11:11 PM Friday6 - February 2026
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್‌ನ ಲೂಟಿ ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ರಾಜ್ಯ ಆಹಾರ ಆಯೋಗದ ಅಧ್ಯಕ್ಷರ ತಂಡದಿಂದ ವಿವಿಧೆಡೆ ದಿಢೀರ್ ಭೇಟಿ: ಪರಿಶೀಲನೆ *ಕರಾವಳಿವರೆಗೆ ವಂದೇ ಭಾರತ್ ವಿಸ್ತರಿಸುವಂತೆ ರೈಲ್ವೆ ಸಚಿವರಿಗೆ ಸಂಸದ ಶ್ರೀನಿವಾಸ ಪೂಜಾರಿ ಮನವಿ* ಅನೈತಿಕ ಸಂಬಂಧ ಕೊಲೆಗೆ ಕಾರಣ?: ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7… ಎಸಿ ಕೋರ್ಟ್ ಕೇಸ್: ಎರಡೂವರೆ ವರ್ಷದಲ್ಲಿ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದ್ದೇವೆ: ಸಚಿವ ಕೃಷ್ಣ ಬೈರೇಗೌಡರು… ತೀರ್ಥಹಳ್ಳಿ ಸಮೀಪದ ಮೇಗರವಳ್ಳಿಯಲ್ಲಿ ಭೀಕರ ಅಪಘಾತ: ಗಾಯಾಳು ಮಹಿಳೆ ಸಾವು Madikeri | ಕುಶಾಲನಗರ ಬಳಿ ಬೈಕ್ ಡಿಕ್ಕಿ: ಪಾದಚಾರಿ ಯುವಕ ದಾರುಣ ಸಾವು ಪೊಲೀಸರಿಗೆ ತಲೆನೋವಾದ ಕೇರಳದ ‘ಮಲ್ಲು’ ಗ್ಯಾಂಗ್: ಚಿನ್ನದ ಉದ್ಯಮಿಗಳೇ ಇವರ ಟಾರ್ಗೆಟ್ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ಕೇಂದ್ರ ವಿತ್ತ ಸಚಿವೆಗೆ ಕೇರಳ ಸಿಎಂ… ವರನಿಗೆ ಚಾಕು ಇರಿದ ಕೇಸ್‌ಗೆ ಬಿಗ್ ಟ್ವಿಸ್ಟ್ : ಸ್ಕೆಚ್ ಹಾಕಿದ್ದು ಅವರಲ್ಲ,…

ಇತ್ತೀಚಿನ ಸುದ್ದಿ

ಬೆಳಗಾವಿ: ಉಕ್ಕಿ ಹರಿಯುತ್ತಿದೆ ನದಿಗಳು; ಹೆದ್ದಾರಿ ಸೇತುವೆ ಜಲಾವೃತ, ಪ್ರಯಾಣಿಕರ ಪರದಾಟ

23/07/2021, 22:27

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬೆಳಗಾವಿಯ ನದಿಗಳೆಲ್ಲ ಉಕ್ಕಿಹರಿಯುತ್ತಿವೆ. ಹಳ್ಳ ಕೊಳ್ಳ ತುಂಬಿದ್ದು, ಒಂಟಮುರಿ‌ ಘಾಟಿ ಬಳಿ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಜಲಾವೃತಗೊಂಡಿದೆ.

ಪ್ರವಾಹದಿಂದ ಜನರು ದಿಕ್ಕೆಟ್ಟು ಹೋಗಿದ್ದಾರೆ. ನದಿ ಮತ್ತು ರಸ್ತೆಯ ವ್ಯತ್ಯಾಸ ಕಾಣುತ್ತಿಲ್ಲ. ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರು ನದಿಯಲ್ಲಿ ಪ್ರವಾಹ ಇಳಿಯಲು ಕಾಯುತ್ತಿದ್ದಾರೆ.

ಪ್ರಯಾಣಿಕರಿಗೆ ದಿಕ್ಕು ತೋಚದಂತೆ  ರಸ್ತೆ ಮೇಲೆ ನೀರು ಹರಿದು ಬಂದು ಇದು ನದಿನಾ ಅಥವಾ ರಸ್ತೆ ನಾ ಅಂತಾ ತಿಳಿಯದೇ ತಮ್ಮ ತಮ್ಮ ಸಣ್ಣ ವಾಹಾನಗಳು ರಸ್ತೆ ಬದಿಗೆ ನೀಲಿಸಿ ನೀರಿನ ರಭಸ ಕಡಿಮೇ ಆಗುವ ನೀರಿಕ್ಷೆಯಲ್ಲಿ‌ ಕಾದುಕೊಳ್ಳಿತ್ತಿದ್ದಾರೆ,

ಇನ್ನೂ ಲಾರಿ ಚಾಲಕರು ಭಾರ ಹೆಚ್ಚಿರುವುದರಿಂದ ನೀರಿನ ಮೇಲೆಯೇ ಸವಾರಿ ಮಾಡುತ್ತಿದ್ದಾರೆ. ಇಲ್ಲಿ ನೀರು ಹರಿದು‌ ಹೋಗಲು ಸರಾಗ ಮಾರ್ಗ ಇಲ್ಲದ ಕಾರಣ ರಸ್ತೆ ಮೇಲೆ ನೀರು ನುಗ್ಗಿ ಪ್ರತಿ ವರ್ಷ ವು ಮಳೆಗಾಲದಲ್ಲಿ‌ ಇಂಥಹ ಸಮಸ್ಯೆ ಉಂಟಾಗುತ್ತಿದೆ. ಇದಕ್ಕೆ ಸಂಬಂಧಿಸಿದ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರರು‌ ವಾಹನ ಶುಲ್ಕ ಭರಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಆಗುವ ಸಂಭವಗಳ ಬಗ್ಗೆ ‌ಗಮನ ಹರಿಸುವುದಿಲ್ಲ. ಕೇವಲ ಹಣ ಮಾಡಲು ಮಾತ್ರ ಈ ಹೆದ್ದಾರಿ ಸೀಮಿತವಾಗಿದೆ ಅಂತಾ ಹೇಳಿದರು‌ ತಪ್ಪೆನಿಲ್ಲ. ಇನ್ನಾದರೂ ಎಚ್ಚತ್ತುಕೊಂಡು‌ ಇಂತಹ ಸಮಸ್ಯೆಗಳನ್ನು ಆಲಿಸಿ ರಸ್ತೆ ಸಂಚಾರಕ್ಕೆ ಸುಗಮಗೊಳಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು