ಇತ್ತೀಚಿನ ಸುದ್ದಿ
Bangalore | ನಿವೃತ್ತ ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ಬರ್ಬರ ಹತ್ಯೆ: ಕೈಹಿಡದ ಪತ್ನಿಯಿಂದಲೇ ಕೃತ್ಯ!
20/04/2025, 20:00

ಬೆಂಗಳೂರು(reporterkarnataka.com): ರಾಜ್ಯ ಪೊಲೀಸ್ ಇಲಾಖೆ ನಿವೃತ್ತ ಅಧಿಕಾರಿ ಓಂ ಪ್ರಕಾಶ್ ಅವರನ್ನು ಭಾನುವಾರ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಸಂಜೆ ಘಟನೆ ನಡೆದಿದೆ.
ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ ಅವರೇ ಈ ಕೃತ್ಯ ಎಸಗಿದ್ದಾರೆ. ಪತಿಯ ಬರ್ಬರವಾಗ ಹತ್ಯೆ ಎಸಗಿದ ಬಳಿಕ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
68 ವರ್ಷದ ಓಂ ಪ್ರಕಾಶ್ ಅವರು ನಿವೃತ್ತಿಯ ಬಳಿಕ ಬೆಂಗಳೂರಿನ ಮನೆಯಲ್ಲಿ ವಾಸವಾಗಿದ್ದರು. ಪತ್ನಿಯ ಜತೆ ಮನಸ್ತಾಪವಿತ್ತು. ಮಾನಸಿಕ ಸ್ಥಿಮಿತತೆ ಕಳೆದುಕೊಂಡ ಪತ್ನಿ ಭಾನುವಾರ ಸಂಜೆ ಓಂ ಪ್ರಕಾಶ್ ಅವರನ್ನು ಕೊಲೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆಯ ಕುರಿತು ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಪ್ರಕರಣ ದಾಖಲಾಗಿದೆ.