1:52 AM Friday25 - July 2025
ಬ್ರೇಕಿಂಗ್ ನ್ಯೂಸ್
Chikkamagaluru | ಕಳಸ: ಭದ್ರಾ ನದಿಯಲ್ಲಿ ಸತತ 23 ತಾಸುಗಳ ಶೋಧ ಬಳಿಕ… ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಡತ ಕಳವು ಪ್ರಕರಣ: ಗುತ್ತಿಗೆ ಸಿಬ್ಬಂದಿ ಕೈಚಳಕ ಸಿಸಿಟಿವಿ… Kodagu | ಕೊಡಗಿನಲ್ಲಿ ಮತ್ತಷ್ಟು ಬಿರುಸುಗೊಂಡ ಮಳೆ: ಹಲವೆಡೆ ರಸ್ತೆಗೆ ಉರುಳಿದ ಮರಗಳು;… ಕಳಸ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಭದ್ರಾ ನದಿಗೆ ಹಾರಿದ ಜೀಪ್; 23ರ… ಮೈಸೂರು ದಸರಾ: ಜಂಬೂ ಸವಾರಿಯ ಮೊದಲ ಹಂತದ ಸಾಕಾನೆಗಳ ಪಟ್ಟಿ ಬಿಡುಗಡೆ Kodagu | ಬಿರುಸಿನ ಮಳೆ: ಕೊಡಗು ಜಿಲ್ಲೆಯಲ್ಲಿ ನಾಳೆ ಶಾಲೆ, ಪಿಯು ಕಾಲೇಜುಗಳಿಗೆ… ಬಿಜೆಪಿ ನಡೆಸಿರುವ ಅಕ್ರಮವೇ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣ ಎನ್ನುವ ಸತ್ಯ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಎಸ್ ಐಟಿಯಿಂದ ಹಿರಿಯ ಐಪಿಎಸ್ ಅಧಿಕಾರಿ ಸೌಮ್ಯಲತಾ… ನೇಣು ಬಿಗಿದ ಸ್ಥಿತಿಯಲ್ಲಿ ಶಿಕ್ಷಕಿಯ ಮೃತದೇಹ ಪತ್ತೆ: ಕೊಲೆ ಶಂಕೆ; ಕುಟುಂಬಸ್ಥರಿಂದ ದೂರು ಇಡೀ ಮಲೆನಾಡು ಪ್ರದೇಶದಲ್ಲಿ ಪ್ರಮುಖ ಆರೋಗ್ಯ ಕೇಂದ್ರವನ್ನಾಗಿ ಶಿವಮೊಗ್ಗ ಅಭಿವೃದ್ಧಿ: ಸಚಿವ ಡಾ.…

ಇತ್ತೀಚಿನ ಸುದ್ದಿ

Bangaluru | “ಸಿಗ್ನೇಚರ್ ಫ್ರೇಗ್ರನ್ಸ್”: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ವಿಶೇಷ ಸುಗಂಧದ ಅನುಭವ

24/07/2025, 21:17

ಬೆಂಗಳೂರು(reporterkarnataka.com): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌2 ರಲ್ಲಿ ಪ್ರಯಾಣಿಕರ ಪ್ರಯಾಣವನ್ನು ಇನ್ನಷ್ಟು ಮಧುರಗೊಳಿಸಲು ವಿಶೇಷ ಸುಗಂಧ ಹೊರಸೂಸುವ ಅನನ್ಯವಾದ “ಡ್ಯಾನ್ಸಿಂಗ್ ಬ್ಯಾಂಬೂ” ವನ್ನು ಪರಿಚಯಿಸಲಾಗಿದೆ. ಏರೋಮ್ ಸಹಯೋಗದೊಂದಿಗೆ ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿರುವ ಈ ಸುಮಧುರ ಸುಗಂಧದಿಂದ ಪ್ರಯಾಣಿಕರು ತಮ್ಮ ಒತ್ತಡವನ್ನು ಮರೆತು ಶಾಂತಚಿತ್ತದಿಂದ ಪ್ರಯಾಣಿಸಬಹುದಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಚೆಕ್-ಇನ್, ಆಗಮನ ಪ್ರದೇಶ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸುಗಂಧದ ಅನುಭವವನ್ನು ಪ್ರಯಾಣಿಕರು ಅನುಭವಿಸಬಹುದಾಗಿದೆ. ಜೊತೆಗೆ, ವಿಮಾನ ನಿಲ್ದಾಣವನ್ನು ನಿರ್ಗಮಿಸಿದ ಬಳಿಕವೂ ಈ ಅನುಭವ ಪ್ರಯಾಣಿಕರ ಮನದಲ್ಲಿ ಹಾಗೆಯೇ ಉಳಿಯಲಿದೆ.
ಪ್ರಪಂಚದಾದ್ಯಂತದ ವಿಮಾನ ನಿಲ್ದಾಣಗಳು ಕೇವಲ ಪ್ರಯಾಣಕ್ಕಷ್ಟೇ ಸೀಮಿತವಾಗದೇ, ಅದಕ್ಕೂ ಮೀರಿ ವಿಕಸನಗೊಳ್ಳುತ್ತಿವೆ. ಅದೇ ರೀತಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಭಾವನೆ, ಪರಿಚಿತತೆ ಮತ್ತು ಸ್ಮರಣೆಯಿಂದ ಪ್ರಯಾಣಿಕರಲ್ಲಿ ಪ್ರಯಾಣ ವ್ಯಾಖ್ಯಾನವನ್ನು ಮರುಕಲ್ಪಿಸುತ್ತಿದೆ. ಪ್ರಸ್ತುತ ಪ್ರಾರಂಭಿಸಲಾದ ಹೊಸ ವೈಶಿಷ್ಟ್ಯವು ಟರ್ಮಿನಲ್‌ 2ರ ಒಟ್ಟಾರೆ ಅನುಭವಕ್ಕೆ ಇನ್ನಷ್ಟು ಪೂರಕವಾಗಿರಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಪ್ರತಿ ಪ್ರಯಾಣಿಕರ ಆಗಮನ ಮತ್ತು ನಿರ್ಗಮನದಲ್ಲಿ ಹೆಚ್ಚು ಪರಿಚಿತ, ಜಾಗತಿಕ ಮತ್ತು ಐಷಾರಾಮಿಯ ಅನುಭವ ಒದಗಿಸಲು ಈ ಸುಗಂಧದ ಸಿಗ್ನೇಚರ್‌ ಹೆಚ್ಚು ಪರಿಣಾಮಕಾರಿಯಾಗಲಿದೆ. ಜೊತೆಗೆ, ವಿಮಾನ ನಿಲ್ದಾಣದ ಗದ್ದಲದ ನಡುವೆ ಪ್ರಯಾಣದ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಜೊತೆಗೆ, ಅತ್ಯಾಧುನಿಕತೆ ಮತ್ತು ಶಾಂತ ಐಷಾರಾಮಿ ವಾತಾವರಣವನ್ನು ಸೃಷ್ಟಿಸುತ್ತದೆ.
” ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಶಾಲಿನಿ ರಾವ್‌ ಅವರು ಮಾತನಾಡಿ, “ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ, ನಾವು ಪ್ರತಿ ಪ್ರಯಾಣವನ್ನು ಕೇವಲ ನಿರ್ಗಮನ ಅಥವಾ ಆಗಮನಕ್ಕಿಂತ ಹೆಚ್ಚಿನದಾಗಿ ನೋಡುತ್ತೇವೆ. ನಮ್ಮ ಪ್ರಯಾಣಿಕರೊಂದಿಗೆ ಆಳವಾದ ಸಂಪರ್ಕ ಸಾಧಿಸುವ ಹಾಗೂ ಅರ್ಥಪೂರ್ಣ ಅನುಭವಗಳನ್ನು ಸೃಷ್ಟಿಸುವ ಅವಕಾಶ ನಿರ್ಮಿಸಲು ಪ್ರಯತ್ನಿಸುತ್ತೇವೆ. ವಿಶಿಷ್ಟ ಸುಗಂಧವನ್ನು ಟರ್ಮಿನಲ್‌ 2ರಲ್ಲಿ ಪರಿಚಯಿಸುವ ಮೂಲಕ, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಅನುಭವವನ್ನು ಇನ್ನಷ್ಟು ಸಂವೇದನಾಶೀಲಗೊಳಿಸುವ ಉದ್ದೇಶವನ್ನು ಹೊಂದಿದ್ದೇವೆ. ಪ್ರಶಾಂತ, ಪ್ರಕೃತಿಯಲ್ಲಿ ಸಮ್ಮಿಲನಗೊಂಡ ಮತ್ತು ಐಷಾರಾಮಿ ಅನುಭವದ ಸಂಪೂರ್ಣತೆಯನ್ನು ಪ್ರಯಾಣಿಕರು ಅನುಭವಿಸಬಹುದಾಗಿದೆ” ಎಂದು ತಿಳಿಸಿದರು.
ಈ ಸುಗಂಧವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಬ್ರ್ಯಾಂಡ್‌ಗೆ ಹೊಸ ಆಯಾಮವನ್ನು ಸೇರಿಸುವ ಜೊತೆಗೆ, ವಿಮಾನ ನಿಲ್ದಾಣದ ಸಂಸ್ಕೃತಿ ಮತ್ತು ಅಸ್ಮಿತೆಯೊಂದಿಗೆ ಪ್ರತಿಧ್ವನಿಸಲಿದೆ. ನಮ್ಮ ಎಫ್‌&ಬಿ, ಚಿಲ್ಲರೆ ವ್ಯಾಪಾರ, ವೈಯಕ್ತಿಕಗೊಳಿಸಿದ ಲೌಂಜ್ ಸೇವೆಗಳು, ಕಲೆ ಅಥವಾ ಆಕರ್ಷಣೀಯ ಪರಿಸರದ ಮೂಲಕ ಪ್ರಯಾಣಿಸುವ ಪ್ರಯಾಣಿಕರು ಈಗಾಗಲೇ ಸಂತೃಪ್ತರಾಗಿದ್ದಾರೆ. ಇದೀಗ ಈ ಸುಗಂಧದ ಮೂಲಕ ಈ ಎಲ್ಲ ಸಂತೋಷದಾಯಕ ಕ್ಷಣಗಳು ಸ್ಮರಣೀಯವಾಗಲಿವೆ.”

ಇತ್ತೀಚಿನ ಸುದ್ದಿ

ಜಾಹೀರಾತು