ಇತ್ತೀಚಿನ ಸುದ್ದಿ
ಬೆವನೂರು ಶ್ರೀ ಸುಕ್ಷೇತ್ರ ಅಮೋಘ ಸಿದ್ದೇಶ್ವರ ಪಲ್ಲಕ್ಕಿ ಉತ್ಸವ: ಕರಕರಮುಂಡಿ ಸಮುದಾಯದಿಂದ ಸಿಡಿಗಾಯಿ ಸೇವೆ
20/08/2024, 14:36
ಶಿವರಾಯ ಕರಕರಮುಂಡಿ ಬೆಳಗಾವಿ
info.reporterkarnataka@gmail.com
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬೆವನೂರು ಗ್ರಾಮದ ಶ್ರೀ ಸುಕ್ಷೇತ್ರ ಅಮೋಘ ಸಿದ್ದೇಶ್ವರ ಪಲ್ಲಕ್ಕಿ ಉತ್ಸವಕ್ಕೆ ಹಲ್ಯಾಳ ಗ್ರಾಮದ ಕರಕರಮುಂಡಿ ಸಮುದಾಯದವರು ಪ್ರತಿ ವರ್ಷದಂತೆ ಈ ವರ್ಷವೂ
ಬಹಳಷ್ಟು ಅದ್ದೂರಿಯಾಗಿ ಸರಿ ಸುಮಾರು ಎರಡರಿಂದ – ಎರೆಡೂವರೆ ಸಾವಿರ ತೆಂಗಿನಕಾಯಿಗಳನ್ನು ಸಿಡಿಗಾಯಿ ಒಡೆದು ಸೇವೆ ಸಲ್ಲಿಸಿದರು.
ಹಲ್ಯಾಳ ಗ್ರಾಮದಲ್ಲಿ ಪ್ರತಿ ವರ್ಷದ ಕೊನೆಗೆ ಬರುವ ಶ್ರಾವಣ ಮಾಸದ ಮೂರನೇ ಶ್ರಾವಣ ಸೋಮವಾರದ ನಿಮಿತ್ಯ ಹಲ್ಯಾಳ ಗ್ರಾಮದ ಕೃಷ್ಣಾ ನದಿ ತೀರಕ್ಕೆ ಸ್ನಾನಕ್ಕೆ ಬರುವ ಅಥಣಿ ತಾಲೂಕಿನ ಬೆವನೂರು ಗ್ರಾಮದ ಶ್ರೀ ಸುಕ್ಷೇತ್ರ ಅಮೋಘಸಿದ್ದೇಶ್ವರ ಪಲ್ಲಕ್ಕಿ ಉತ್ಸವಕ್ಕೆ ಹಲ್ಯಾಳ ಗ್ರಾಮದ ಕರಕರಮುಂಡಿ ಸಮುದಾಯದವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಬಹಳಷ್ಟು ಅದ್ದೂರಿಯಾಗಿ ಸರಿ ಸುಮಾರು ಎರಡರಿಂದ – ಎರೆಡುವರೇ ಸಾವಿರ ತೆಂಗಿನಕಾಯಿಗಳನ್ನು ಸಿಡಿಗಾಯಿ ಒಡೆಯುವ ರೂಪದಲ್ಲಿ ಒಡೆದು ಪಲ್ಲಕಿ ಜೊತೆಗೆ ಬರುವ ಸರ್ವ ಭಕ್ತರಿಗೂ ಅಣ್ಣ ಪ್ರಸಾದದ ವ್ಯವಸ್ಥೆ ಮಾಡಿಸಿದರು.
ಗ್ರಾಮದ ಪ್ರಮುಖರಾದ ಹಣಮಂತ ಕರಕರಮುಂಡಿ •ಮನೋಹರ ಕರಕರಮುಂಡಿ, ಸೋಮಣ್ಣ ಕೋಳಿ, ಅಂಬಣ್ಣ ಕರಕರಮುಂಡಿ, ಮಾದೇವ ಕೋಳಿ, ಲಕ್ಷ್ಮಣ ಕರಕರಮುಂಡಿ ಎಲ್ಲ ಹಿರಿಯರು ಸೇರಿಕೊಂಡು ಪಲ್ಲಕ್ಕಿ ಉತ್ಸವದಿಂದ ನಡೆಸಿದರು.