ಇತ್ತೀಚಿನ ಸುದ್ದಿ
Bangaluru | ಫಿಲಿಪೈನ್ಸ್ ಅಧ್ಯಕ್ಷ ಪರ್ಡಿನ್ಯಾಂಡ್ ರೊಮುಡ್ಜ್ ಮಾರ್ಕೋಸ್ ಜ್ಯೂನಿಯರ್ ಬೆಂಗಳೂರು ಭೇಟಿ
07/08/2025, 21:25

ಬೆಂಗಳೂರು(reporterkarnataka.com): ಫಿಲಿಪೈನ್ಸ್ ಗಣರಾಜ್ಯದ ಗೌರವಾನ್ವಿತ ಅಧ್ಯಕ್ಷರಾದ ಪರ್ಡಿನ್ಯಾಂಡ್ ರೊಮುಡ್ಜ್ ಮಾರ್ಕೋಸ್ ಜ್ಯೂನಿಯರ್, ಫಿಲಿಪೈನ್ಸ್ ದೇಶದ ಪ್ರಥಮ ಮಹಿಳೆ ಲೂಯಿಸ್ ಅರ್ನೆಟಾ ಮಾರ್ಕೋಸ್ ಅವರು ತಮ್ಮ ದೇಶದ ನಿಯೋಗದೊಂದಿಗೆ ಇಂದು ಬೆಂಗಳೂರಿಗೆ ಭೇಟಿ ನೀಡಿದರು.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಸಾಕ್ಷರತಾ ಮತ್ತು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತುಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಡಾ.ಆರತಿ ಕೃಷ್ಣ ಅವರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಗೌರವ ಗುಪ್ತ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಎ.ಬಿ. ಬಸವರಾಜು, ಬೆಂಗಳೂರು ಪ್ರಾದೇಶಿಕ ಪಾಸ್ ಪೋರ್ಟ್ ಅಧಿಕಾರಿಗಳು ಹಾಗೂ ಫಿಲಿಪೈನ್ಸ್ ರಾಯಭಾರಿ ಕಚೇರಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.