ಇತ್ತೀಚಿನ ಸುದ್ದಿ
ಬಿಜೈ ಯುನಿಸೆಕ್ಸ್ ಸಲೂನ್ ದಾಳಿ ಪ್ರಕರಣ: ಪ್ರಸಾದ್ ಅತ್ತಾವರ ಬಂಧನ
23/01/2025, 17:41
ಮಂಗಳೂರು(reporterkarnataka.com): ನಗರದ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯಿರುವ ಯುನಿಸೆಕ್ಸ್ ಸಲೂನ್ ಗೆ ತಂಡವೊಂದು ಗುರುವಾರ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಸೇನೆಯ ಪ್ರಸಾದ್ ಅತ್ತಾವರ ಅವರನ್ನು ಬಂಧಿಸಲಾಗಿದೆ.
ದಾಳಿ ನಡೆಸಿದ ತಂಡ ಸೆಲೂನಿನ ಸಿಬ್ಬಂದಿಗಳಿಗೆ ಹಲ್ಲೆ ನಡೆಸಿ, ಅವಾಚ್ಯ ಪದಗಳಿಂದ ನಿಂದಿಸಿ ಪೀಠೋಕರಣಗಳಿಗೆ ಹಾನಿ ಮಾಡಿತ್ತು.
ಬಿಜೈಯ ಕಲರ್ಸ್ ಯುನಿಸೆಕ್ಸ್ ಸಲೂನ್ ಗೆ ಸುಮಾರು 9-10 ಅಪರಿಚಿತ ವ್ಯಕ್ತಿಗಳ ತಂಡ ಪ್ರವೇಶಿಸಿ ಸೆಲೂನಿನ ಪೀಠೋಕರಣಗಳಿಗೆ ಹಾನಿ ಮಾಡಿತ್ತು. ತಂಡವು ಅನೈತಿಕ ಚಟುವಟಿಕೆಗಳನ್ನು ಆರೋಪಿಸಿ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿತ್ತು. ಈ ವೇಳೆ ಇಬ್ಬರು ಸಿಬ್ಬಂದಿಯ ಮೇಲೂ ಹಲ್ಲೆಯೂ ನಡೆದಿತ್ತು. ಈ ಕುರಿತು ಸೆಲೂನ್ ಮಾಲಿಕರು ದೂರು ನೀಡಿದ್ದರು. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ.