ಇತ್ತೀಚಿನ ಸುದ್ದಿ
ಬರೇ 5 ತಾಸಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭಾವಶಿಲ್ಪ!: ವಿಶ್ವಕರ್ಮ ಆಚಾರ್ಯ ಕೈಚಳಕ!!
02/11/2021, 09:48
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಭಾವಶಿಲ್ಪ ನಿರ್ಮಿಸಿ ಕಲಾವಿದರೊಬ್ಬರು ಗಮನ ಸೆಳೆದಿದ್ದಾರೆ. ಇದರಲ್ಲೇನು ವಿಶೇಷವೆಂದರೆ ಬರೇ 5 ತಾಸಿನಲ್ಲಿ ಮಣ್ಣಿನ ಕಲಾಕೃತಿ ರಚಿಸಿದ್ದಾರೆ.
ಚಿಕ್ಕಮಗಳೂರು ಕಲಾ ಕಾಲೇಜಿನ ಪ್ರಾಂಶುಪಾಲರಾದ ವಿಶ್ವಕರ್ಮ ಆಚಾರ್ಯ ಅವರು ಭಾವಶಿಲ್ಪ ರಚಿಸಿದ್ದಾರೆ.
ಕನ್ನಡಕ್ಕಾಗಿ ನಾವು ಕಾರ್ಯಕ್ರಮಕ್ಕೆ ಬೆಂಗಳೂರಿಗೆ ತೆರಳಿದ್ದ ವಿಶ್ವಕರ್ಮ ಆಚಾರ್ಯ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾವಶಿಲ್ಪವನ್ನು ನಿರ್ಮಿಸಿದ್ದಾರೆ.
ಪುನೀತ್ ಕಲಾಕೃತಿ ರಚಿಸುವ ಮೂಲಕ ಅಗಲಿದ. ಮಹಾನ್ ನಟನಿಗೆ ಭಾವನಮನ ಸಲ್ಲಿಸಿದ್ದಾರೆ.