ಇತ್ತೀಚಿನ ಸುದ್ದಿ
ಭಾರತ್ ಬಂದ್: ಕುರುಕ್ಷೇತ್ರದ ಸಮೀಪ ದೆಹಲಿ-ಅಮೃತಸರ ಹೆದ್ದಾರಿ ಸಂಚಾರಕ್ಕೆ ನಿರ್ಬಂಧ
27/09/2021, 10:22
ಹೊಸದಿಲ್ಲಿ(reporterkarnataka.com): ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ಕುರುಕ್ಷೇತ್ರದ ಬಳಿ ದೆಹಲಿ-ಅಮೃತಸರ ಹೆದ್ದಾರಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ರೈತರ ಆಂದೋಲನವನ್ನು ಮುನ್ನಡೆಸುತ್ತಿರುವ 40 ಕ್ಕೂ ಹೆಚ್ಚು ಕೃಷಿ ಒಕ್ಕೂಟಗಳ ಸಂಯುಕ್ತ ಕಿಸಾನ್ ಮೋರ್ಚಾ ಜನರನ್ನು ಬಂದ್ ಬೆಂಬಲಿಸುವಂತೆ ಮನವಿ ಮಾಡಿದೆ. ಹೊಸ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆ 10 ತಿಂಗಳುಗಳನ್ನು ಪೂರೈಸಿದೆ. ಎಂಎಸ್‌ಪಿ ಅಥವಾ ಕನಿಷ್ಠ ಬೆಂಬಲ ಬೆಲೆಯ ಮೇಲೆ ಸಾಂವಿಧಾನಿಕ ಖಾತರಿಗಾಗಿ ರೈತರು ಒತ್ತಾಯಿಸುತ್ತಿದ್ದಾರೆ. ಹೊಸ ಕಾನೂನುಗಳು ಖಾಸಗಿ ಸಂಸ್ಥೆಗಳು ಕೃಷಿ ವಲಯವನ್ನು ಸ್ವಾಧೀನಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ, ರೈತರ ಆಂದೋಲನವನ್ನು ಮುನ್ನಡೆಸುತ್ತಿರುವ 40 ಕ್ಕೂ ಹೆಚ್ಚು ಕೃಷಿ ಒಕ್ಕೂಟಗಳ ಸಂಸ್ಥೆಯಾಗಿದ್ದು, ಜನರು ಬಂದ್‌ಗೆ ಸೇರುವಂತೆ ಮನವಿ ಮಾಡಿದ್ದಾರೆ. ಸಂಸ್ಥೆಯು ರಾಜಕೀಯ ಪಕ್ಷಗಳನ್ನು “ಪ್ರಜಾಪ್ರಭುತ್ವ ಮತ್ತು ಫೆಡರಲಿಸಂ ತತ್ವಗಳನ್ನು ರಕ್ಷಿಸುವ ನಿಟ್ಟಿನಲ್ಲಿ ರೈತರೊಂದಿಗೆ ನಿಲ್ಲುವಂತೆ” ಕೇಳಿದೆ.