5:15 PM Wednesday25 - March 2026
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಮೋಸ ಮಾಡಿದೆ; ನಾಮಪತ್ರ ಹಿಂತೆಗೆಯುವ ಮಾತೇ ಇಲ್ಲ: ತೊಡೆ ತಟ್ಟಿದ ಪೈಲ್ವಾನ್‌ ದಾವಣಗೆರೆ ದಕ್ಷಿಣ: ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಮುಸ್ಲಿಂ ಮಹಿಳೆಯರಿಂದ ಭವ್ಯ ಸ್ವಾಗತ, ಉಡಿ… ಲ್ಯಾಂಬೊರ್ಗಿನಿ ಕಾರು ಗಿರಿಗಿಟ್ಲೆ ಹೊಡೆಸಿದ ಪ್ರಕರಣ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ,… ಮತ್ತೆ ಬಾಬಾ ಬುಡನ್ ಗಿರಿ ದತ್ತಪೀಠ ವಿವಾದ: ಪೂಜಾ-ವಿಧಿ ವಿಧಾನದ ವಿಚಾರದಲ್ಲಿ ಮುಸ್ಲಿಮರ… ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್‌ ರೋಡ್‌… ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಮರುತನಿಖೆ ಕೋರಿ ಸಲ್ಲಿಸಿದ ಮೇಲ್ಮನವಿ ಸುಪ್ರೀಂ ಕೋರ್ಟ್… ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ; ಒಮ್ಮತದಿಂದ ಸಮರ್ಥ್‌ಗೆ ಟಿಕೆಟ್‌: ಡಿಸಿಎಂ ಡಿ.ಕೆ. ಶಿವಕುಮಾರ್ ಬಾಗಲಕೋಟೆ: ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ, ಬಿಜೆಪಿಯಿಂದ ವೀರಣ್ಣ ಚರಂತಿಮಠ ನಾಮಪತ್ರ ಸಲ್ಲಿಕೆ ರಷ್ಯಾದಿಂದ ಮಂಗಳೂರಿಗೆ ಕಚ್ಚಾತೈಲ ತಂದ ಹಡಗು: ಅನ್‌ಲೋಡಿಂಗ್‌ ಆರಂಭ; ಎಂಆರ್‌ಪಿಎಲ್‌ಗೆ ರವಾನೆ ಶುರು ವಿರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಚೆಂಬೆಬೆಳ್ಳೂರು ಗ್ರಾಮದಲ್ಲಿ ಒಂಟಿ ಸಲಗ ಸೆರೆ

ಇತ್ತೀಚಿನ ಸುದ್ದಿ

ಬಸ್ ಸ್ಟಾಂಡ್ ಪಾಲಿಟಿಕ್ಸ್!: ಕಡಲನಗರಿಯಲ್ಲಿ ಚಿಲ್ಲರೆ ರಾಜಕೀಯಕ್ಕೆ ಪ್ರಯಾಣಿಕರು ಹೈರಾಣ!!

13/09/2024, 12:39

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಅದೊಂದು ಪುಟ್ಟ ಸಿಟಿ ಬಸ್ ನಿಲ್ದಾಣ. ಅವಸರದಲ್ಲಿ ಹೊಸತಾಗಿ ನಿರ್ಮಿಸಿದ ಬಸ್ ನಿಲ್ದಾಣ. ಹಾಗೆ ಅಷ್ಟೇ ಅವಸರದಲ್ಲಿ ತೆರುವು ಕೂಡ ಮಾಡಲಾಗಿದೆ. ಇಲ್ಲಿನ ಎರಡು ರಾಜಕೀಯ ಪಕ್ಷಗಳ ಮೇಲಾಟಕ್ಕೂ ಈ ಬಸ್ ನಿಲ್ದಾಣ ಸಾಕ್ಷಿಯಾಗಿದೆ.
ಇದು ಇರುವುದು ಕಡಲನಗರಿ ಮಂಗಳೂರಿನ ಹೃದಯ ಭಾಗವಾದ ಹಂಪನಕಟ್ಟೆಯಲ್ಲಿ. ಮಂಗಳೂರಿನ ವಿವಿ ಕಾಲೇಜು ಎದುರುಭಾಗದಲ್ಲಿ. ಇದೀಗ ಈ ತೆರವುಗೊಳಿಸಿದ ಬಸ್ ಸ್ಟಾಂಡ್ ವಿಷಯ ಟ್ರೆಂಡಿಂಗ್ ನಲ್ಲಿದೆ.


ಕರಾವಳಿಯ ಅತೀ ದೊಡ್ಡ ನಗರವಾದ ಮಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸರ್ವೆ ಸಾಮಾನ್ಯವಾಗಿದೆ. ಪೀಕ್ ಅವರ್ಸ್ ನಲ್ಲಂತೂ ಇದರ ಸಮಸ್ಯೆ ಹೇಳಿ ತೀರದು. ಟ್ರಾಫಿಕ್ ಸುಧಾರಣೆ ಹೆಸರಿನಲ್ಲಿ ಅವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳುವುದು, ಟ್ರಾಫಿಕ್ ನಿಯವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸದಿರುವುದು ಸಮಸ್ಯೆ ಇನ್ನಷ್ಟು ಬಿಗಡಾಯಿಸಲು ಕಾರಣವಾಗಿದೆ. ಇದೀಗ ರಾಜಕೀಯ ಮೇಲಾಟವೂ ಸೇರಿಕೊಂಡಿದೆ. ವಿವಿ ಕಾಲೇಜು ಎದುರುಗಡೆ ಇರುವ ಬಸ್ ನಿಲ್ದಾಣದ್ದೂ ಇದೇ ಕತೆಯಾಗಿದೆ.
ವಾಸ್ತವದಲ್ಲಿ ಇಲ್ಲಿ ಬಸ್ ಸ್ಟಾಪ್ ಇರಲಿಲ್ಲ. ಈ ಜಾಗದಿಂದ ಸ್ವಲ್ಪ ಮುಂದುಗಡೆ ಆಟೋ ನಿಲ್ದಾಣದ ಬಳಿ ಬಸ್ ಸ್ಟಾಪ್ ಇತ್ತು. ಪ್ರಯಾಣಿಕರಿಗೆ ನಿಲ್ಲಲು ಬಸ್ ನಿಲ್ದಾಣವಿಲ್ಲದಿದ್ದರೂ ಬಿಸಿಲು ಮಳೆಗೆ ಪ್ರಯಾಣಿಕರು ಅಲ್ಲೇ ನಿಂತು ಬಸ್ ಹತ್ತುತ್ತಿದ್ದರು. ಆದರೆ ಇತ್ತೀಚೆಗೆ ಅಲ್ಲೇ ಸ್ವಲ್ಪ ಹಿಂದುಗಡೆ ಅಧಿಕೃತ ಬಸ್ ನಿಲ್ದಾಣವನ್ನು ಮಾಡಲಾಯಿತು. ಇಲ್ಲಿನ ಪ್ರಮುಖ ಸಮಸ್ಯೆ ಎಂದರೆ ಪಕ್ಕದಲ್ಲೇ ಎಡಬದಿಗೆ ಮಾರುಕಟ್ಟೆ, ಕಾರ್ ಸ್ಟ್ರೀಟ್, ಬಂದರು ಕಡೆಗೆ ಹೋಗುವ ರಸ್ತೆ ಇದೆ. ಸಿಟಿ ಬಸ್ ಕೂಡ ಈ ರಸ್ತೆಯಲ್ಲಿ ಸಂಚರಿಸುತ್ತದೆ. ಇದು ಬಸ್ ಸ್ಟಾಪ್ ನ ಅತೀ ಸನಿಹದಲ್ಲಿದೆ. ಇದರಿಂದ ಮತ್ತಷ್ಟು ಟ್ರಾಫಿಕ್ ಜಾಮ್ ಗೆ ದಾರಿ ಮಾಡಿಕೊಟ್ಟಾಗೆ ಆಗುತ್ತದೆ. ಇಷ್ಟೇ ಅಲ್ಲದೆ ಅಪಘಾತದ ಸಾಧ್ಯತೆಯೂ ಬಹಳಷ್ಟು ಹೆಚ್ಚಾಗಿದೆ. ಇದನ್ನೆಲ್ಲ ಅವಲೋಕಿಸುವಾಗ ಬಸ್ ಸ್ಟಾಪ್ ತೆರವುಗೊಳಿಸಿದ್ದು ಒಳ್ಳೆಯ ಕ್ರಮವಾಗಿದೆ ಎಂದು ಪ್ರಜ್ಞಾವಂತ ನಾಗರಿಕರು ಹೇಳಿಕೊಳ್ಳುತ್ತಾರೆ. ಇಲ್ಲಿನ ಬಸ್ ನಿಲ್ದಾಣದ ಬದಲಿಗೆ ಅಲ್ಲೇ ಸ್ವಲ್ಪ ಮುಂದಕ್ಜೆ ಈ ಮುಂಚೆ ಇದ್ದ ಬಸ್ ಸ್ಟಾಪನ್ನು ಅಧಿಕೃತಗೊಳಿಸಿ ಅಲ್ಲೇ ಬಸ್ ನಿಲ್ದಾಣ ನಿರ್ಮಿಸುವ ವಿಫುಲ ಅವಕಾಶವಿದೆ. ಪ್ರಜ್ಞಾವಂತರ ಹಕ್ಕೊತ್ತಾಯ ಕೂಡ ಇದೇ ಆಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು