ಇತ್ತೀಚಿನ ಸುದ್ದಿ
ಭಾರಿ ಮಳೆ: ಆಗುಂಬೆ ಬಳಿಯ ಕಾರ್ ಬೈಲು ಗುಡ್ಡ ಕುಸಿತ
04/09/2024, 21:36
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಭಾರಿ ಮಳೆಯಿಂದ ತೀರ್ಥಹಳ್ಳಿ ತಾಲೂಕಿನಲ್ಲಿ ಗುಡ್ಡ ಕುಸಿತ ಪ್ರಕರಣಗಳುರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರುವನಡುವೆ ಮತ್ತೊಂದು ಗುಡ್ಡ ಕುಸಿದಿದೆ.
ತಾಲೂಕಿನ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ ಬೈಲು ಗುಡ್ಡ ಕುಸಿದಿದೆ. ಸೋಮವಾರ ರಾತ್ರಿ ಭಾರೀ ಶಬ್ದದಿಂದ ಗುಡ್ಡ ಕುಸಿದ ಬಗ್ಗೆ ಸ್ಥಳೀಯರು ಹೇಳಿದ್ದಾರೆ. ಸುತ್ತಮುತ್ತಲೂ ಗದ್ದೆ, ತೋಟ, ಹಾಗೂ ವಾಸದ ಮನೆ ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.
ತೀರ್ಥಹಳ್ಳಿ- ಆಗುಂಬೆ ರಾಷ್ಟ್ರೀಯ ಹೆದ್ದಾರಿ ಮಾರ್ಗ ಮಧ್ಯೆ ಇರುವ ಬಿಳಚಿಕಟ್ಟೆಯಿಂದ ಗುಡ್ಡ ಜರಿತವನ್ನು ವೀಕ್ಷಿಸಬಹುದು. ಕಲ್ಲು
ಬಂಡೆಯ ಮೇಲೆ ಇದ್ದ ಮಣ್ಣು, ಗಿಡ ಮರಗಳು ಅಂದಾಜು 50 ಅಡಿ ಕುಸಿದಿವೆ. ಸುತ್ತಮುತ್ತ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ.ಅತಿಯಾದಮಳೆಯಿಂದ ಗುಡ್ಡ ಕುಸಿದಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.