11:56 AM Saturday25 - January 2025
ಬ್ರೇಕಿಂಗ್ ನ್ಯೂಸ್
ಮನೆ ಸೀಝ್ ಮಾಡಿ ಬಾಣಂತಿ- ಮಗುವನ್ನು ಹೊರಹಾಕಿದ ಖಾಸಗಿ ಫೈನಾನ್ಸ್: ಬೀಗ ತೆರವುಗೊಳಿಸಿದ… ಗೃಹಲಕ್ಷ್ಮೀ ಮೂಲಕ ಮಹಿಳೆಯರ ಸಬಲೀಕರಣ, ಮೈಕ್ರೋ ಫೈನಾನ್ಸ್ ಮೂಲಕ ಜೀವಹರಣ: ಕೇಂದ್ರ ಸಚಿವ… 7-8 ವರ್ಷ ಕಳೆದರೂ ಹಸ್ತಾಂತರವಾಗದ ಶಾಲಾ ಕೊಠಡಿ: ಮಾಹಿತಿ ಇಲ್ಲವೆಂದ ಬಿಇಒ; ಶಿಕ್ಷಣ… ಯುನಿಸೆಕ್ಸ್ ಸೆಲೂನ್ ದಾಳಿಕೋರರ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದ್ದೇನೆ: ಉಡುಪಿಯಲ್ಲಿ ಗೃಹ ಸಚಿವ… ಏಪ್ರಿಲ್ ಅಂತ್ಯದೊಳಗೆ 3 ಸಾವಿರ ಲೈನ್ ಮೆನ್ ಗಳ ನೇಮಕ: ಬೀದರ್ ನಲ್ಲಿ… ವರ್ಷದಲ್ಲಿ 2 ಲಕ್ಷ ಅಕ್ರಮ ಪಂಪ್ ಸೆಟ್ ಗಳು ಸಕ್ರಮ: ಇಂಧನ ಸಚಿವ… ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ: ಜಿಲ್ಲೆಯ ಶಾಸಕರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಭಿನಂದನೆ ವಿಜಯಪುರ: ಫೇಕ್ ಡಾಕ್ಟರ್ ಇದ್ದಾರೆ ಎಚ್ಚರ; ನಾಲತವಾಡದಲ್ಲೂ ನಕಲಿ ವೈದ್ಯರುಗಳ ಹಾವಳಿ ಸ್ಥಳ ಮಹಜರು: ಕೋಟೆಕಾರು ದರೋಡೆ ಪ್ರಕರಣದ ಆರೋಪಿ ಪರಾರಿಗೆ ಯತ್ನ; ಪೊಲೀಸರ ಗುಂಡೇಟು,… ಕೋಟೆಕಾರು ದರೋಡೆ ಪ್ರಕರಣ: ಮಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ; 3 ಮಂದಿ ಆರೋಪಿಗಳ…

ಇತ್ತೀಚಿನ ಸುದ್ದಿ

ಬೆಂಗಳೂರು ಅರಮನೆ ಮೈದಾನ ಜಾಗ ಬಳಕೆ ಮತ್ತು ನಿಯಂತ್ರಣಕ್ಕೆ ಸುಗ್ರಿವಾಜ್ಞೆ: ರಾಜ್ಯ ಸರ್ಕಾರ ತೀರ್ಮಾನ

24/01/2025, 22:56

ಬೆಂಗಳೂರು(reporterkarnataka.com): ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996ಕ್ಕೆ ಸಂಬಂಧಪಟ್ಟ ಸಿವಿಲ್ ಅಪೀಲುಗಳು ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿಯಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಹಕ್ಕುಗಳನ್ನು (ಟಿಡಿಆರ್) ವಿತರಿಸಿದ್ದಲ್ಲಿ ರಾಜ್ಯದ ಹಿತಾಸಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಅದಕ್ಕಾಗಿ ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಸಿಕೊಳ್ಳಲು ಮತ್ತು ನಿಯಂತ್ರಿಸಲು ಸುಗ್ರಿವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ಹೇಳಿದರು.
ಬೆಂಗಳೂರು ಅರಮನೆ ಮೈದಾನದ ಒಟ್ಟು 472 ಎಕರೆ 16 ಗುಂಟೆ ಜಾಗಕ್ಕೆ ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ 1996ರ ಕಂಡಿಕೆ 8 ಮತ್ತು 9ರಲ್ಲಿ ರೂ.11.00 ಕೋಟಿಗಳನ್ನು ನಿಗದಿಗೊಳಿಸಲಾಗಿತ್ತು. ಸದರಿ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯವು ಎತ್ತಿಹಿಡಿದಿರುತ್ತದೆ. 1996ರ ಈ ಕಾಯ್ದೆಗೆ ಮಾನ್ಯ ಸರ್ವೋಚ್ಛ ನ್ಯಾಯಾಲಯದಿಂದ ಯಾವುದೇ ತಡೆಯಾಜ್ಞೆ ಇಲ್ಲ. ಆದರೆ, ದಿನಾಂಕ: 10.12.2024ರ ಮಾನ್ಯ ಸರ್ವೋಚ್ಛ ನ್ಯಾಯಾಲಯದ ತೀರ್ಪಿನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಮತ್ತುಇತರೆ ಪ್ರಕರಣಗಳಲ್ಲಿ ಕರ್ನಾಟಕ ಸ್ಟಾಂಪ್ ಕಾಯ್ದೆಯ ಸೆಕ್ಷನ್ 45ಬಿ ಗೆ ಅನುಗುಣವಾಗಿ ಬೆಂಗಳೂರು ಅರಮನೆ ಮೈದಾನಕ್ಕೆ ಹೊಂದಿಕೊಂಡಂತಹ ಪ್ರದೇಶಗಳಿಗೆ ಚಾಲ್ತಿಯಲ್ಲಿರುವ ಮಾರ್ಗಸೂಚಿ ಮೌಲ್ಯಕ್ಕೆ ಅನುಗುಣವಾಗಿ ರಸ್ತೆ ಅಗಲೀಕರಣ ಉದ್ದೇಶಕ್ಕಾಗಿ ಬೆಂಗಳೂರು ಅರಮನೆ ಜಾಗವನ್ನು ಮೌಲ್ಯೀಕರಿಸಿ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳನ್ನು (ಟಿ.ಡಿ.ಆರ್) ನೀಡುವಂತೆ ನಿರ್ದೇಶಿಸಿದೆ.
ರಾಜ್ಯದಲ್ಲಿ ಕೇವಲ 2 ಕಿ.ಮೀ ರಸ್ತೆ ಅಭಿವೃದ್ಧಿಗೆ ರೂ.3014.00 ಕೋಟಿ ಅಂದರೆ ಪ್ರತಿ ಎಕರೆಗೆ ರೂ.200.00 ಕೋಟಿ ನೀಡಿದರೆ ಆರ್ಥಿಕ ಪರಿಸ್ಥಿತಿ ಗಂಡಾಂತರ ಉಂಟಾಗಿ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣವಾಗದೇ ಪ್ರಗತಿ ವಿರೋಧವಾದ ಕ್ರಮವಾಗುತ್ತದೆ. 1996ರ ಕಾಯ್ದೆಗೆ ಪೂರಕವಾದ ಈ ಸುಗ್ರಿವಾಜ್ಞೆಯನ್ನು ರಾಜ್ಯಪಾಲರಿಗೆ ಮಂಡಿಸಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಸಚಿವರು ತಿಳಿಸಿದರು.
ಸುಗ್ರಿವಾಜ್ಞೆ ಜಾರಿ ಮಾಡುವುದರಿಂದ ಅಗತ್ಯವಿರುವಷ್ಟು ಜಾಗವನ್ನು ಬಳಸಿಕೊಳ್ಳಲು ಮತ್ತು ಉದ್ದೇಶಿತ ಪ್ರಸ್ತಾವನೆಯನ್ನು ಕೈಬಿಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ದೊರೆಯುತ್ತದೆ. ಯಾವುದೇ ನ್ಯಾಯಾಲಯದ ತೀರ್ಪು ಅಥವಾ ಸರ್ಕಾರವು ಈ ಮೊದಲು ಕೈಗೊಂಡ ಯಾವುದೇ ತೀರ್ಮಾನದಂತೆ ಯಾವುದೇ ಮೂಲಸೌಕರ್ಯ ಯೋಜನೆಯಿಂದ ಭಾಗಶ: ಅಥವಾ ಸಂಪೂರ್ಣವಾಗಿ ಹಿಂದೆ ಸರಿಯಲು ಈ ಸುಗ್ರಿವಾಜ್ಞೆ ಅವಕಾಶ ಕಲ್ಪಿಸುತ್ತದೆ ಎಂದು ಸಚಿವರು ವಿವರಿಸಿದರು.
2011ರಲ್ಲಿ ಬೆಂಗಳೂರು ಅರಮನೆ ಮೈದಾನಕ್ಕೆ ಸೇರಿದ ಆಸ್ತಿಯ 15 ಎಕರೆ 39 ಗುಂಟೆ ಜಾಗವನ್ನು ಬಳಸಿಕೊಂಡು ಬೆಂಗಳೂರು ಅರಮನೆ ಮೈದಾನಕ್ಕೆ ಹೊಂದಿಕೊಂಡಿರುವ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಯನ್ನು ಅಗಲೀಕರಣಗೊಳಿಸುವ ಸಂಬಂಧ ಮಧ್ಯಂತರ ಅರ್ಜಿ ದಾಖಲಿಸಿದಾಗ ಸದರಿ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯವು 2014 ರಲ್ಲಿ ಟಿ.ಡಿ.ಆರ್ ನಿಯಮಗಳ ಪ್ರಕಾರ ಟಿ.ಡಿ.ಆರ್ ಷರತ್ತಿಗೊಳಪಡಿಸಿ, ಜಾಗವನ್ನು ಬಳಸಿಕೊಳ್ಳಲು ಅನುಮತಿ ನೀಡಿರುತ್ತದೆ.
ಮಾನ್ಯ ಸರ್ವೋಚ್ಛ ನ್ಯಾಯಾಲಯವು ನಿಗದಿಪಡಿಸಿರುವ ಭೂಸ್ವಾಧಿನ ಮೊತ್ತವು ರಾಜ್ಯದ ಮೇಲೆ ಹೆಚ್ಚಿನ ಆರ್ಥಿಕ ಹೊರೆಯಾಗಲಿದ್ದು, ಆರ್ಥಿಕ ಶಿಸ್ತಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆರ್ಥಿಕ ಶಿಸ್ತಿನ ತತ್ವಗಳನ್ನು ಅನುಸರಿಸದೇ ಅಂತಹ ಮೂಲಸೌಕರ್ಯ ಯೋಜನೆಗಳ ಮೇಲೆ ನೀತಿ-ನಿರ್ಣಯಗಳನ್ನು ತೆಗೆದುಕೊಳ್ಳುವುದು ಕಷ್ಟಸಾಧ್ಯ. ನೀತಿ-ನಿಯಮಕ ವಿಷಯಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ನಿರ್ಧರಿಸುವಾಗ ರಾಜ್ಯದ ಆರ್ಥಿಕ ನೀತಿಯನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಆರ್ಥಿಕವಾಗಿ ಕಾರ್ಯಸಾಧುವಲ್ಲದ ಯಾವುದೇ ಯೋಜನೆಯು ಸಾರ್ವಜನಿಕ ಹಿತಾಸಕ್ತಿಗೆ ಮತ್ತು ಸಾರ್ವಜನಿಕ ನೀತಿಗೆ ವಿರುದ್ಧವಾಗಿರುತ್ತದೆ.
ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ಸಿವಿಲ್ ಅಪಿಲ್ನಲ್ಲಿ ರಾಜ್ಯದ ಪರವಾಗಿ ಆದೇಶವಾದಲ್ಲಿ ಮಾರಾಟ ಅಥವಾ ಇನ್ನಾವುದೇ ರೀತಿಯಲ್ಲಿ ಬಳಕೆಯಾದ ಟಿ.ಡಿ.ಆರ್ ಗಳನ್ನು ಹಿಂಪಡೆಯಲಾಗಲೀ ಅಥವಾ ಮರುಪಡೆಯಲಾಗಲೀ ಅಸಾಧ್ಯವಾಗುವುದರಿಂದ ಸುಗ್ರಿವಾಜ್ಞೆಯ ಮೂಲಕ ಅಧಿಕಾರ ಪಡೆಯಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.

•ಕರ್ನಾಟಕ ಸರ್ಕಾರ ಕಾರ್ಯಕಲಾಪಗಳ ನಿರ್ವಹಣೆ ನಿಯಮಗಳಿಗೆ ತಿದ್ದುಪಡಿ:
“ಅಧ್ಯಾದೇಶಗಳು ಒಳಗೊಂಡಂತೆ ಶಾಸನಗಳ ಪ್ರಸ್ತಾವಗಳು, ಆದರೆ ಪೂರ್ಣವಾಗಿ ಔಪಚಾರಿಕ ಸ್ವರೂಪದ ಅಥವಾ ಅತೀ ಕಡಿಮೆ ಪ್ರಾಮುಖ್ಯತೆ ಹೊಂದಿರುವ ವಿಷಯಗಳೆಂದು ಮುಖ್ಯಮಂತ್ರಿಯವರು ಅಭಿಪ್ರಾಯ ಪಡುವ ಪ್ರಸ್ತಾವಗಳನ್ನು ಹೊರತುಪಡಿಸಿ” ಎಂಬ ನಿಯಮವನ್ನು ತಿದ್ದುಪಡಿ ಮಾಡಿ ತುರ್ತು ಸಂದರ್ಭಗಳಲ್ಲಿ ರಾಜ್ಯ ಸಚಿವ ಸಂಪುಟದ ಪೂರ್ವಾನುಮೋದನೆ ಇಲ್ಲದೇ ರಾಜ್ಯ ವಿಧಾನ ಮಂಡಲದಲ್ಲಿ ವಿಧೇಯಕಗಳನ್ನು ಮಂಡಿಸಲು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡುತ್ತದೆ. ಇಂತಹ ಪ್ರಸ್ತಾವನೆಗಳಿಗೆ ಘಟನೋತ್ತರ ಮಂಜೂರಾತಿ ಪಡೆಯಲು ಈ ತಿದ್ದುಪಡಿಯಲ್ಲಿ ಅವಕಾಶ ನೀಡುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು