5:38 AM Wednesday9 - September 2026
ಬ್ರೇಕಿಂಗ್ ನ್ಯೂಸ್
ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ

ಇತ್ತೀಚಿನ ಸುದ್ದಿ

ಬೆಳಗಾವಿ: ಮುಳ್ಳೂರ ಆಯಿಲ್ ಮಿಲ್ ನಲ್ಲಿ ಭಾರಿ ಅಗ್ನಿ ದುರಂತ; 20 ಲಕ್ಷ ರೂ. ಮೌಲ್ಯದ ಶೇಂಗಾ ಎಣ್ಣೆ ನಾಶ

16/03/2022, 18:30

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com 

ಜಿಲ್ಲೆಯ ರಾಮದುರ್ಗ ಪಟ್ಟಣದ ಗಾಂಧಿನಗರದ ವೆಂಕಟೇಶ್ ಟಾಕೀಸ್ ಹಿಂದುಗಡೆ ಇರುವ ಸಿದ್ದೇಶ್ವರ ಆಯಿಲ್ ಇಂಡಸ್ಟ್ರಿಸ್  ಮುಳ್ಳೂರ ಆಯಿಲ್ ಮಿಲ್ ನಲ್ಲಿ ಬುಧವಾರ  ತಡರಾತ್ರಿ ಅಗ್ನಿ ಅನಾಹುತ ಸಂಭವಿಸಿದ್ದು, ಸುಮಾರು 20 ಲಕ್ಷ ರೂ. ಮೌಲ್ಯದ ಶೇಂಗಾ ಎಣ್ಣೆ ಸುಟ್ಟುಹೋಗಿದೆ.


ತಡರಾತ್ರಿ ಸುಮಾರು 2 ಗಂಟೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಆಯಿಲ್ ಮಿಲಗೆ ಬೆಂಕಿ ಕಾಣಿಸಿಕೊಂಡಿದೆ. ಈ ಆಯಿಲ್ ಮಿಲನಲ್ಲಿ ಶೇಂಗಾ ಎಣ್ಣೆ, ಸೂರ್ಯಪಾನ ಎಸ್ ಎಫ್  ಎಣ್ಣೆ  ತಯಾರಿ ಮಾಡಲಾಗುತ್ತಿತ್ತು. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಆಯಿಲ್ ಮಿಲಗೆ  ಬೆಂಕಿ ಹತ್ತಿ ಉರಿದಿದೆ.

ಸ್ಥಳಕ್ಕೆ ಕೂಡಲೇ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ‌ ನಂದಿಸುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಯನ್ನು ನಂದಿಸಲು 5 ಗಂಟೆಗಳ ಕಾಲ ಬೇಕಾಯಿತು. 

ಸುಮಾರು 18 ರಿಂದ 20 ಲಕ್ಷ ಮೌಲ್ಯದ ಶೇಂಗಾ ಹಾಗೂ ಎಣ್ಣೆ ಸುಟ್ಟು ಭಸ್ಮವಾಗಿದೆ. 

ಬೆಂಕಿ ಕಾಣಿಸಿಕೊಂಡಿದ್ದು ನೋಡಿ ಸಾರ್ವಜನಿಕರು ಮಾಲೀರಿಗೆ  ಕರೆ ಮಾಡಿ ತಿಳಿಸಿದ್ದಾರೆ. 

ಅಗ್ನಿಶಾಮಕ ದಳದ ಅಧಿಕಾರಿಗಳಾದ ಮಂಜುನಾಥ ಕಲಾದಗಿ ಮಾತನಾಡಿ, ರಾತ್ರಿ 3 ಗಂಟೆಗೆ ಆಯಿಲ್ ಮಿಲ್ ನಲ್ಲಿ ಬೆಂಕಿ ಕಾಣಿಸಿ ಕೊಂಡಿರುವ ಸುದ್ದಿ ತಿಳಿತು. ಸುದ್ದಿಯನ್ನು ಕೇಳಿದ ತಕ್ಷಣ ನಾವು ಒಂದು ವಾಹನ ತೆಗೆದುಕೊಂಡು ಸ್ಥಳಕ್ಕೆ ಹೋದೆವು. ಅಲ್ಲಿ ಬೆಂಕಿ ಅತಿ ಹೆಚ್ಚು ಇತ್ತು. ನಂತರ ನಾವು ಇನ್ನೊಂದು ನಮ್ಮ ಅಗ್ನಿ ಜಲವಾಹನ ತಂದು 2 ವಾಹನದಿಂದ ಸತತವಾಗಿ 5 ರಿಂದ 6 ಗಂಟೆ ಕಾರ್ಯಾಚರಣೆ ನಡೆಸಿ 6 ರಿಂದ 8 ಸಲಾ ನೀರನ್ನು ತರಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದೇವೆ ಎಂದು ಹೇಳಿದರು. 


ಶ್ರೀ ಸಿದ್ದೇಶ್ವರ ಆಯಿಲ್ ಇಂಡಸ್ಟ್ರಿಜ್  ಮುಳ್ಳೂರ ಆಯಿಲ್ ಮಿಲ್ ಮಾಲಿಕರಾದ ಸಿದ್ದು ಮಲ್ಲಿಕಾರ್ಜುನ್  ಮುಳ್ಳೂರ ಅವರು ಮಾತನಾಡಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿದ್ದು ಸುಮಾರು 500 ಚಿಲ್  ಶೇಂಗಾ,  200 ಚಿಲ್ ಶೆಂಗಾ ಕಾಳೂ ಮತ್ತು ಎಣ್ಣೆ ಕೂಡಾ ಇತ್ತು ಸುಮಾರು 18 ರಿಂದ 20 ಲಕ್ಷ  ರೂಪಾಯಿ ವರಿಗೂ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು