ಇತ್ತೀಚಿನ ಸುದ್ದಿ
ಬಂಟ್ವಾಳ ವೆಂಕಟರಮಣ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಉದ್ಘಾಟನೆ
04/12/2021, 21:54

ವರದಿ/ಚಿತ್ರ :ಅನುಷ್ ಪಂಡಿತ್ ಮಂಗಳೂರು
ಬಂಟ್ವಾಳ(reporterkarnataka.com):
ಬಂಟ್ವಾಳ ವೆಂಕಟರಮಣ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಉದ್ಘಾಟನಾ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಜರುಗಿತು.
ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ.ಎ. ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ರಾಷ್ಟ್ರೀಯ ಸೇವಾ ಯೋಜನೆಯ ಲಾಂಛನ ಚಕ್ರದಂತೆ ನಿರಂತರವಾಗಿ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕು ಹಾಗೂ ಸಾಮಾಜಮುಖಿಯಾಗಿ ಬೆಳೆಯಲು ರಾ. ಸೆ. ಯೋ ಉತ್ತಮ ವೇದಿಕೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲ್ ಡಾ. ಸುಯೋಗ ವರ್ಧನ್ ಮಾತನಾಡಿ, ರಾ.ಸೆ.ಯೋ ವಿಶೇಷ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಾಸನಕ್ಕೆ ನಾಂದಿಯಾಗುತ್ತದೆ. ರಾ. ಸೆ.ಯೋ. ಸಮಾಜಕ್ಕೆ ಸಹಬಾಳ್ವೆಯನ್ನು ಸಾರಿ ಹೇಳುತ್ತದೆ ಎಂದರು.
ರಾ.ಸೆ.ಯೋ ಯೋಜನಾಧಿಕಾರಿಗಳಾದ ಡಾ.ವಿನಾಯಕ ಕೆ.ಎಸ್., ಸುಪ್ರೀತ್ ಕಡಕೋಲ್ ಉಪಸ್ಥಿತರಿದ್ದರು.