1:09 PM Monday23 - December 2024
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಬಂಧನಕ್ಕೊಳಗಾಗಿ ಬಿಡುಗಡೆಗೊಂಡ ಸಿ.ಟಿ. ರವಿಗೆ ಭಾರೀ ಸ್ವಾಗತ; ಮೆರವಣಿಗೆ ಸಿ. ಟಿ. ರವಿ ಸದಸ್ಯತ್ವ ಅನರ್ಹಗೊಳಿಸಿ: ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ… ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸೋಣ: ಆರ್ಚ್ ಬಿಷಪ್ಸ್ ಹೌಸ್ ಕ್ರಿಸ್ಮಸ್ ಆಚರಣೆಯಲ್ಲಿ ಮುಖ್ಯಮಂತ್ರಿ… ವಕ್ಫ್ ಹೋರಾಟಕ್ಕೆ ಮಣಿದು ಸಮಿತಿ ರಚನೆಗೆ ಸರಕಾರ ನಿರ್ಧಾರ: ಪ್ರತಿಪಕ್ಷ ನಾಯಕ ಆರ್‌.… ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ರಾತ್ರಿಯಡೀ ಪೊಲೀಸ್ ವಾಹನದಲ್ಲಿ ಸಿ.ಟಿ. ರವಿ ಸುತ್ತಾಟ!: ಕಾರಣ ಏನು ಗೊತ್ತೇ? ಸಿ.ಟಿ.ರವಿ ಬಂಧನ: ಚಿಕ್ಕಮಗಳೂರು, ಕೊಟ್ಟಿಗೆಹಾರದಲ್ಲಿ ಬಿಜೆಪಿ ಭಾರೀ ಪ್ರತಿಭಟನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪಿಒಸಿ ದರ್ಜೆ: ವಿಮಾನಯಾನ ಸಚಿವ ಜತೆ ಸಂಸದ ಕ್ಯಾಪ್ಟನ್… ಮಂಗಳೂರು: ಹೊಸ ವರ್ಷದ ಆಚರಣೆಗೆ ತರಿಸಿದ್ದ 9 ಲಕ್ಷ ರೂ. ಮೌಲ್ಯದ ಡ್ರಗ್ಸ್… ಎನ್.ಆರ್.ಪುರ: ತಂದೆ- ಮಗನ ಮೇಲೆ ಕಾಡಾನೆ ದಾಳಿ; ತಂದೆ ಸಾವು; ಮಗ ತಪ್ಪಿಸಿಕೊಂಡು…

ಇತ್ತೀಚಿನ ಸುದ್ದಿ

ಭಾರತಕ್ಕಾಗಿ ಭವಿಷ್ಯದ ಮಾರ್ಗಸೂಚಿ ಅನಾವರಣಗೊಳಿಸಿದ ಹೋಂಡಾ ಮೋಟಾರ್ಸೈಕಲ್ & ಸ್ಕೂಟರ್ ಇಂಡಿಯಾ

21/04/2022, 19:46

ಹೊಸದಿಲ್ಲಿ(reporterkarnataka.com): ʻಹೋಂಡಾ ಮೋಟಾರ್ಸೈಕಲ್ & ಸ್ಕೂಟರ್ ಇಂಡಿಯಾʼ(ಎಚ್ಎಂಎಸ್ಐ) ಸಂಸ್ಥೆಯು ಇಂದು ʻಭವಿಷ್ಯದ ಮತ್ತು ಬದಲಿ ಸಾರಿಗೆಗಾಗಿ ವ್ಯವಹಾರ ಪರಿವರ್ತನೆʼಯತ್ತ ತನ್ನ ಪ್ರಗತಿಯನ್ನು ಪ್ರಕಟಿಸಿದೆ. ಇದರ ಜೊತೆಗೆ, ಕಂಪನಿಯು ತನ್ನ ಮನೇಸರ್ (ಹರಿಯಾಣ) ಘಟಕವನ್ನು ಜಾಗತಿಕ ಸಂಪನ್ಮೂಲ ಕಾರ್ಖಾನೆಯಾಗಿ ‘ಜಗತ್ತಿಗಾಗಿ ಮೇಕಿಂಗ್ ಇನ್ ಇಂಡಿಯಾʼ ನಿಟ್ಟಿನಲ್ಲಿ ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದೆ.

ರಫ್ತು ಹೆಜ್ಜೆಗುರುತನ್ನು ವಿಸ್ತರಿಸುವುದರ ಜೊತೆಗೆ, ಇಂಧನ-ದಕ್ಷ ಉತ್ಪನ್ನಗಳ ಅಭಿವೃದ್ಧಿಯಲ್ಲಿ ʻಎಚ್ಎಂಎಸ್ಐʼ ಇನ್ನಿಲ್ಲದಂತೆ ತೊಡಗಿಕೊಂಡಿದೆ. ಇದರ ಭಾಗವಾಗಿ, ಕಂಪನಿಯು ತನ್ನ ಉತ್ಪನ್ನಗಳ ಶ್ರೇಣಿಯಲ್ಲಿ ʻಫ್ಲೆಕ್ಸ್-ಫ್ಯೂಯಲ್  ತಂತ್ರಜ್ಞಾನʼವನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲು ಮತ್ತು ಸಂಯೋಜನೆಗೊಳಿಸಲು ಯೋಜಿಸಿದೆ. 

ಆರಂಭಿಕ ಹಂತದ ಮೋಟಾರ್ಸೈಕಲ್ ವಿಭಾಗವು ಭಾರತದಲ್ಲಿ ಒಟ್ಟು ದ್ವಿಚಕ್ರ ವಾಹನ ಮಾರಾಟದಲ್ಲಿ ಗಮನಾರ್ಹ ಪಾಲನ್ನು ಹೊಂದಿದೆ. ಜನಸಾಮಾನ್ಯರಿಗೆ ಸೇವೆ ಸಲ್ಲಿಸಲು ಈ ಅವಕಾಶವನ್ನು ಬಳಸಿಕೊಂಡು, ಪ್ರಯಾಣಿಕರ ವಿಭಾಗದಲ್ಲಿ ಕಡಿಮೆ ಶ್ರೇಣಿಯ ಹೊಸ ಮೋಟಾರ್ಸೈಕಲ್ ಅನ್ನು ʻಎಚ್ಎಂಎಸ್ಐʼ ಪರಿಚಯಿಸಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಹೋಂಡಾ ಮೋಟಾರ್ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರು, ಅಧ್ಯಕ್ಷ ಮತ್ತು ಸಿಇಒ ಶ್ರೀ ಅತ್ಸುಶಿ ಒಗಾಟಾ ಅವರು, “ಹೋಂಡಾದ ಜಾಗತಿಕ ಪರಿಣತಿಯನ್ನು ಬಲವಾದ ದೇಶೀಯ ಬೆಂಬಲದೊಂದಿಗೆ ಸಂಯೋಜಿಸುವ ಮೂಲಕ, ʻಎಚ್ಎಂಎಸ್ಐʼ ಭಾರತದಲ್ಲಿ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತದೆ. ಫ್ಲೆಕ್ಸ್-ಫ್ಯೂಯಲ್ ತಂತ್ರಜ್ಞಾನ ಮತ್ತು ಭವಿಷ್ಯದಲ್ಲಿ ʻಮಲ್ಟಿಪಲ್ ಇವಿʼ ಮಾದರಿಯ ಹಂತ ಹಂತದ ಅನುಷ್ಠಾನವು ಮುಂದಿನ ರೋಮಾಂಚಕ ಪ್ರಯಾಣಕ್ಕೆ ಕಾರಣವಾಗಲಿದೆ.  ಕಡಿಮೆ ಶ್ರೇಣಿಯ ಮೋಟಾರ್ಸೈಕಲ್ ವಿಭಾಗವನ್ನು ಪ್ರವೇಶಿಸುವ ಜೊತೆಗೆ ದೇಶೀಯ ಮಾರುಕಟ್ಟೆಗಳಲ್ಲಿ ತನ್ನ ಹೊಸ ಮಾದರಿಗಳ ವ್ಯವಹಾರವನ್ನು ಹೆಚ್ಚಿಸಲು ʻಎಚ್ಎಂಎಸ್ಐʼ ಉದ್ದೇಶಿಸಿದೆ. ಇದೇ ವೇಳೆ, ವಿದೇಶಗಳಲ್ಲೂ ತನ್ನ ರೆಕ್ಕೆಗಳನ್ನು ವಿಸ್ತರಿಸುತ್ತಿರುವ ʻಎಚ್ಎಂಎಸ್ಐʼ, ತನ್ನ ಅತ್ಯುನ್ನತ ಮಟ್ಟದ ಜಾಗತಿಕ ಗುಣಮಟ್ಟದ ಮಾನದಂಡಗಳೊಂದಿಗೆ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೆಚ್ಚು ಸೇವೆ ಸಲ್ಲಿಸುವ ಗುರಿಯನ್ನು ಹೊಂದಿದೆ” ಎಂದು ಹೇಳಿದರು.

ʻಹೋಂಡಾ ಮೋಟಾರ್ಸೈಕಲ್ & ಸ್ಕೂಟರ್ ಇಂಡಿಯಾʼದ ಮಾರಾಟ ಮತ್ತು ಮಾರ್ಕೆಟಿಂಗ್ ನಿರ್ದೇಶಕ ಶ್ರೀ ಯಾದವಿಂದರ್ ಸಿಂಗ್ ಗುಲೇರಿಯಾ ಅವರು ʻಎಚ್ಎಂಎಸ್ಐʼ ಭವಿಷ್ಯದ ಮಾರ್ಗಸೂಚಿಯ ಬಗ್ಗೆ ವಿವರಿಸುತ್ತಾ, “20 ವರ್ಷಗಳಲ್ಲಿ ಗ್ರಾಹಕರು ಮತ್ತು ಸಮುದಾಯದೊಂದಿಗೆ ನಿರ್ಮಿಸಲಾದ ವಿಶ್ವಾಸದ ಸಂಬಂಧವನ್ನು ಪೋಷಿಸುವ ಮೂಲಕ, ʻಎಚ್ಎಂಎಸ್ಐʼ ಇಂದು 5 ಕೋಟಿಗೂ ಹೆಚ್ಚು ಭಾರತೀಯ ಕುಟುಂಬಗಳನ್ನು ಸಂತೋಷಪಡಿಸುತ್ತದೆ. ಪೂರೈಕೆ ಸರಪಳಿ ಸಮಸ್ಯೆಗಳು ಇನ್ನೂ ಮುಂದುವರೆದಿದ್ದರೂ ಮತ್ತು ಉದ್ಯಮವು ಹೆಚ್ಚುತ್ತಿರುವ ಸರಕು ಮತ್ತು ಇಂಧನ ಬೆಲೆಗಳ ಸವಾಲನ್ನು ಎದುರಿಸುತ್ತಿದ್ದರೂ, ಕಳೆದ ಹಣಕಾಸು ವರ್ಷದ ಕಡಿಮೆ ತಳಹದಿಯ ಮೇಲೆ ಸುಸ್ಥಿರ ಮಾರುಕಟ್ಟೆ ಚೇತರಿಕೆಯನ್ನು ನಾವು ನಿರೀಕ್ಷಿಸುತ್ತೇವೆ,ʼʼ ಎಂದರು.

ವಿಶ್ವಕ್ಕಾಗಿ ಅಭಿವೃದ್ಧಿಯ ಎಂಜಿನ್ ಗಳ ತಯಾರಿಕೆ

ಯುರೋಪ್ ಮತ್ತು ಜಪಾನ್ ಸೇರಿದಂತೆ 40 ದೇಶಗಳ ಜನರಲ್ಲಿ ಮುಗುಳ್ನಗೆಯನ್ನು ಮೂಡಿಸುತ್ತಿರುವ ʻಎಚ್ಎಂಎಸ್ಐʼನ ಉತ್ಪನ್ನಗಳು ಜಾಗತಿಕವಾಗಿ ಮೆಚ್ಚುಗೆಗೆ ಪಾತ್ರವಾಗಿವೆ. ಹೀಗಾಗಿ, ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಲ್ಲಿ ಹೆಜ್ಜೆಗುರುತನ್ನು ವಿಸ್ತರಿಸುವ ಮೂಲಕ ʻಎಚ್ಎಂಎಸ್ಐʼ, ತನ್ನ ಉತ್ಕೃಷ್ಟ ಉತ್ಪಾದನಾ ತಂತ್ರಜ್ಞಾನಗಳೊಂದಿಗೆ ವಿಶ್ವದರ್ಜೆಯ ಉತ್ಪನ್ನಗಳನ್ನು ನೀಡುವ ಮೂಲಕ ರಫ್ತು ವಿಸ್ತರಣೆಯನ್ನು ಮುಂದುವರಿಸುವ ಗುರಿಯನ್ನು ಹೊಂದಿದೆ.

ಕಡಿಮೆ ಶ್ರೇಣಿಯ ಗ್ರಾಹಕ ವಿಭಾಗವನ್ನು ಆನಂದಪಡಿಸುವುದು

ಆರಂಭಿಕ ಶ್ರೇಣಿಯ ದ್ವಿಚಕ್ರ ವಾಹನ ವಿಭಾಗದಲ್ಲಿ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿರುವ ʻಎಚ್ಎಂಎಸ್ಐʼ, ಕಡಿಮೆ-ಶ್ರೇಣಿಯ ಮೋಟಾರ್ಸೈಕಲ್ ಅನ್ನು ಪರಿಚಯಿಸಲು ಯೋಜಿಸಿದೆ. ಹೊಸ ಕೊಡುಗೆಯು ತನ್ನ ಗ್ರಾಹಕರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ದೈನಂದಿನ ಪ್ರಯಾಣವನ್ನು ಒದಗಿಸಲಿದೆ.

ʻಫ್ಲೆಕ್ಸ್ – ಫ್ಯೂಯಲ್ʼ ತಂತ್ರಜ್ಞಾನ ಮತ್ತು ವಿದ್ಯುತ್ ಚಾಲಿತ ಸಾರಿಗೆ

ಜಾಗತಿಕವಾಗಿ ಫ್ಲೆಕ್ಸ್-ಫ್ಯೂಯಲ್ ತಂತ್ರಜ್ಞಾನದಲ್ಲಿ ಒಂದು ದಶಕಕ್ಕೂ ಹೆಚ್ಚು ಪರಿಣತಿ ಮತ್ತು ಬ್ರೆಜಿಲ್ ಮಾರುಕಟ್ಟೆಯಲ್ಲಿ 7 ದಶಲಕ್ಷಕ್ಕೂ ಹೆಚ್ಚು ಸಂತೃಪ್ತ ಗ್ರಾಹಕರನ್ನು ಹೊಂದಿರುವ ʻಎಚ್ಎಂಎಸ್ಐ, ಭಾರತದಲ್ಲಿ ದ್ವಿಚಕ್ರ ವಾಹನ ಮಾರುಕಟ್ಟೆಗೆ ಸರಾಗವಾಗಿ ʻಫ್ಲೆಕ್ಸ್-ಫ್ಯೂಯಲ್ʼ ಪರಿವರ್ತನೆಯನ್ನು ಮಾಡಲು ಸಜ್ಜಾಗಿದೆ.

ಮುಂಬರುವ ವರ್ಷಗಳಲ್ಲಿ ʻಎಚ್ಎಂಎಸ್ಐʼ ಅನೇಕ ವಿದ್ಯುತ್ ಚಾಲಿತ ವಾಹನಗಳ (ಇವಿ) ಮಾದರಿಗಳನ್ನು ಪರಿಚಯಿಸಲು ಯೋಜಿಸಿದೆ. ಇದಕ್ಕಾಗಿ ದೇಶದಲ್ಲಿರುವ ಹೋಂಡಾದ ಇತರ ಅಂಗಸಂಸ್ಥೆಗಳಿಂದ ಬೆಂಬಲವನ್ನು ಬಳಸಿಕೊಳ್ಳಲಿದೆ. ಪ್ರಸ್ತುತ, ಕಂಪನಿಯು ತನ್ನ ʻಇವಿʼ ಮಾದರಿಯನ್ನು ಸಿದ್ಧಪಡಿಸಲು ಮತ್ತು ಭಾರತದಲ್ಲಿ ಒಟ್ಟಾರೆ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಕಾರ್ಯಸಾಧ್ಯತಾ-ಅಧ್ಯಯನ ನಡೆಸುತ್ತಿದೆ

ಸುರಕ್ಷತೆ – ʻಎಚ್ಎಂಎಸ್ಐʼನ ಭವಿಷ್ಯದ ಬೆಳವಣಿಗೆಯ ಕಥೆಯಲ್ಲಿ ಒಂದು ಆಧಾರಸ್ತಂಭ

2050ರ ವೇಳೆಗೆ ಜಾಗತಿಕವಾಗಿ ಹೋಂಡಾ ಮೋಟಾರ್ಸೈಕಲ್ಗಳು ಮತ್ತು ಸಂಸ್ಥೆಯ ವಾಹನಗಳಿಂದ ಸಂಭವಿಸುವ ಅಪಘಾತ ಸಂಬಂಧಿತ ಸಾವು-ನೋವುಗಳನ್ನು ಶೂನ್ಯದ ಹಂತಕ್ಕೆ ಕೊಂಡೊಯ್ಯಲು ಸಂಸ್ಥೆಯು ಶ್ರಮಿಸುತ್ತದೆ.  ಜಾಗತಿಕ ದೃಷ್ಟಿಕೋನಕ್ಕೆ ಅನುಗುಣವಾಗಿ, ಜಾಗೃತಿ ಮತ್ತು ಸವಾರರ ತರಬೇತಿ ಉಪಕ್ರಮಗಳು ಸೇರಿದಂತೆ ತನ್ನ ಸುರಕ್ಷತಾ ಗುರಿಗಳ ವ್ಯಾಪ್ತಿಯನ್ನು ʻಎಚ್ಎಂಎಸ್ಐʼ ವಿಸ್ತರಿಸುತ್ತಿದೆ. ಸುರಕ್ಷಿತ ಸವಾರಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ತರಬೇತಿ ಪಡೆದ ಮಾನವಶಕ್ತಿಯೊಂದಿಗೆ ಸುರಕ್ಷಿತ ಮತ್ತು ಹೆಚ್ಚು ವಿಶ್ವಾಸಾರ್ಹ ದ್ವಿಚಕ್ರ ವಾಹನಗಳನ್ನು ನಿರ್ಮಿಸುವ ಬಗ್ಗೆ ಗಂಭೀರವಾಗಿ ಗಮನ ಹರಿಸುವುದು ನಿರ್ಣಾಯಕವಾಗಿದೆ. 

‘ಎಚ್ಎಂಎಸ್ಐʼನ ಮನೇಸರ್ ಘಟಕ- ಜಾಗತಿಕ ಸಂಪನ್ಮೂಲ ಕಾರ್ಖಾನೆಯಾಗಿ ರೂಪಾಂತರಿತ

ಭವಿಷ್ಯದ ಸನ್ನದ್ಧ ಸಂಸ್ಥೆಯಾಗಿ, ʻಹೋಂಡಾ ಮೋಟಾರ್ಸೈಕಲ್ & ಸ್ಕೂಟರ್ ಇಂಡಿಯಾʼವು ಮನೇಸರ್ನಲ್ಲಿರುವ ತನ್ನ ಮೂಲ ಕಾರ್ಖಾನೆಯನ್ನು ಅತ್ಯಾಧುನಿಕ ಹಾಗೂ ಆಮೂಲಾಗ್ರವಾಗಿ ಸುಧಾರಿಸುವ ಮೂಲಕ ಹೊಸ ಸವಾಲುಗಳಿಗೆ ತ್ವರಿತವಾಗಿ ಹೊಂದಿಕೊಳ್ಳುತ್ತಿದೆ. ಪ್ರಸ್ತುತ ʻಎಚ್ಎಂಎಸ್ಐʼನ ಎಲ್ಲಾ ಕಾರ್ಪೊರೇಟ್ ಕಾರ್ಯಗಳು ಒಂದೇ ಸೂರಿನಡಿ ಮತ್ತು ಒಂದೇ ಸ್ಥಳದಿಂದ ನಡೆಯುತ್ತವೆ. ಎಲ್ಲಾ ತಂಡಗಳು ಮತ್ತು ವಿಭಾಗಗಳಲ್ಲಿ ಸಂಯೋಜಿತ ದಕ್ಷತೆಗಳನ್ನು ಪಡೆಯಲು ಇದರಿಂದ ನೆರವಾಗಲಿದೆ. ಉತ್ಪಾದಕತೆಯ ಹೊರತಾಗಿ, ದೈನಂದಿನ ಕಾರ್ಯಾಚರಣೆಗಳಲ್ಲಿ ಕೈಗೊಳ್ಳಲಾದ ವಿವಿಧ ಹೊಸ ಡಿಜಿಟಲ್ ಉಪಕ್ರಮಗಳು ಎಲ್ಲಾ ʻಎಚ್ಎಂಎಸ್ಐʼ ಸಿಬ್ಬಂದಿಯ ಕೆಲಸ-ಜೀವನದ ಸಮತೋಲನವನ್ನು ಹೆಚ್ಚಿಸಿವೆ.

ಇತ್ತೀಚಿನ ಸುದ್ದಿ

ಜಾಹೀರಾತು