7:16 AM Wednesday17 - December 2025
ಬ್ರೇಕಿಂಗ್ ನ್ಯೂಸ್
1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು

ಇತ್ತೀಚಿನ ಸುದ್ದಿ

ಆಟೋ ಚಾಲಕರುಗಳಲ್ಲಿ ಗೊಂದಲ ಬೇಡ, ನಾನು ಯಾವುದೇ ರೀತಿಯ ಆದೇಶವನ್ನು ಹೊರಡಿಸಿಲ್ಲ: ಜಿಲ್ಲಾಧಿಕಾರಿ

30/08/2024, 10:39

ಮಂಗಳೂರು(reporterkarnataka.com): ಕೇಂದ್ರ ಮೋಟರ್ ಸೈಕಲ್ ಕಾಯ್ದೆ ಸೆಕ್ಷನ್ 66-1ರ ಪ್ರಕಾರ ಇ-ಆಟೋರಿಕ್ಷಾಗಳಿಗೆ ಯಾವುದೇ ರೀತಿಯ ನಿರ್ಬಂಧ, ಕಾನೂನುಗಳನ್ನು ಜಾರಿಗೊಳಿಸುವ ಅಧಿಕಾರ ನಮಗೆ ಇಲ್ಲ. ಜಿಲ್ಲೆಯಲ್ಲಿನ ಆಟೋರಿಕ್ಷಾ ಚಾಲಕರುಗಳಲ್ಲಿ ಗೊಂದಲಗಳಿದ್ದು, ನಾನು ಯಾವುದೇ ರೀತಿಯ ಆದೇಶವನ್ನು ಹೊರಡಿಸಿಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸ್ಪಷ್ಟಪಡಿಸಿದರು.
ಅವರು ತಮ್ಮ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ನಾವು ಇಲ್ಲಿ 1993-94 ರಿಂದಲೂ ಅನ್ವಯವಾಗಿರುವ ಆದೇಶದಂತೆ ನಡೆದುಕೊಂಡು ಬರುತ್ತಿದ್ದು, ಇಲ್ಲಿಯ ತನಕ ಯಾವುದೇ ರೀತಿಯ ಬದಲಾವಣೆಗಳನ್ನು ತಂದಿಲ್ಲ. ಈ ಮೊದಲು ಎಲ್‌ಪಿಜಿ-ಸಿಎನ್‌ಜಿ ಆಟೋ ರಿಕ್ಷಾ ಚಾಲಕರ ಹಿತ ದೃಷ್ಠಿಯಿಂದ ಈ ಹಿಂದಿನ ಜಿಲ್ಲಾಧಿಕಾರಿಗಳು ರಾಜ್ಯ ಮೋಟರ್ ಸೈಕಲ್ ಕಾಯ್ದೆ 115ರ ಪ್ರಕಾರ ವಲಯ-1, ವಲಯ-2 ಎಂದು ವಿಭಜಿಸಿದ್ದು, ಇತ್ತೀಚೆಗೆ ಬಂದಂತಹ ಇ-ಅಟೋ ರಿಕ್ಷಾಗಳು ಈ ನಿಯಮವನ್ನು ಪಾಲಿಸಿದ್ದು, ಇಷ್ಟೆಲ್ಲ ಗೊಂದಲಗಳಿಗೆ ಕಾರಣವಾಗಿದೆ ಎಂದು ಹೇಳಿದರು.
ಕೇಂದ್ರ ಮೋಟರ್ ಸೈಕಲ್ ಕಾಯ್ದೆ ಸೆಕ್ಷನ್ 66-1ರಲ್ಲಿಯೇ ಇ-ಆಟೋ ರಿಕ್ಷಾಗಳಿಗೆ ರಿಯಾಯಿತಿಯನ್ನು ನೀಡಿದ್ದು, ನಾವು ಯಾವುದೇ ರೀತಿಯ ಆದೇಶ, ಕಾನೂನು, ನಿಯಮಗಳನ್ನು ಹೊರಿಸಲು ಸಾಧ್ಯವಿಲ್ಲ. ನಾವು ಯಾವುದೇ ನಿಯಮ ಮಾಡಬೇಕಾದರೂ ರಾಜ್ಯ ಮೋಟರ್ ಸೈಕಲ್ ಕಾಯ್ದೆ 115 ರ ಅಡಿಯಲ್ಲಿ ನಿಯಮ ಮಾಡಬೇಕು ಆದರೆ ಅವರಿಗೆ ಸೆಕ್ಷನ್ 66-1 ರಲ್ಲಿಯೇ ರಿಯಾಯಿತಿ ಇರುವುದರಿಂದ ನಾವು ಏನನ್ನು ಮಾಡಲು ಬರುವುದಿಲ್ಲ ಎಂದರು.
ಎಲ್‌ಪಿಜಿ-ಸಿಎನ್‌ಜಿ ಆಟೋ ರಿಕ್ಷಾ ಚಾಲಕರು ಮತ್ತು ಇ-ಆಟೋ ರಿಕ್ಷಾ ಚಾಲಕರು ಹೈಕೋರ್ಟ್‌ಗೆ ಹೋಗಿದ್ದು, ಹೈಕೋರ್ಟ್ ಕೇಂದ್ರ ಮೋಟರ್ ಸೈಕಲ್ ಕಾಯ್ದೆಯನ್ನು ಎತ್ತಿ ಹಿಡಿದುದ್ದು, ಅದರ ಆದೇಶದಂತೆ ನಾವು ನಿರ್ದೇಶನವನ್ನು ನೀಡಿದ್ದೆವೆಯೇ ಹೊರತು ಯಾವುದೇ ರೀತಿಯಲ್ಲಿಯೂ ಇ-ಆಟೋ ರಿಕ್ಷಾ ಚಾಲಕರ ಪರವಾಗಿ ನಾವು ನಿರ್ದೇಶನವನ್ನು ನೀಡಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು