ಇತ್ತೀಚಿನ ಸುದ್ದಿ
ಬಾ.. ಅಂದ್ರೆ ಓಡೋಡಿ ಹತ್ತಿರ ಬರುತ್ತೆ, ಹೋಗು ಅಂದ್ರೆ ಹಿಂದಕ್ಕೆ ಸರಿಯುತ್ತೆ!!: ಇದು ಮುದ್ದಾದ ಮರಿ ಕಾಡಾನೆ ಕತೆ!
31/07/2023, 11:51

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬಾ ಅಂದ್ರೆ ಓಡೋಡಿ ಹತ್ತಿರ ಬರುತ್ತೆ. ಹೋಗು ಅಂದ್ರೆ ಹಿಂದಕ್ಕೆ ಸರಿಯುತ್ತೆ. ಇದು ಮುದ್ದಾದ ಮರಿ ಕಾಡಾನೆಯ ಕತೆ.
ಇದು ತಾಯಿಯ ಗುಂಪಿನಿಂದ ತಪ್ಪಿಸಿಕೊಂಡು ಒಂಟಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ-ಬೇಲೂರು ರಸ್ತೆಯ ಚೀಕನಹಳ್ಳಿ ಬಳಿ ಈ ಘಟನೆ ನಡೆದಿದೆ. ಪುಟ್ಟ…ಪುಟ್ಟ… ಹೆಜ್ಜೆ ಇಟ್ಕೊಂಡು ಇದು ಅಮ್ಮನಿಗಾಗಿ ಪರಿತಪ್ಪಿಸ್ತಿದೆ. ದಿಕ್ಕುತೋಚದೆ ಕಾಫಿತೋಟದಲ್ಲಿ ಅತ್ತಿಂದಿತ್ತ ಓಡಾಡ್ತಿದೆ. ಜನರು ಕರೆದ ಕೂಡಲೇ ಹತ್ತಿರ ಬರುತ್ತದೆ. ಹೋಗು ಅಂದ್ರೆ ಹಿಂದಕ್ಕೆ ಹೋಗುತ್ತದೆ. ಮಕ್ಕಳಂತೆ ಹೇಳಿದ ಮಾತು ಕೇಳುತ್ತದೆ.
ಗುಂಪಿನಿಂದ ಬೇರ್ಪಟ್ಟ ಮರಿಯನ್ನ ಆನೆಗಳ ಗುಂಪು ಹತ್ತಿರ ಸೇರಿಸಲ್ಲ. ನೀರು ಕೊಟ್ಟಿ,ಮರಿ ಆನೆಯನ್ನ ಅರಣ್ಯ ಅಧಿಕಾರಿಗಳು ಸಂತೈಸಿದ್ದಾರೆ. ಆನೆಯನ್ನು ಅದರ ಅಮ್ಮ ಬಳಿ ಸೇರಿಸಲು ಅರಣ್ಯ ಅಧಿಕಾರಿಗಳ ಪರದಾಡುತ್ತಿದ್ದಾರೆ. ಮೂಡಿಗೆರೆ-ಸಕಲೇಶಪುರ ಗಡಿಯಲ್ಲಿ ಬೀಡುಬಿಟ್ಟಿರೋ ಕಾಡಾನೆಗಳ ತಂಡದ ಮರಿ ಇರಬಹುದು ಎಂದು ಅಧಿಕಾರಿಗಳಿಗೆ ಶಂಕೆ ವ್ಯಕ್ತಪಡಿಸಿದ್ದಾರೆ.