತ್ತಿರ್ಲಿಲ್ಲ. ಮನೆ ಮಂದಿ ಜತೆ ಸೇರಿಕೊಂಡು ಕಂಪ್ಯೂಟರ್, ಮೊಬೈಲ್ ನೋಡುವ ಅಭ್ಯಾಸ ಕಲಿತುಕೊಂಡಿತ್ತು. ಕಾರ್ಟೂನ್, ಅದರಲ್ಲೂ ಟಾಮ್ ಆ್ಯಂಡ್ ಜೆರಿ ಅಂದ್ರೆ ಅದಕ್ಕೆ ತುಂಬಾ ಇಷ್ಟ. ನೀಟಾಗಿ ಕೈಕಟ್ಟಿ ಕುಳಿತು ಕಾರ್ಟೂನ್ ನೋಡುತ್ತಿತ್ರು. ತನಗೆ ಖುಷಿಕೊಡುವ ಸನ್ನಿವೇಶ ಎದುರಾದರೆ ಕಂಪ್ಯೂಟರ್ ಅಥವಾ ಮೊಬೈಲ್ ಸ್ಕ್ರೀನ್ ಮೇಲೆ ಕೈ ಇಟ್ಟು ಸಂಭ್ರಮಿಸುತ್ತಿತ್ತು. ಇದು ಕಾರ್ಟೂನ್ ನೋಡುವ ಕುರಿತು reporterkarnataka ಯೂ ಟ್ಯೂಬ್ ಚಾನೆಲ್ ಸುದ್ದಿ ಮಾಡಿತ್ತು.
ಮನೆಯಲ್ಲಿ ಅಬ್ಬುಟ್ಟಳಿಗೆ ಒಂದು ಪ್ರತ್ಯೇಕ ರೂಮ್ ಇತ್ತು. ರಾತ್ರಿ 11ರ ಬಳಿಕ ಮಾತ್ರ ಅದು ಅಲ್ಲಿ ಮಲಗುತ್ತಿತ್ತು. ಉಳಿದ ಸಮಯದಲ್ಲಿ ಮನೆ ಮಂದಿ ಜತೆ ಇರುತ್ತಿತ್ತು. ಮನೆಯವರು ಹಾಲ್ ನಲ್ಲಿ ಕುಳಿತು ಮಾತನಾಡುತ್ತಿದ್ದರೆ ಅದು ಸೋಪಾದ ಕುಶನ್ ಏರಿ ಕುಳಿತುಕೊಳ್ಖುತ್ತಿತ್ತು. ಮನೆಯವರು ಸಿಟ್ ಔಟ್ ಗೆ ಹೋದ್ರೆ ಅಲ್ಲಿ ಸೆಲ್ಫ್ ನಲ್ಲಿ ಹಾಜರಾಗುತ್ತಿತ್ತು. ಅಡುಗೆ ಕೋಣೆಗೆ ಹೋದ್ರೆ ಫ್ರಿಡ್ಜ್ ಮೇಲೆ ಕೂರುತ್ತಿತ್ತು. ಬೋರ್ ಆದಾಗ ಮನೆಯವರ ಜೊತೆ ಓಡಿಸುವ ಆಟವಾಡುತ್ತಿತ್ತು. ನೆಲದ ಮೇಲೆ ಹಾಸಿದ ಕಾರ್ಪೆಟ್ ಚಲ್ಲಾಪಿಲ್ಲಿಯಾಗುವ ತರಹ ಸೂಪರ್ ಸ್ಪೀಡ್ ಅದು ಓಡುತ್ತಿತ್ತು. ಕಿಟಕಿಯೇರುವುದು, ಬಾಗಿಲು ಏರುವುದು, ಇನ್ವಾರ್ಟರ್ ಬಾಕ್ಸ್ ಒಳಗೆ ಅಡಗಿ ಕುಳಿತುಕೊಳ್ಳುವುದು ಮುಂತಾದ ಚೇಷ್ಠೆ ಮಾಡುತ್ತಿತ್ತು.
ಮನೆಯ ಗೇಟ್ ಸೌಂಡ್ ಆದ ಕೂಡಲೇ ಎಲ್ಲಿದ್ರೂ ಓಡಿ ಬಂದು ಸಿಟ್ ಔಟ್ ನಲ್ಲಿ ಹಾಜರಾಗುತ್ತಿತ್ತು. ಸಿಟ್ ಔಟ್ ಗ್ಲಾಸ್ ಮೂಲಕ ಹೊರಗೆ ಹಾರುವ ಹಕ್ಕಿ, ಚಿಟ್ಟೆಯನ್ನು ಕಂಡು ಸಂಭ್ರಮಿಸುತ್ತಿತ್ತು. ಹೂವಿನ ಗಿಡದಲ್ಲಿ ಕಿಂಗ್ ಫಿಶರ್ ಮಾದರಿಯ ಹಕ್ಕಿಗಳು, ಗುಬ್ಬಿ ಸೈಜಿನ ಬಣ್ಣದ ಬುರುಡೆ ತರಹದ ಹಕ್ಕಿಗಳು ಬಂದ್ರೆ ಅದನ್ನು ಗದರಿಸುತ್ತಿತ್ತು. ಮನೆಯವರು ಶಾಪಿಂಗ್ ಮಾಡಿ ಪ್ಲಾಸ್ಟಿಕ್‌ ಬ್ಯಾಗ್ ನಲ್ಲಿ ಏನಾದರೂ ಸಾಮಗ್ರಿ ತಂದ್ರೆ ಅದರ ಮೇಲೆಯೇ ಕೂರಿ ಬಿಡುತ್ತಿತ್ತು. ಮನೆಯೊಡತಿಯ
ಅರ್ಧ ಡಜನಿಗೂ ಹೆಚ್ಚು ವ್ಯಾನಿಟಿ ಬ್ಯಾಗ್ ಮೇಲೆ ಉಗುರಿನಿಂದ ಸಹಿ ಮಾಡಿತ್ತು.
ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಅಟ್ಟವೇರಿ ನಿದ್ದೆ ಮಾಡುತ್ತಿತ್ತು. ಸುಮಾರು ಆರೂವರೆ ವರ್ಷದ ವರೆಗೆ ಆ ಮನೆಯ ಆ ಕುಟುಂಬದ ಭಾಗವಾಗಿತ್ತು.
ಎರಡೂವರೆ ತಿಂಗಳ ಹಿಂದೆ ಅಬ್ಬುಟನಿಗೆ ಜಾಂಡೀಸ್ ಕಾಯಿಲೆ ಬಂತು. ಫುಡ್ ತಿನ್ನುವುದು ಬಿಟ್ಟಿತು.ಹಾಲು ಬಿಟ್ಟಿತು. ಮರಿ ಇರುವಾಗಿನಿಂದ ಅದಕ್ಕೆ ವಾಕ್ಸಿನ್ ಹಾಕಿ ಟ್ರೀಟ್ ಮೆಂಟ್ ಕೊಡುತ್ತಿದ್ದ ವೈದ್ಯರಾದ ಉರ್ವ ಮಾರಿಗುಡಿ ಸಮೀಪ ಕ್ಲಿನಿಕ್ ಹೊಂದಿರುವ ಡಾ. ಅಶೋಕ್ ಬಳಿ ಕರೆದುಕೊಂಡು ಹೋಗಲಾಯಿತು. ಇಂಜೆಕ್ಷನ್, ಡ್ರಿಪ್ಸ್, ಔಷಧಿ ಎಲ್ಲ ಕೊಟ್ರು. ಒಂದು ವಾರ ಕಾಲ ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತು ಕರೆದುಕೊಂಡು ಹೋಗಿ ಇಂಜಕ್ಷನ್ ಕೊಡಿಸಿದರು. ನಡು ನಡುವಿನಲ್ಲಿ ಡ್ರಿಪ್ಸ್ ಹಾಕಿಸಿದರು. ಮನೆಯಲ್ಲಿ ದ್ರವ ಆಹಾರದ ಜತೆ ಸೀಯಾಳ ನೀರು ಸಿರಂಜಿ ಮೂಲಕ ಕುಡಿಸಿದರು. ಅಬ್ಬುಟನಲ್ಲಿ ಎರಡು ಬಾರಿ ಸಣ್ಣ ಮಟ್ಟಿನ ಚೇತರಿಕೆ ಕಂಡು ಬಂತು. ಸಿಟ್ ಔಟ್ ನಲ್ಲಿ ಕುಳಿತು ಹೊರಗಡೆ ಹಾರಾಡುವ ಹಕ್ಕಿಗಳನ್ನು ಗದರಿಸುವಷ್ಡು ಹುಷಾರಾಯಿತು. ಕ್ಯಾಟ್ ಫುಡ್ ಪುನಃ ತಿನ್ನಲಾರಂಭಿಸಿತು. ಮನೆ ಮಂದಿ ಗೆದ್ದೆವು ಅಂತ ಖುಷಿ ಪಟ್ಟರು. ಆದರೆ ಮತ್ತೆ ಜಾಂಡಿಸ್ ಉಲ್ಬಣಿಸಿತು. ಸುಮಾರು ಒಂದು ತಿಂಗಳ ಟ್ರೀಟ್ ಮೆಂಟ್ ಬಳಿಕ ಡಾ. ಅಶೋಕ್ ತುರ್ತು ಕಾರ್ಯ ನಿಮಿತ್ತ ಒಂದು ವಾರ ಊರಿಗೆ ಹೋಗಿದ್ರು. ಆ ವೇಳೆಯಲ್ಲಿ ಅಬ್ಬುಟನಿಗೆ ಮತ್ತೆ ಕಾಯಿಲೆ ಉಲ್ವಣಿಸಿತು. ಡಾ. ಅಶೋಕ್ ಅವರ ಸಲಹೆ ಮೇರೆಗೆ ಬಿಜೈಯ ಸರಕಾರಿ ಪಶು ಚಿಕಿತ್ಸಾಲಯದ ಡಾ. ಗೋಪಾಲಕೃಷ್ಣ ಭಟ್ ಅವರಿಗೆ ತೋರಿಸಲಾಯಿತು.
ಅವರು ಬ್ಲಡ್ ಟೆಸ್ಟ್ ಗೆ ಬರೆದುಕೊಟ್ರು. ರಿಪೋರ್ಟ್ ನಲ್ಲಿ ಜಾಂಡಿಸ್ ಜತೆಗೆ ಲಿವರ್ ಇನ್ಫೆಕ್ಟೆಡ್ ಅಂತ ಬಂತು. ಇಂಜೆಕ್ಷನ್, ಡ್ರಿಪ್ಸ್, ಔಷಧಿ ಕೊಟ್ರು. ಆದರೆ ಕಾಯಿಲೆ puರ್
ಸಿಯಾಗಲಿಲ್ಲ. ಡಾ. ಅಶೋಕ್ ಊರಿನಿಂದ ಮರಳಿದ ಬಳಿಕ ಮತ್ತೆ ಅವರಲ್ಲೇ ಟ್ರೀಟ್ ಮೆಂಟ್ ಮುಂದುವರಿಸಲಾಯಿತು. ಆದರೂ ವಾಸಿಯಾಗಲಿಲ್ಲ. ಹೇಗಾದರು ಮಾಡಿ ಅಬ್ಬುಟನ ಉಳಿಸಲೇಬೇಕು ಎನ್ನುವ ಮನೆಮಂದಿಯ ಹಪಹಪಿಯಿಂದ ವೈದ್ಯರನ್ನು ಬದಲಾಯಿಸಲು ತೀರ್ಮಾನಿಸಲಾಯಿತು. ಮರೋಳಿ ಸಮೀಪದ ಪಶು ವೈದ್ಯ ಡಾ. ಉಪಾಧ್ಯಾಯ ಅವರ ಬಳಿಗೆ ಕರೆದುಕೊಂಡು ಹೋಗಲಾಯಿತು. ಡಾ. ಉಪಾಧ್ಯಾಯ ಸುಮಾರು 8 ದಿನ ಟ್ರೀಟ್ ಮೆಂಟ್ ಕೊಟ್ರು. ಇಲ್ಲೂ ಇಂಜಕ್ಷನ್, ಡ್ರಿಪ್ಸ್ ಆಯಿತು. ಒಮ್ಮೆ ಸ್ವಲ್ಪ ಚೇತರಿಕೆ ಕಂಡು ಬಂತು. ಮನೆ ಮಂದಿ ಮತ್ತೆ ಖುಷಿಪಟ್ಟರು. ಆದರೆ ಪುನಃ ಜಾಂಡಿಸ್ ಉಲ್ಬಣಿಸಿತು. ಪಿಂಕ್ ಕಲರ್ ಇದ್ದ ಆಕೆಯ ಮೂಗಿನ ತುದಿ ಕೂಡ ಹಳದಿಯಾಯಿತು.
ಮತ್ತೆ ಡಾ. ಉಪಾಧ್ಯಾಯ ಬಳಿ ಕರೆದುಕೊಂಡು ಹೋಗಲಾಯಿತು. ವೈದ್ಯರು ಔಷಧ ಬದಲಾಯಿಸಿ ಕೊಡುವಂತದ್ದು ಏನೂ ಇಲ್ಲ, ಅದನ್ನೇ ಮುಂದುವರಿಸಬೇಕು ಅಂದ್ರು. ಔಷಧಿ ಮುಂದುವರಿಸಲಾಯಿತು. ಆದರೆ ಅಬ್ಬುಟ ಮಾತ್ರ ಉಳಿಯಲಿಲ್ಲ… ನೆನಪು ಮಾತ್ರ ಉಳಿದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು