11:05 PM Saturday15 - November 2025
ಬ್ರೇಕಿಂಗ್ ನ್ಯೂಸ್
ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ ಬಿಹಾರ ಚುನಾವಣೆ ಫಲಿತಾಂಶದಿಂದ ಪ್ರಧಾನಿ ಮೋದಿಯವರ ಜನಪ್ರೀಯತೆ ಮತ್ತೆ ದೃಢಪಟ್ಟಿದೆ: ಮಾಜಿ ಸಿಎಂ… ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ… ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ಸುಪ್ರೀಂ ಕೋರ್ಟ್ ನಿಂದ ವಜಾ: ರಾಜ್ಯಕ್ಕೆ ಮಹಾಜಯ Shivamogga | ತೀರ್ಥಹಳ್ಳಿ ಸಮೀಪದ ತಳುವೆ ಬಳಿ ಅಪಘಾತ: ವ್ಯಕ್ತಿಯೋರ್ವನ ಕಾಲು ಕಟ್

ಇತ್ತೀಚಿನ ಸುದ್ದಿ

ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ

15/11/2025, 23:05

ಬೆಂಗಳೂರು(reporterkarnataka.com): ಎರಡು ತಿಂಗಳ ಹಿಂದೆ ಇದೇ ಜಾಗದಲ್ಲಿ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಮತಕಳ್ಳತನ ವಿರುದ್ಧ ಪ್ರತಿಭಟನೆ ಮಾಡಿದೆವು. ಆ ಪ್ರತಿಭಟನೆಯಲ್ಲಿ 1 ಲಕ್ಷ ಜನ ಭಾಗವಹಿಸಿದ್ದರು. ಅಂದು ಹಚ್ಚಿದ ಪ್ರತಿಭಟನಾ ಕಿಚ್ಚು ದೇಶದಾದ್ಯಂತ ಹಬ್ಬಿದೆ. ಬಿಹಾರ ಚುನಾವಣಾ ಫಲಿತಾಂಶ ಬೇರೆ ರಾಜ್ಯಗಳ ಮೇಲೆ ಪರಿಣಾಮ ಬೀರಲಿದೆಯೇ ಎಂದು ಮಾಧ್ಯಮಗಳು ಚರ್ಚೆ ಮಾಡುತ್ತಿವೆ. ಈ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರುವುದಿಲ್ಲ. ಕಾರಣ, ನಮ್ಮ ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಎಂಬ ಎರಡು ದೊಡ್ಡ ಬ್ರಹ್ಮಾಸ್ತ್ರಗಳು ಇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ ಚಂದ್ರಶೇಖರ್ ಹೇಳಿದರು.
ಯಾವ ಬಿಜೆಪಿಯಲ್ಲ, ಅಮಿತ್ ಶಾ ಹಾಗೂ ಮೋದಿ ಅವರು ಬಂದರೂ ನಮ್ಮ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಮತಗಳ್ಳತನ ವಿರುದ್ದ ಯುವ ಕಾಂಗ್ರೆಸ್ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ನುಡಿದರು.
ದೊಡ್ಡ ನಾಯಕರಾಗಿ ಬೆಳೆಯಲು ಯುವ ಕಾಂಗ್ರೆಸ್ ಹಾಗೂ ಎನ್ಎಸ್ ಯುಐ ಉತ್ತಮ ವೇದಿಕೆ. ಅದಕ್ಕೆ ನೀವು ನಿಮ್ಮ ಶಕ್ತಿ ಪ್ರದರ್ಶನ ಮಾಡಬೇಕು. ನ್ಯಾಯುತವಾಗಿ ಹೋರಾಟ ಮಾಡಿಕೊಂಡು ಮುಂದೆ ಬರಲು ಇದು ಉತ್ತಮ ವೇದಿಕೆ. ಯುವ ಕಾಂಗ್ರೆಸ್ ಮೂಲಕ ಬೆಳೆದ ಅನೇಕ ನಾಯಕರು ನಮ್ಮ ಮುಂದೆ ಇದ್ದಾರೆ. ಯಾವುದೇ ವಿಚಾರ ಇದ್ದರೂ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕು. ಯುವ ಕಾಂಗ್ರೆಸ್ ಕಾರ್ಯಕ್ರಮ ಎಂದರೆ ಇಡೀ ಬೆಂಗಳೂರು ತಿರುಗಿ ನೋಡುವಂತೆ ಇರಬೇಕು.
ಮುಂಬರುವ ಜಿಬಿಎ ಚುನಾವಣೆಗೆ ಯುವ ಕಾಂಗ್ರೆಸ್ ಮುಖಂಡರಿಗೂ ಟಿಕೆಟ್ ನೀಡುವ ಆಲೋಚನೆ ಇದೆ. ಅತ್ಯುತ್ತಮವಾಗಿ ಸಂಘಟನೆ ಮಾಡಿ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿಕೊಳ್ಳಿ. ಇಂತಹ ಹೋರಾಟದಲ್ಲಿ ಭಾಗಿಯಾಗಿ, ಸಂಘಟನೆ ಮಾಡಬೇಕು. ಹೋರಾಟಕ್ಕೆ ಯುವ ಕಾಂಗ್ರೆಸ್ ವಿದ್ಯಾರ್ಥಿ ಕಾಂಗ್ರೆಸ್ ಕೈ ಜೋಡಿಸಿದರೆ ಮಾತ್ರ ಯಶಸ್ವಿಯಾಗುತ್ತದೆ ಎನ್ನುವಂತೆ ಮಾಡಬೇಕು.
ಮತ ಕಳ್ಳತನ ವಿರುದ್ಧ ನಡೆಸಲಾದ ಸಹಿ ಸಂಗ್ರಹ ಅಭಿಯಾನದಲ್ಲಿ ರಾಜ್ಯದಲ್ಲಿ 1.30 ಕೋಟಿ ಸಹಿ ಸಂಗ್ರಹ ಮಾಡಿದ್ದು, ನಮ್ಮ ರಾಜ್ಯ ಮೊದಲ ಸ್ಥಾನದಲ್ಲಿದೆ. ಈ ಪೈಕಿ ನಮ್ಮ ರಾಜ್ಯದ ಯುವ ಕಾಂಗ್ರೆಸ್ 10 ಲಕ್ಷ ಸಹಿ ಸಂಗ್ರಹಿಸಿದ್ದು, ಇನ್ನೂ 5 ಲಕ್ಷ ಸಹಿ ಸಂಗ್ರಹಿಸುವುದಾಗಿ ಹೇಳಿದ್ದಾರೆ. ಬಿಜೆಪಿ ಬಿಹಾರ ಗೆದ್ದಿರಬಹುದು. ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರದಲ್ಲಿ ಮಾಧ್ಯಮ ಸೇರಿದಂತೆ ಎಲ್ಲರ ಊಹೆಗೂ ಮೀರಿ ಫಲಿತಾಂಶ ಬಂದಿದೆ. ಇದು ಹೇಗೆ ಸಾಧ್ಯ? ಆಡಳಿತ ಪಕ್ಷ ಚುನಾವಣೆ ಸಮಯದಲ್ಲಿ 1.20 ಕೋಟಿ ಮಹಿಳೆಯರಿಗೆ ತಲಾ 10 ಸಾವಿರ ರೂಪಾಯಿ ನೀಡಿದರೆ ಅವರು ಯಾರಿಗೆ ಮತ ಹಾಕುತ್ತಾರೆ. ಈ ಬಾರಿ ಚುನಾವಣೆಯಲ್ಲಿ 71% ಮಹಿಳೆಯರು ಮತದಾನ ಮಾಡಿದ್ದು, ಪುರುಷರು 62% ಮತದಾನ ಮಾಡಿದ್ದಾರೆ.
ಬಿಜೆಪಿಯವರು ಚುನಾವಣಾ ಆಯೋಗವನ್ನು ಹೈಜಾಕ್ ಮಾಡಿ ಚುನಾವಣೆ ಗೆಲ್ಲುತ್ತಿದ್ದಾರೆ. ಆಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡಿ, ಅಂಬೇಡ್ಕರ್ ಅವರ ಸಂವಿಧಾನಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ.
ಯುವ ಕಾಂಗ್ರೆಸ್ ಮುಖಂಡರು ನಾಯಕರಾಗಿ ಬೆಳೆಯಬೇಕಾದರೆ, ಚೇಳಾಗಿರಿ ಮಾಡಿ ಬರಬೇಡಿ. ಸ್ವಾಭಿಮಾನದ ಮೂಲಕ ಹೋರಾಟ ಮಾಡಿ ಮುಂದೆ ಬನ್ನಿ. ಆಗ ಮಾತ್ರ ನೀವು ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯ. ಸಮಾಜ ಯಾರ ಅಪ್ಪನ ಮನೆಯದ್ದಲ್ಲ. ಎಲ್ಲರಿಗೂ ಸೇರಿದೆ. ಯಾರು ಧೈರ್ಯವಾಗಿ ಮುಂದೆ ಬಂದು ನಿಲ್ಲುತ್ತಾರೋ ಅವರು ನಾಯಕರಾಗಿ ಬೆಳೆಯುತ್ತಾರೆ.
ಕಾಂಗ್ರೆಸ್ ಪಕ್ಷದ ಮತ ಕಲ್ಳತನ ಸುಳ್ಳು ಮಾಡಲು ಬಿಹಾರದಲ್ಲಿ ಈ ರೀತಿ ಫಲಿತಾಂಶ ಬರುವಂತೆ ಮಾಡಿದ್ದಾರೆ. ಇದು ಹೆಚ್ಚು ದಿನ ನಡೆಯುವುದಿಲ್ಲ. ಕರ್ನಾಟಕದಲ್ಲಂತೂ ಸಾಧ್ಯವೇ ಇಲ್ಲ. ಬಿಜೆಪಿಯಲ್ಲಿ ನಾಯಕರಿಲ್ಲ, ಜೆಡಿಎಸ್ ಪಕ್ಷ ಅಧೋಗತಿಗೆ ತಲುಪಿದೆ. ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರ ಸಮನಾಗಿ ಯಾರಾದರೂ ನಾಯಕರು ಬಿಜೆಪಿಯಲ್ಲಿ ಇದ್ದಾರಾ? ಈ ಮೈತ್ರಿಯಿಂದ ಯಶಸ್ಸು ಸಾಧಿಸುತ್ತೇವೆ ಎಂದು ಬಿಜೆಪಿ ನಾಯಕರು ನಂಬಿದ್ದರೆ ಮಣ್ಣು ಮುಕ್ಕುವುದರಲ್ಲಿ ಅನುಮಾನವಿಲ್ಲ.

*ಸಚಿವ ಸಂತೋಷ್ ಲಾಡ್:* ಮಹಾರಾಷ್ಟ್ರದಲ್ಲಿ ಕೇವಲ 6 ತಿಂಗಳಲ್ಲಿ 45 ಲಕ್ಷ ಮತಗಳನ್ನು ಹೆಚ್ಚಿಸುತ್ತಾರೆ. ಬಿಹಾರದಲ್ಲಿ ಬೇರೆ ರೀತಿ ಮಾಡಿ, 65 ಲಕ್ಷ ಮತ ತೆಗೆದುಹಾಕುತ್ತಾರೆ. ನಂತರ 20 ಲಕ್ಷ ಮತ ಸೇರಿಸುತ್ತಾರೆ. ಆಮೂಲಕ ಬಿಹಾರ ಚುನಾವಣೆಯಲ್ಲಿ ಸುಮಾರು 80 ಲಕ್ಷ ಮತಗಳ ಬದಲಾವಣೆ ಮಾಡಲಾಗಿದೆ. ಬಿಜೆಪಿ 101 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು 91% ಸ್ಟ್ರೀಕ್ ರೇಟ್ ಹೊಂದಿದೆ. ಜೆಡಿಯು 101 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 89% ಸ್ಟ್ರೀಕ್ ರೇಟ್ ಹೊಂದಿದೆ. ಭಾರತದ ತಿಹಾಸದಲ್ಲಿ 25 ವರ್ಷಗಳ ಆಡಳಿತ ಮಾಡಿರುವ ಸರ್ಕಾರಕ್ಕೆ ಇಷ್ಟು ದೊಡ್ಡ ಮಟ್ಟದ ಫಲಿತಾಂಶ ಬರಲು ಹೇಗೆ ಸಾಧ್ಯ.
ಮೋದಿ ಅವರು ಬಿಹಾರದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿ ಮತ ಕೇಳಿಲ್ಲ. ಗುಸ್ ಬೇಟಿಯಾ, ರೋಹಿಂಗ್ಯಾ, ಬಾಂಗ್ಲಾದೇಶಿ ವಿಚಾರ ಪ್ರಸ್ತಾಪಿಸಿ ಮತ ಕೇಳುತ್ತಿದ್ದಾರೆ.

*ಹೆಚ್ ಎಸ್ ಮಂಜುನಾಥ್ ಗೌಡ:* ನಾವು ಬಿಹಾರದಲ್ಲಿ ಮತ ಕಳ್ಳತನದ ಷಡ್ಯಂತ್ರದಿಂದ ಸೋತಿದ್ದೇವೆ, ನಾವಿನ್ನೂ ಸತ್ತಿಲ್ಲ. ನಾವು ನಮ್ಮ ಹೋರಾಟ ಮುಂದುವರಿಸಿ ಮತ್ತೆ ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದೇ ತರುತ್ತೇವೆ. ಮೋದಿ ಅವರು ಚುನಾವಣೆ ಗೆದ್ದ ಬಳಿಕ ಸಂವಿಧಾನಕ್ಕೆ ನಮಿಸಿದರು. ಗೋಡ್ಸೆ ಗಾಂಧಿ ಕಾಲಿಗೆ ಬಿದ್ದು, ಗುಂಡಿಕ್ಕಿ ಕೊಂದಂತೆ ಈಗ ಮೋದಿ ಹಾಗೂ ಅಮಿತ್ ಶಾ ಅವರು ಸಂವಿಧಾನ ಹತ್ಯೆ ಮಾಡಲು ಮುಂದಾಗಿದ್ದಾರೆ. ಯಾವುದೇ ರಾಜ್ಯದ ಚುನಾವಮೆ ನಡೆದರೂ ಬಿಜೆಪಿಯವರು ಆರೋಗ್ಯ, ಶಿಕ್ಷಣ, ಆರ್ಥಿಕ ಪ್ರಗತಿ ಬಗ್ಗೆ ಚರ್ಚೆ ಮಾಡುವುದಿಲ್ಲ. ಜಾತಿ, ಧರ್ಮದ ಮಧ್ಯೆ ಬೆಂಕಿ ಹಚ್ಚಿ ಚುನಾವಮೆ ಮಾಡುತ್ತಿದ್ದಾರೆ.


ಮಹದೇವಪುರದಲ್ಲಿ 1 ಲಕ್ಷ ಮತ ಕಳ್ಳತನ ಮಾಡಿ ಬೆಂಗಳೂರು ಕೇಂದ್ರ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದಾರೆ. ಬಿಜೆಪಿಯವರು ಮತ ಕಳ್ಳತನ ಮಾಡಿದ್ದರೂ ನಾವು 136 ಸ್ಥಾನ ಗೆದ್ದಿದ್ದೇವೆ. ಈ ಷಡ್ಯಂತ್ರ ಮಾಡದಿದ್ದರೆ, ಕಾಂಗ್ರೆಸ್ ರಾಜ್ಯದಲ್ಲಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತಿತ್ತು. ಅವರು ಎಂದಿಗೂ ನೇರವಾಗಿ ಹೋರಾಟ ಮಾಡಿಲ್ಲ.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಹೇಳುವ ಬಿಜೆಪಿ, ಬಿಹಾರದಲ್ಲಿ ಚುನಾವಣೆಗೂ ಮುನ್ನ ಮಹಿಳೆಯರಿಗೆ 10 ಸಾವಿರ ಹಣ ಹಾಕಿದ್ದಾರೆ. ನಮ್ಮ ಯೋಜನೆಗಳನ್ನು ಕಾಪಿ ಮಾಡಿ ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಚುನಾವಣೆ ಮಾಡಿದ್ದಾರೆ. ಅಲ್ಲಿ ಅವರ ಯೋಜನೆಗಳು ವಿಫಲವಾಗಿದೆ. ಕರ್ನಾಟಕದಲ್ಲಿ ನಮ್ಮ ಕಾಂಗ್ರೆಸ್ ಜನರಿಗೆ ಸರಿಯಾಗಿ ಗ್ಯಾರಂಟಿ ಯೋಜನೆ ತಲುಪಿಸಿದೆ.
ಬಿಜೆಪಿ ಮತಗಳ್ಳತನ ಜೊತೆಗೆ ಚುನಾವಣಾ ಆಯೋಗದ ಆಯುಕ್ತರು ಬಿಜೆಪಿ ಏಜೆಂಟರಂತೆ ಕೆಲಸ ಮಾಡಿದ್ದಾರೆ. ಯಾವಾಗ ಚುನಾಮೆ ಮಾಡಬೇಕು, ಯಾವ ಬೂತ್ ಗೆ ಯಾವ ಅಧಿಕಾರಿ ಹಾಕಬೇಕು ಎಂಬುದರವರೆಗೆ ಚುನಾವಣಾ ಆಯೋಗ ಬಿಜೆಪಿ ಅಣತಿಯಂತೆ ಕೆಲಸ ಮಾಡಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಚುನಾವಣೆ ಮಾಡಿಕೊಂಡು ಬಂದಿದೆ.
ರಾಜ್ಯದಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಇವಿಎಂ ಬದಲು ಮತಪತ್ರ ಬಳಸಲು ಮುಂದಾಗಿದ್ದು, ಈ ತೀರ್ಮಾನವನ್ನು ಯುವ ಕಾಂಗ್ರೆಸ್ ಸ್ವಾಗತಿಸುತ್ತದೆ.
ಅಮಿತ್ ಶಾ ಅವರು ಪುಲ್ವಾಮಾ, ಪೆಹಲ್ಗಾಮ್ ದಾಳಿಯಾದಾಗ, ದೆಹಲಿ ಸ್ಫೋಟವಾದಾಗ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಯುಪಿಎ ಸರ್ಕಾರ ಇದ್ದಾಗ ಮುಂಬೈ ದಾಲಿ ನಂತರ ಪ್ರಧಾನಮಂತ್ರಿಗಳು ಅಲ್ಲಿಗೆ ಹೋಗಿ ಮಾಧ್ಯಮಗೋಷ್ಠಿ ನಡೆಸಿ, ಆಗಿನ ಸಚಿವರ ರಾಜೀನಾಮೆ ಪಡೆದಿದ್ದರು. ಆದರೆ ಈಗ ಅಮಿತ್ ಶಾ ಅವರು ಹೊಣೆ ಹೋರುತ್ತಿಲ್ಲ.
ರಾಜ್ಯದಲ್ಲಿ ನಡೆದ ಸಹಿ ಸಂಗ್ರಹ ಅಭಿಯಾನದಲ್ಲಿ ಕಾರ್ಯಾಧ್ಯಕ್ಷರಾದ ಜಿ.ಸಿ ಚಂದ್ರಶೇಖರ್ ಅವರ ಉತ್ತೇಜನದ ಮೂಲಕ ಯುವ ಕಾಂಗ್ರೆಸ್ 10 ಲಕ್ಷ ಸಹಿ ಸಂಗ್ರಹಿಸಿದ್ದು, ಇನ್ನು ಐದು ಲಕ್ಷ ಸಹಿ ಸಂಗ್ರಹ ಮಾಡಲು ಸೂಚಿಸಿದ್ದಾರೆ. ಅದನ್ನು ನಾವು ಮಾಡುತ್ತೇವೆ.

*ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್:* ನಮ್ಮ ಹೋರಾಟ ಸಂವಿಧಾನ ಉಳಿಸಲು ಎಂದು ಸ್ಪಷವಾಗಿದೆ. ಸಂವಿಧಾನ ದೇಶದ ಪ್ರತಿ ನಾಗರೀಕರಿಗೆ ಮತದಾನ ಮಾಡುವ ಅಧಿಕಾರ ನೀಡಿದೆ. ಆದರೆ ದು ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಹಳ ಚಿಂತಾಜನಕ ಸ್ಥಿತಿಗೆ ತಲುಪಿದೆ. ಬಿಜೆಪಿ ಮತ ಕಳ್ಳತನದ ಆಟ ಆರಂಭಿಸಿದೆ. ಇವಿಎಂ, ಮತಪಟ್ಟಿಯಲ್ಲಿ ಅಕ್ರಮ ಮಾಡುವ ಮೂಲಕ ಬಿಜೆಪಿ ಮತ ಕಳ್ಳತನ ಮಾಡುತ್ತಿದೆ.
ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲ ಗೊಳಿಸಿ ದೇಶವನ್ನು ದುರ್ಬಲಗೊಳಿಸಲಾಗುತ್ತಿದೆ. ಸರ್ಕಾರವನ್ನು ಟೀಕಿಸುವ ವಿರೋಧ ಪಕ್ಷಗಳ ನಾಯಕರ ಧ್ವನಿ ಹತ್ತಿಕ್ಕಲಾಗುತ್ತಿದೆ. ಸಿಬಿಐ, ಇಡಿ ಮೂಲಕ ವಿರೋಧ ಪಕ್ಷಗಳ ನಾಯಕರ ಮೇಲೆ ದಾಳಿ ಮಾಡಲಾಗುತ್ತದೆ. ಆದರೆ ಈ ಸಂಸ್ಥೆಗಳು ಬಿಜೆಪಿ ನಾಯಕರ ಮೇಲೆ ದಾಳಿ ಮಾಡುವುದಿಲ್ಲ. ಇದೆಲ್ಲದರ ನಡುವೆ ರಾಹುಲ್ ಗಾಂಧಿ ಹಾಗೂ ಅವರ ತಂಡ ಹೆದರದೇ ಹೋರಾಟ ಮಾಡುತ್ತಿರುವುದನ್ನು ಕಂಡು ಮೋದಿ ಅವರು ಈ ಮತಕಳ್ಳತನ ಆರಂಭಿಸಿದ್ದಾರೆ.
ಚುನಾವಣಾ ಆಯೋಗದ ಆಯುಕ್ತರ ನೇಮಕ ಪ್ರಕ್ರಿಯೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಅವರನ್ನು ಹೊರಗಿಟ್ಟರು. ಮೋದಿ ಅವರಿಗೆ ಚುನಾವಣಾ ಆಯೋಗದ ಆಯುಕ್ತರಿಗಿಂತ ತಮ್ಮ ಸೂಚನೆಯಂತೆ ಕೆಲಸ ಮಾಡುವ ಪಿಎ ಬೇಕಾಗಿದ್ದಾರೆ. ಹೀಗಾಗಿ ಈ ರೀತಿ ಮಾಡಿದ್ದಾರೆ. ಅವರು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇದು ಹೆಚ್ಚು ದಿನ ನಡೆಯಲು ನಾವು ಬಿಡುವುದಿಲ್ಲ. ನಾವೆಲ್ಲರೂ ರಾಹುಲ್ ಗಾಂಧಿ ಅವರ ಜೊತೆ ನಿಲ್ಲುತ್ತೇವೆ. ಚುನಾವಣಾ ಆಯೋಗ ಬಿಜೆಪಿ ಪ್ರೈವೆಟ್ ಲಿಮಿಟೆಡ್ ನಂತೆ ಕೆಲಸ ಮಾಡುತ್ತಿದೆ. ಚುನಾವಣಾ ಆಯೋಗ ಚುನಾವಣೆಯನ್ನು ನಿಷ್ಪಕ್ಷಪಾತವಾಗಿ ನಡೆಸುವುದಕ್ಕಿಂತ ಮೋದಿ ಅವರ ಅಧಿಕಾರ ಕುರ್ಚಿ ಉಳಿಸಲು ಕೆಲಸ ಮಾಡುತ್ತಿದೆ.
ಈ ಹಿಂದೆ ಚುನಾವಣೆಗಳು ಪ್ರಜಾಪ್ರಭುತ್ವದ ಮಹೋತ್ಸವದಂತೆ ನಡೆಯುತ್ತಿತ್ತು. ಆದರೆ ಈಗ ಪ್ರಜಾಪ್ರಭುತ್ವ ನಾಶ ಮಾಡಲು ಚುನಾವಣೆ ನಡೆಯುತ್ತಿದೆ. ದೇಶದ ಯುವಕರು ನಿರುದ್ಯೋಗಿಗಳಾಗಿದ್ದಾರೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಮಹಿಳೆಯರ ಮೇಲಿನ ಅಪರಾಧ ಹೆಚ್ಚುತ್ತಿವೆ. ಆದರೂ ಬಿಜೆಪಿ ಹೇಗೆ ಚುನಾವಣೆಗಳಲ್ಲಿ ಪದೇ ಪದೆ ಗೆದ್ದು ಅಧಿಕಾರಕ್ಕೆ ಬರುತ್ತಿದೆ. ಇಂತಹ ಭ್ರಷ್ಟ ಚುನಾವಣೆ ವ್ಯವಸ್ಥೆ ವಿರುದ್ಧ ನಾವು ಧ್ವನಿ ಎತ್ತುತ್ತೇವೆ. ಹೋರಾಟ ಮಾಡುತ್ತೇವೆ.
ಈ ಹೋರಾಟದಲ್ಲಿ ನಾವು ಮೊದಲ ಬಾರಿಗೆ ಗೆಲುವು ಸಾಧಿಸದಿರಬಹುದು. ನಮ್ಮ ಪೂರ್ವಜರು ಬ್ರಿಟೀಷರ ವಿರುದ್ಧ ಇಂತಹುದೇ ಹೋರಾಟ ಮಾಡಿದ್ದರು. ಇಂದು ನಾವು ಆ ಹೋರಾಟ ಮಾಡುತ್ತಿದ್ದೇವೆ. ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ದೇಶ ರಕ್ಷಣೆಗಾಗಿ ಸ್ವಾತಂತ್ರ್ಯ ಹೋರಾಟದಂತೆ ನಾವು ಹೋರಾಟ ಮಾಡಬೇಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಬೇಕಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು