ಇತ್ತೀಚಿನ ಸುದ್ದಿ
ಕೆನರಾ ನಂದಗೋಕುಲ ಕಾರ್ನಿವಲ್: ಚಿಣ್ಣರಿಂದ ವಿವಿಧ ವಿನೋದಾವಳಿ
16/01/2023, 20:48

ಮಂಗಳೂರು(reporterkarnataka.com): ಕೆನರಾ ನಂದಗೋಕುಲ ಕಾರ್ನಿವಲ್ ಅದ್ದೂರಿಯಾಗಿ ನಡೆಯಿತು. ಕೆನರಾ ಹೈಸ್ಕೂಲ್ ಅಸೋಸಿಯೇಷನ್ ನ ಆಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಕಾಮತ್, ಗೌರವಾನ್ವಿತ ಕಾರ್ಯದರ್ಶಿ ಎಮ್.ರಂಗನಾಥ್ ಭಟ್ ಹಾಗೂ ಸಂಚಾಲಕರಾದ ಕೆ.ಸುರೇಶ್ ಕಾಮತ್ ಮತ್ತು ಕೆನರಾ ಆಡಳಿತ ಮಂಡಳಿಯ ಇತರ ಸದಸ್ಯರು , ಪೋಷಕರು, ಕುಟುಂಬಸ್ಥರು ಮತ್ತು ಮಕ್ಕಳು ಈ ಸಂದರ್ಭದಲ್ಲಿ ಸಂತೋಷದಿಂದ ಪಾಲ್ಗೊಂಡರು.
ಈ ಕಾರ್ನಿವಲ್ ನಲ್ಲಿ ಪುಟ್ಟ ಮಕ್ಕಳಿಗಾಗಿ ವಿವಿಧ ವಿನೋದ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಹಲವು ಕೌಂಟರುಗಳು ಇದ್ದವು. ಪೋಷಕರು ಮತ್ತು ಮಕ್ಕಳು ಹೊಸ ಆವರಣಗಳನ್ನು ನೋಡುದರಲ್ಲಿ ಉತ್ಸುಕರಾಗಿದ್ದರು.