ಇತ್ತೀಚಿನ ಸುದ್ದಿ
ಬಿಗ್ ಬಾಸ್ -8 ಸ್ಪರ್ಧೆ: ವಿನ್ನರ್ ಮಂಜು ಪಾವಗಡ; 17 ವಾರಗಳ ರಿಯಾಲಿಟಿ ಶೋ ಜರ್ನಿಗೆ ತೆರೆ
09/08/2021, 08:00
ಬೆಂಗಳೂರು(reporterkarnataka.com) : ಬಿಗ್ ಬಾಸ್ ಸೀಸನ್ ಎಂಟರ ಫಿನಾಲೆಯಲ್ಲಿ ಮಂಜು ಪಾವಗಡ್ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಬಿಗ್ ಬಾಸ್ 120 ದಿನಗಳ ಯಾನ ಮುಕ್ತಾಯಗೊಂಡಿದೆ.
ಹೆಸರಾಂತ ನಟ, ಬಿಗ್ ಬಾಸ್ ನಿರೂಪಕ ಸುದೀಪ್ ಅವರು ಬಿಗ್ ಬಾಸ್ ಮನೆಯೊಳಗೆ ಹೋಗಿ ಇಬ್ಬರು ಫೈನಲಿಸ್ಟ್ಗಳಾದ ಮಂಜು ಪಾವಗಡ ಹಾಗೂ ಅರವಿಂದ್ ಕೆ.ಪಿ. ಅವರನ್ನು ಕೈ ಹಿಡಿದು ವೇದಿಕೆಗೆ ಕರೆ ತಂದರು.
ಫೈನಲಿಸ್ಟ್ಗಳು ವೇದಿಕೆ ಕಾಲಿಡುತ್ತಿದ್ದಂತೆಯೇ ನೆರೆದಿದವರ ಚಪ್ಪಾಳೆ ಜೋರಾಯಿತು. ಫಲಿತಾಂಶ ಪ್ರಕಟಿಸುವ ಮುನ್ನ ಸುದೀಪ್ ಅವರು ಇತರೆ ಸ್ಪರ್ಧಿಗಳನ್ನು ಯಾರು ಜಯಗಳಿಸಬೇಕೆಂಬುದು ನಿಮ್ಮ ಇಷ್ಟ ಎನ್ನುತ್ತಾರೆ. ಆಗ ಶಮಂತ್ ಹಾಗೂ ದಿವ್ಯಾ ಉರುಡುಗ ಅವರನ್ನು ಹೊರತು ಪಡಿಸಿ ಉಳಿದವರೆಲ್ಲ ಮಂಜು ಅವರೇ ಗೆಲ್ಲಬೇಕು ಎಂದು. ಅದರಲ್ಲೂ ಮಂಜು ಅವರ ಬಾರಿ ನಿಂದಕರಾದ ಚಕ್ರವರ್ತಿ ಹಾಗೂ ಪ್ರಶಾಂತ್ ಅವರು ಕೂಡ ಮಂಜು ಗೆಲ್ಲಬೇಕು ಎಂದು ಹೇಳುತ್ತಾರೆ. ಕೊನೆಗೂ 17 ವಾರಗಳ ಕಾಲ ನಡೆದ ಜರ್ನಿಗೆ ನಿನ್ನೆ ಅದ್ದೂರಿಗೆ ತೆರೆ ಎಳೆಯಲಾಯಿತು.