ಇತ್ತೀಚಿನ ಸುದ್ದಿ
ಬಸವಣ್ಣನ ನಾಡು ವಿಜಯಪುರದಲ್ಲಿ ಮರ್ಯಾದಾ ಹತ್ಯೆ: ತಂದೆಯಿಂದಲೇ ಅಪ್ರಾಪ್ತ ಪುತ್ರಿ ಮತ್ತು ಆಕೆಯ ಪ್ರಿಯಕರ ಕೊಲೆ
22/06/2021, 22:28
ವಿಜಯಪುರ(reporterkarnataka news): ಬಸವಣ್ಣನ ನಾಡಿನಲ್ಲಿ ಘನಘೋರ ಕೃತ್ಯ ನಡೆದಿದೆ. ಇಬ್ಬರು ಅಪ್ರಾಪ್ತ ವಯಸ್ಸಿನ ಪ್ರೇಮಿಗಳನ್ನು ಹತ್ಯೆ ಮಾಡಲಾಗಿದೆ. ಮರ್ಯಾದೆಯ ಹೆಸರಿನಲ್ಲಿ ಮರ್ಯಾದೆಗೇಡು ಕೃತ್ಯವನ್ನು ಮಂಗಳವಾರ ಎಸಗಲಾಗಿದೆ.
ವಿಜಯಪುರ ಜಿಲ್ಲೆಯ ದೇವರ ಹುಪ್ಪರಗಿಯ ಕಲಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ತಂದೆಯೇ ಈ ಕೃತ್ಯ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ಸಲಾದಹಳ್ಳಿ ಗ್ರಾಮದ ಬಸವರಾಜ ಬಡಿಗೇರಿ ಹಾಗೂ ಅಪ್ರಾಪ್ತ ವಯಸ್ಸಿನ ಬಾಲಕಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಜಾತಿಯೂ ಬೇರೆಯಾಗಿತ್ತು. ಬಸವರಾಜ ಬಡಿಗೇರಿಗೆ 18 ವರ್ಷವಾದರೆ, ಬಾಲಕಿಗೆ 16 ವರ್ಷ. ಇವರ ಪ್ರೀತಿಗೆ ಬಾಲಕಿಯ ತಂದೆಯ ವಿರೋಧವಿತ್ತು. ಹುಡುಗನ ಜತೆ ಸಲುಗೆಯಿಂದ ಇರದಂತೆ ಬಾಲಕಿಗೆ ಆಕೆಯ ಅಪ್ಪ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದ. ಮಂಗಳವಾರ ಇಬ್ಬರು ಪ್ರೇಮಿಗಳು ಜತೆಯಾಗಿ ಇರುವುದನ್ನು ಕಂಡು ಕ್ರೋಧಗೊಂಡ ಬಾಲಕಿಯ ತಂದೆ ತನ್ನ ಪುತ್ರಿ ಮತ್ತು ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ್ದಾನೆ.