1:27 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಬಸವಣ್ಣ ತಪೋಭೂಮಿ ಕೂಡಲ ಸಂಗಮದಲ್ಲಿ 2023ರ ಶರಣು ಮೇಳ: ಪ್ರಚಾರಕ್ಕೆ ಮಾತೆ ಗಂಗಾದೇವಿ ಆಗಮನ

20/12/2022, 18:40

ರಾಹುಲ್ ಅಥಣಿ ಬೆಳಗಾವಿ

info.reporterkarnataka.com

ದಯವಿಲ್ಲದ ಧರ್ಮವಾವುದಯ್ಯಾ..?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ..!
ದಯವೇ ಧರ್ಮದ ಮೂಲವಯ್ಯಾ..!

ಜಾತಿ,ಮತ,ಪಂಥ ಭೇದವಿಲ್ಲದೆ ಸರ್ವ ಧರ್ಮ ಸಮಾನತೆ ಸಾರುವ ವಿಶ್ವಗುರು ಬಸವಣ್ಣನವರ ತಪೋಭೂಮಿ ಐಕ್ಯಕ್ಷೇತ್ರ ಕೂಡಲಸಂಗಮದಲ್ಲಿ ಲಿಂಗಾಯತ ಧರ್ಮಿಯರ ವಾರ್ಷಿಕ ಪವಿತ್ರ ಸಮಾವೇಶ ಶರಣುಮೇಳ 2023 ಜನವರಿ 12ರಿಂದ14ರ ವರೆಗೆ ಜರುಗಲಿದೆ.


ಈ ಕಾರ್ಯಕ್ರಮದ ಪ್ರಯುಕ್ತ ಶರಣು ಮೇಳ ಸಮಿತಿಯ ಕಾರ್ಯದ್ಯಕ್ಷಿ ಪರಮಪೂಜ್ಯ ಶ್ರೀಮನ್ನಿರಂಜನ್ ಮಹಾಜಗದ್ಗುರು ಡಾ. ಮಾತೇ ಗಂಗಾದೇವಿಯವರು, ಮಾತೆ ಬಸವರತ್ನ ಮಾತಾಜಿ (ಸುಕ್ಷೇತ್ರ ಕೂಡಲಸಂಗಮ ಶರಣುಮೇಳ ಸಮಿತಿ ತಂಡ) ಪ್ರತಿ ಹಳ್ಳಿ ಹಳ್ಳಿಗೆ ತೆರಳಿ ಧರ್ಮ ಪ್ರಚಾರ ಹಾಗೂ ಬಸವೇಶ್ವರ ವೃತ್ತದ ಬಳಿ ಷಠಸ್ಥಲ ಧ್ವಜಾರೋಹಣ ನೆರವೇರಿಸಿ ಜಾಹೀರಾತು ನೀಡಿ ಶರಣುಮೇಳಕ್ಕೆ ಆಹ್ವಾನ ನೀಡುತ್ತಿದ್ದಾರೆ.

ಪ್ರಚಾರದ ಅಂಗವಾಗಿ ಇಂದು ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಪ್ರಚಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ತಾಂವಶಿ ಗ್ರಾಮದ ತಾಯಂದಿರು ಶರಣು ಬಂದುಗಳು ಬರುವಂತೆ ಆಮಂತ್ರಣ ನೀಡಿದರು.
ಡಾ. ಮಾತೆ ಗಂಗಾದೇವಿ ಮಾತನಾಡಿದರು. ಈ ಸಂದರ್ಭದಲ್ಲಿ ತಾಂವಶಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಶಿಕ್ಷಕರು ಊರಿನ ಶರಣು ಬಂದುಗಳು ತಾಯಂದಿರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು