ಇತ್ತೀಚಿನ ಸುದ್ದಿ
ಬೆಂಕಿ ಅವಘಡಕ್ಕೆ ತುತ್ತಾದ ಗ್ಲೋಬಲ್ ಮಾರುಕಟ್ಟೆಗೆ ಕೆಪಿಸಿಸಿ ಪ್ರಧಾನ ಕಾಯದರ್ಶಿ ಪದ್ಮರಾಜ್ ಆರ್. ಪೂಜಾರಿ ಭೇಟಿ: ಗರಿಷ್ಠ ಪರಿಹಾರಕ್ಕೆ ಸೂಚನೆ
10/06/2024, 23:39
ಮಂಗಳೂರು(reporterkarnataka.com): ಬೆಂಕಿ ಅವಘಡ ಸಂಭವಿಸಿದ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿರುವ ಖಾಸಗಿ ಗ್ಲೋಬಲ್ ಮಾರುಕಟ್ಟೆಗೆ ಕೆಪಿಸಿಸಿ ಪ್ರಧಾನ ಕಾಯದರ್ಶಿ ಪದ್ಮರಾಜ್ ಆರ್. ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾರುಕಟ್ಟೆಯ 8 ಹಣ್ಣಿನ ಮಳಿಗೆಗಳು ಸಂಪೂರ್ಣ ಭಸ್ಮವಾಗಿದ್ದು, ಒಂದೇ ಸಾಲಿನಲ್ಲಿರುವ 24 ಮಳಿಗೆಗಳಿಗೆ ಬೆಂಕಿ ವ್ಯಾಪಿಸಿ ಲಕ್ಷಾಂತರ ಮೌಲ್ಯದ ಹಣ್ಣುಗಳು ಬೆಂಕಿಗೆ ಆಹುತಿಯಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪದ್ಮರಾಜ್ ಆರ್. ಪೂಜಾರಿ ಅವರು ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳೊಂದಿಗೆ ಮಾತನಾಡಿ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ದೊರಕಿಸಿಕೊಡುವಂತೆ ಸೂಚಿಸಿದರು. ಬೆಂಕಿಗಾಹುತಿಯಾದ ಅಂಗಡಿ ಮಾಲೀಕರೊಂದಿಗೆ ಮಾತನಾಡಿದ ಪದ್ಮರಾಜ್‌ರವರು ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದರು.