2:19 PM Saturday27 - July 2024
ಬ್ರೇಕಿಂಗ್ ನ್ಯೂಸ್
ಧಾರಾಕಾರ ಮಳೆ: ತೀರ್ಥಹಳ್ಳಿ ರಥಬೀದಿಯಲ್ಲಿ ಮನೆ ಗೋಡೆ ಕುಸಿತ ಬಿರುಸಿನ ಗಾಳಿ ಮಳೆ: ಚಿಕ್ಕಮಗಳೂರು ಜಿಲ್ಲೆಯ 6 ತಾಲೂಕುಗಳ ಶಾಲೆಗಳಿಗೆ ಇಂದು ರಜೆ ಅವ್ಯಾಹತ ಬಿರುಸಿನ ಗಾಳಿ ಮಳೆ: ತೀರ್ಥಹಳ್ಳಿ ತಾಲೂಕಿನಾದ್ಯಂತ ನಾಳೆ ಶಾಲಾ- ಕಾಲೇಜುಗಳಿಗೆ ರಜೆ ವಾಹನಗಳಲ್ಲಿ ಪ್ರಖರ ಬೆಳಕಿನ ಬಲ್ಬ್ ಅಳವಡಿಕೆ: ಒಟ್ಟು 1170 ಪ್ರಕರಣ ದಾಖಲು; 5.86… ನಾಗಬೇನಾಳ: ಶ್ರೀ ಸಂತ ಸೇವಾಲಾಲ್ ಹಾಗೂ ಶ್ರೀ ಮರಿಯಮ್ಮ ದೇವಿ ಜಾತ್ರಾ ಮಹೋತ್ಸವ ಇಲಾಖೆಗಳ ನಡುವೆ ಸಮನ್ವಯತೆ ಕೊರತೆ: ಮರೋಳಿಯ ಡೇಂಜರ್ ಟ್ರೀ ತೆರವಿಗೆ ಮೀನಮೇಷ! ಸ್ಪೆಲ್ ಬೀ ರಾಜ್ಯಮಟ್ಟದ ಗ್ರ್ಯಾಂಡ್ ಫಿನಾಲೆ: ಮೇರಿಹಿಲ್ ಮೌಂಟ್ ಕಾರ್ ಮೆಲ್ ಸೆಂಟ್ರಲ್… 3 ಘಾಟ್ ಗಳಲ್ಲಿ ಸಂಚಾರ ನಿಷೇಧ: ಜಿಲ್ಲಾಧಿಕಾರಿಗಳ ಸಮನ್ವಯತೆ ಕೊರತೆ ಬಗ್ಗೆ ಪಿಡಬ್ಲ್ಯೂಡಿ… ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಭಾರೀ ಹೆಚ್ಚಳ: ತಗ್ಗು ಪ್ರದೇಶ ಮುಳುಗಡೆ;… ಪ್ರವಾಹ: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ನಂಜುಂಡೇಶ್ವರನಿಗೆ ಜಲದಿಗ್ಬಂಧನ

ಇತ್ತೀಚಿನ ಸುದ್ದಿ

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮ

10/06/2024, 23:01

ಮಂಗಳೂರು(reporterkarnataka.com): ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ವತಿಯಿಂದ ವಿಶ್ವ ಪರಿಸರ ದಿನದ ಪ್ರಯುಕ್ತ ಸಸಿನೆಡುವ ಕಾರ್ಯಕ್ರಮವನ್ನು ನಗರದ ಪಡೀಲ್ ನಲ್ಲಿರುವ ಸಂಘದ ಪ್ರಧಾನ ಕಚೇರಿ “ಆತ್ಮಶಕ್ತಿ ಸೌಧ”ದಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು “ಪರಿಸರ ಸೇವಾ ರತ್ನ” ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ತಾರಸಿ ಕೃಷಿಕರಾದ ಕೃಷ್ಣಪ್ಪ ಗೌಡ ಪಡ್ಡಂಬೈಲ್ ಅವರು ಸಸಿ ನೆಡುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪ್ರತಿಯೊಬ್ಬರು ಮನೆಯಲ್ಲಿ ಒಂದು ಗಿಡವನ್ನು ಬೆಳೆಸಬೇಕು. ಗಿಡ ನೆಡುವುದರ ಜೊತೆಗೆ ನೆಟ್ಟ ಗಿಡಗಳನ್ನು ಚೆನ್ನಾಗಿ ಪೋಷಿಸಿ ಪರಿಸರ ಸಂರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್‌ರವರು ಮಾತನಾಡಿ, ಮನೆಯ ಸುತ್ತಮುತ್ತ ಗಿಡ ನೆಡಲು ಸ್ಥಳಾವಕಾಶ ಇಲ್ಲದ ಸಂದರ್ಭದಲ್ಲಿ ಎಲ್ಲಾ ರೀತಿಯ ಗಿಡಗಳನ್ನು ತನ್ನ ಮನೆಯ ತಾರಸಿಯಲ್ಲಿ ಬೆಳೆಸಿ ಕೃಷ್ಣಪ್ಪ ಗೌಡ ಪಡ್ಡಂಬೈಲ್‌ರವರು ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಮನೆಯ ತಾರಸಿಯಲ್ಲಿ ಗಿಡಗಳನ್ನು ಬೆಳೆಸುವುದರಿಂದ ವಾತಾವರಣದಲ್ಲಿ ಶುದ್ದ ಗಾಳಿಯು ದೊರೆಯುತ್ತದೆ. ಶ್ರೀಯುತರು ಕಳೆದ 25 ವರ್ಷಗಳಿಂದ ತನ್ನ ಮನೆಯ ತಾರಸಿಯಲ್ಲಿ ಗಿಡಗಳನ್ನು ಬೆಳೆದು ಪರಿಸರ ಸಂರಕ್ಷಣೆಗೆ ಮಹತ್ತರವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು. ಸಂಘದ ವತಿಯಿಂದ ಪಡೀಲ್ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಹಾಗೂ ಸುತ್ತಮುತ್ತ ಪರಿಸರದಲ್ಲಿ ಗಿಡಗಳನ್ನು ನೆಡಲಾಗಿದೆ ಎಂದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಸೌಮ್ಯ ವಿಜಯ್, ಸಲಹೆಗಾರರಾದ ಅಶೋಕ್ ಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು