12:15 AM Monday7 - April 2025
ಬ್ರೇಕಿಂಗ್ ನ್ಯೂಸ್
ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ವಿರುದ್ಧ ಧ್ವನಿ ಎತ್ತಲಾಗದ ಪ್ರತಿಪಕ್ಷ: ಬಿಜೆಪಿ ವಿರುದ್ದ… UGCET- 25 | 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ: ಕ್ಯೂಆರ್ ಕೋಡ್,… Bangalore | ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಲು ಜನ… ಕುತ್ಲುರು ಸರಕಾರಿ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 2 ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್… ವಿರಳಾತಿ ವಿರಳ ಕಾಯಿಲೆಗೆ ತುತ್ತಾದ ಚಿಣ್ಣರ ಚಿಕಿತ್ಸೆಗೆ ಕಾರ್ಪೊರೇಟ್‌ ಕಂಪನಿಗಳು ನೆರವು ನೀಡಲಿ:… Rajbhavana | ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ – ರಾಜ್ಯಪಾಲ ಗೆಹ್ಲೋಟ್… HDK | ಮೇಕೆದಾಟು ವಿಷಯದಲ್ಲಿ ಕಾಂಗ್ರೆಸ್ ಸರಕಾರದಿಂದ ದ್ವಿಮುಖ ನೀತಿ: ಕೇಂದ್ರ ಸಚಿವ… HDK | ವಿಧಾನ ಸೌಧ 3ನೇ ಮಹಡಿಯಲ್ಲಿ ಘಜ್ನಿ , ಘೋರಿ, ಮಲ್ಲಿಕ್… FKCCI Udyog Mela | ಉದ್ಯೋಗ ನೀಡುವ ಜತೆಗೆ ಉತ್ತಮ ಸಂಬಳ ನೀಡಿ:… Bangalore | ಮೋಸ ಹೋಗಬೇಡಿ; ಇಲಾಖೆಯಲ್ಲಿ ಯಾವುದೇ ನೇಮಕಾತಿ ಇಲ್ಲ: ಸಚಿವೆ ಲಕ್ಷ್ಮೀ…

ಇತ್ತೀಚಿನ ಸುದ್ದಿ

BJP | ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜನಾಕ್ರೋಶ ಹೋರಾಟ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೋರಾಟ: ಪ್ರತಿಪಕ್ಷ ನಾಯಕ ಆರ್‌.ಅಶೋಕ್

06/04/2025, 21:38

ಬೆಂಗಳೂರು(reporterkarnataka.com): ಕಾಂಗ್ರೆಸ್‌ ಸರ್ಕಾರ ಮಾಡುತ್ತಿರುವ ಅನ್ಯಾಯ, ಹದಗೆಟ್ಟ ಕಾನೂನು ಸುವ್ಯವಸ್ಥೆ, ಸ್ವಜನಪಕ್ಷಪಾತ, ತುಷ್ಟೀಕರಣ ಮೊದಲಾದವುಗಳನ್ನು ವಿರೋಧಿಸಿ ಜನಾಕ್ರೋಶ ಹೋರಾಟ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜನಾಕ್ರೋಶ ಪ್ರವಾಸ ಮಾಡಲಾಗುತ್ತಿದೆ. ಕರ್ನಾಟಕದ ಇತಿಹಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಈ ಮಟ್ಟಕ್ಕೆ ಬೆಲೆ ಏರಿಕೆ ಮಾಡಿದ್ದಾರೆ. ಮದ್ಯದ ದರ, ಮೆಟ್ರೋ ದರ, ಕಾಲೇಜು ಪ್ರವೇಶ ಶುಲ್ಕ, ಬಿತ್ತನೆ ಬೀಜ ದರ, ಪೆಟ್ರೋಲ್‌-ಡೀಸೆಲ್‌ ದರ ಏರಿಕೆಯಾಗಿದೆ. ಈಗ ಕಸದಿಂದಲೂ ದುಡ್ಡು ಹೊಡೆಯಲಾಗುತ್ತಿದೆ. ಬೆಂಗಳೂರಿನ ಜನರು ಕಸಕ್ಕೂ ಶುಲ್ಕ ನೀಡಬೇಕಾಗಿದೆ. ಇದರಿಂದಲೇ ಒಂದೂವರೆ ಕೋಟಿ ರೂ. ಲೂಟಿ ಮಾಡಲಾಗುತ್ತಿದೆ ಎಂದು ದೂರಿದರು.
ಕಾಂಗ್ರೆಸ್‌ ಜಾತ್ಯತೀತವಾದಿ ಎಂದು ಹೇಳಿಕೊಂಡು ಮುಸ್ಲಿಮರ ತುಷ್ಟೀಕರಣ ಮಾಡುತ್ತಿದೆ. ಸರ್ಕಾರಿ ಗುತ್ತಿಗೆಯಲ್ಲಿ ಧರ್ಮಾಧಾರಿತವಾದ ಮೀಸಲು ಕೊಡುವ ಅಗತ್ಯವಿರಲಿಲ್ಲ. ಈಗಾಗಲೇ ಮಂಗಳೂರಿನಲ್ಲಿ ಹೆಚ್ಚಿನ ಗುತ್ತಿಗೆಯನ್ನು ಮುಸ್ಲಿಮರೇ ಮಾಡುತ್ತಿದ್ದಾರೆ. ಈಗ ಮೀಸಲಾತಿಯೂ ಸೇರಿಕೊಂಡು ಹೆಚ್ಚಾಗಿದೆ. ಇದರ ವಿರುದ್ಧ ಹೋರಾಟ ಮಾಡಲಾಗುತ್ತದೆ ಎಂದರು.
ಬಿಜೆಪಿ ಕಾರ್ಯಕರ್ತರ ವಿರುದ್ಧವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಡೆತ್‌ನೋಟ್‌ ಗಿಂತ ಹೆಚ್ಚಿನ ಸಾಕ್ಷಿ ಬೇಡವೆಂದು ಇವರೇ ಹೇಳುತ್ತಿದ್ದರು. ವಿನಯ್‌ ಅವರ ಡೆತ್‌ನೋಟ್‌ ಪರಿಗಣಿಸುತ್ತಲೇ ಇಲ್ಲ. ಈ ಹಿಂದೆ ಬಿಜೆಪಿ ಅವಧಿಯಲ್ಲಿ ಈಶ್ವರಪ್ಪನವರ ವಿಚಾರದಲ್ಲಿ ಇವರೇ ಹೋರಾಟ ಮಾಡಿದ್ದರು. ಈಗ ಉಲ್ಟಾ ಮಾತಾಡುತ್ತಿದ್ದಾರೆ ಎಂದರು.
ವಾಟ್ಸ್ ಅಪ್ ಗ್ರೂಪ್ ನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಥವಾ ಶಾಸಕರ ವಿರುದ್ಧ ಸಂದೇಶ ಹಾಕಿದರೆ ಅವರ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗುತ್ತಿದೆ. ಇದು ದೊಡ್ಡ ದಂಧೆಯಾಗಿ ಬೆಳೆದಿದೆ. ಸರ್ಕಾರದ ವಿರುದ್ಧ ಪ್ರತಿಭಟಿಸಿದರೆ ಆಗಲೂ ದೂರು ದಾಖಲಿಸುತ್ತಾರೆ‌ ಎಂದು ದೂರಿದರು.

ಇತ್ತೀಚಿನ ಸುದ್ದಿ

ಜಾಹೀರಾತು