ಇತ್ತೀಚಿನ ಸುದ್ದಿ
ಕಾರಿನ ಜತೆ ಸಜೀವ ಸುಟ್ಟು ಕೊಲೆಗೈದ ಪ್ರಕರಣ: ಇಬ್ಬರು ಆರೋಪಿಗಳಿಗೆ 5 ದಿನ ಪೊಲೀಸ್ ಕಸ್ಟಡಿ
16/07/2022, 21:46
ಕಾರ್ಕಳ(reporterkarnataka.com):
ಕಾರ್ಕಳದ ಆನಂದ ದೇವಾಡಿಗ ಎಂಬವರನ್ನು ಕಾರು ಸಮೇತ ಸಜೀವವಾಗಿ ಸುಟ್ಟು ಕೊಲೆಗೈದ ಅಮಾನುಷ ಪ್ರಕರಣದಲ್ಲಿ 3ನೇ ಆರೋಪಿ ಸತೀಶ್ ದೇವಾಡಿಗ ಹಾಗೂ 4ನೇ ಆರೋಪಿ ನಿತಿನ್ ದೇವಾಡಿಗನಿಗೆ ಕುಂದಾಪುರ ನ್ಯಾಯಾಲಯ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಬೈಂದೂರು ಪೊಲೀಸರು ಜುಲೈ15ರಂದು ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿ ನೀಡುವಂತೆ ಕೋರಿದ್ದರು. ಅದರಂತೆ ನ್ಯಾಯಾಲಯವು ಇಬ್ಬರು ಆರೋಪಿಗಳನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಪ್ರಕರಣದ ಪ್ರಮುಖ ಆರೋಪಿ ಸದಾನಂದ ಶೇರಿಗಾರ್ ಹಾಗೂ 2ನೇ ಆರೋಪಿ ಶಿಲ್ಪಾ ಈಗಾಗಲೇ ಪೊಲೀಸರ ಕಸ್ಟಡಿಯಲ್ಲಿದ್ದು, ವಿವಿಧ ಆಯಾಮಗಳಲ್ಲಿ ಇಡೀ ಪ್ರಕರಣದ ತನಿಖೆ ನಡೆಯುತ್ತಿದೆ. ಶನಿವಾರ ಸ್ಥಳ ಬೈಂದೂರಿನಿಂದ ಕಾರ್ಕಳಕ್ಕೆ ಆಗಮಿಸಿದ ಪೋಲೀಸ್ ತನಿಖಾ ತಂಡ ಕಾರ್ಕಳ ನಗರ ಸಭೆ ವ್ಯಾಪ್ತಿ ಯ ಕುಂಟಲ್ಪಾಡಿ ಗ್ಯಾರೇಜ್ ಹಾಗೂ ಹಿರ್ಗಾನ ಶಿವನಗರ ದ ಶಿಲ್ಪಾ ಪೂಜಾರಿ ಮನೆ, ಎಣ್ಣೆಹೊಳೆ ನದಿಯ ಪಕ್ಕದಲ್ಲಿ ಸ್ಥಳ ಬಟ್ಟೆ ಬಿಸಾಡಿದ ಸ್ಥಳವನ್ನು ಮಹಜರು ಮಾಡಲಾಯಿತು ಎಂದು ತಿಳಿದು ಬಂದಿದೆ.