ಇತ್ತೀಚಿನ ಸುದ್ದಿ
Budget Session | ‘ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ’ ವಿಧಾನ ಪರಿಷತ್ ನಲ್ಲಿ ಅಂಗೀಕಾರ
12/03/2025, 20:37

ಬೆಂಗಳೂರು(reporterkarnataka.com):ವಿಧಾನಸಭೆಯಿಂದ ತಿದ್ದುಪಡಿಯೊಂದಿಗೆ ಅಂಗೀಕೃತ ರೂಪದಲ್ಲಿರುವ ಹಾಗೂ ಜಂಟಿ ಪರಿಶೀಲನಾ ಸಮಿತಿ ಶಿಫಾರಸ್ಸುಗಳೊಂದಿಗೆ 2024ನೇ ಸಾಲಿನ ‘ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ’ ವನ್ನು ಪರ್ಯಾಲೋಚನೆ ನಡೆಸಿ ಅನುಮೋದನೆ ನೀಡಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನ ಪರಿಷತ್ ನಲ್ಲಿ ಮಂಡಿಸಿದರು. ಸದನದ ಸದಸ್ಯರ ಪರ್ಯಾಲೋಚನೆ ನಂತರ ವಿಧೇಯಕ ಅಂಗೀಕಾರಗೊoಡಿತು.